ದೆಹಲಿಯ ಬವಾಣಾ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಅವಘಡಕ್ಕೆ 17 ಜನರು ಬಲಿ

     

Last Updated : Jan 21, 2018, 12:11 PM IST
ದೆಹಲಿಯ ಬವಾಣಾ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಅವಘಡಕ್ಕೆ 17 ಜನರು ಬಲಿ title=

ನವದೆಹಲಿ: ದೆಹಲಿಯ ಹೊರವಲಯದ  ಬಾವಣ ಕೈಗಾರಿಕಾ ಪ್ರದೇಶದಲ್ಲಿ ಎರಡು ಅಂತಸ್ತಿನ ಕಾರ್ಖಾನೆಯಲ್ಲಿ  ಬೆಂಕಿ ಹೊತ್ತಿಕೊಂಡ ಪರಿಣಾಮ  ಹದಿನೇಳು ಮಂದಿ ಮೃತಪಟ್ಟಿದ್ದಾರೆ ಎಂದು ದೆಹಲಿ ಅಗ್ನಿಶಾಮಕದಳ ತಿಳಿಸಿದೆ. ಈ ಅವಘಡದಲ್ಲಿ  ಪೊಲೀಸರು ಈವರೆಗೆ ಒಂಭತ್ತು ಜನರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.

ಕಾರ್ಖಾನೆಯಲ್ಲಿ ಹೊತ್ತಿಕೊಂಡ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.ಇನ್ನು ಹೆಚ್ಚಿನ ಜನರನ್ನು ಕಾರ್ಖಾನೆಯೊಳಗೆ ಸಿಕ್ಕಿಹಾಕಿಕೊಂಡಿರುವ ಶಂಕೆಯಿರುದರಿಂದ ರಕ್ಷಣಾ ಕಾರ್ಯಚರಣೆ ಇನ್ನು ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ಅಗ್ನಿಶಾಮಕ ದಳ ಕಾರ್ಖಾನೆಯಲ್ಲಿ ಬೆಂಕಿ ಹತ್ತಿರುವ ಸಂಗತಿಯ ಕುರಿತಾಗಿ ಬೆಳಗ್ಗೆ  ಸುಮಾರು 6.20 ಕ್ಕೆ ಕರೆ ಬಂದಿತು ತಕ್ಷಣ ಕಾರ್ಯಪ್ರವೃತ್ತರಾಗಿ 10 ನಂದಿಸುವ ವಾಹನಗಳನ್ನು  ಸ್ಥಳಕ್ಕೆ ಕರೆದೊಯ್ಯಲಾಯಿತು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಖಾನೆಯ ಸಿಬ್ಬಂಧಿ ಪ್ರಕಾರ ಎರಡನೇ ಮಹಡಿಯಲ್ಲಿ ಒಂದು ರಬ್ಬರ್ ಫ್ಯಾಕ್ಟರಿ ಇದೆ ಎಂದು ಅವರು ತಿಳಿಸಿದ್ದಾರೆ. ಉತ್ತರ ದೆಹಲಿಯ ಮೇಯರ್ ಪ್ರೀತಿ ಅಗರ್ವಾಲ್ ಅವರು ಸ್ಥಳಕ್ಕೆ ಧಾವಿಸಿ ಪರಿಶಿಲಿಸಿದ್ದಾರೆ.ಈ ಕಾರ್ಖಾನೆಯು ದೆಹಲಿ ರಾಜ್ಯ ಕೈಗಾರಿಕಾ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ (ಡಿಎಸ್ಐಐಡಿಸಿ) ವ್ಯಾಪ್ತಿಯೊಳಗೆ ಬರುತ್ತದೆ. ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Trending News