ಕಬ್ಬಿನ ಗದ್ದೆಯಲ್ಲಿತ್ತು ದೈತ್ಯ ಹೆಬ್ಬಾವು! ಅದರ ಉದ್ದ ಕೇಳಿದ್ರೆ ಶಾಕ್ ಆಗ್ತೀರ!

ಜಮೀನಿನಲ್ಲಿ ಕೆಲಸ ಮಾಡುವಾಗ ಸುಮಾರು 15 ಅಡಿ ಉದ್ದದ ಹೆಬ್ಬಾವನ್ನು ಕಂಡು ಭಯವಾಯಿತು. ಕೂಡಲೇ ಇತರ ಗ್ರಾಮಸ್ಥರಿಗೆ ಮಾಹಿತಿ ನೀಡಿ ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಲಾಯಿತು ಎಂದು ರೈತ ಜ್ಞಾನೇಂದ್ರ ತಿವಾರಿ ತಿಳಿಸಿದ್ದಾರೆ.

Updated: Oct 25, 2019 , 05:15 PM IST
ಕಬ್ಬಿನ ಗದ್ದೆಯಲ್ಲಿತ್ತು ದೈತ್ಯ ಹೆಬ್ಬಾವು! ಅದರ ಉದ್ದ ಕೇಳಿದ್ರೆ ಶಾಕ್ ಆಗ್ತೀರ!

ಹಾಪುರ: ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಬೃಹತ್ ಹೆಬ್ಬಾವನ್ನು ಅಲ್ಲಿದ್ದ ರೈತರು ಗಾಬರಿಗೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. 

ಜಮೀನಿನಲ್ಲಿ ಕೆಲಸ ಮಾಡುವಾಗ ಸುಮಾರು 15 ಅಡಿ ಉದ್ದದ ಹೆಬ್ಬಾವನ್ನು ಕಂಡು ಭಯವಾಯಿತು. ಕೂಡಲೇ ಇತರ ಗ್ರಾಮಸ್ಥರಿಗೆ ಮಾಹಿತಿ ನೀಡಿ ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಲಾಯಿತು. ಬಳಿಕ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹೆಬ್ಬಾವನ್ನು ರಕ್ಷಿಸಿ ನದಿಗೆ ಬಿಡಲಾಯಿತು ಎಂದು ರೈತ ಜ್ಞಾನೇಂದ್ರ ತಿವಾರಿ ತಿಳಿಸಿದ್ದಾರೆ.

ಸುಮಾರು 15 ಅಡಿ ಉದ್ದ ಮತ್ತು 70 ಕೆ.ಜಿ. ತೂಕವಿದ್ದ ಬೃಹತ್ ಹೆಬ್ಬಾವನ್ನು ಸುಮಾರು ಐದು ಜನರ ರಕ್ಷಣಾ ತಂಡ ಹಿಡಿದು, ಹಾವನ್ನು ರಕ್ಷಿಸಿ ನದಿಗೆ ಬಿಟ್ಟಿದ್ದಾರೆ ಎಂದು ಅರಣ್ಯ ಇಲಾಖೆ ರೇಂಜರ್ ಪ್ರತಾಪ್ ಸೈನಿ ಹೇಳಿದ್ದಾರೆ.