Bride Groom Viral Video: ಸಾಮಾಜಿಕ ಜಾಲತಾಣದ ಆಗಮನದ ಬಳಿಕ ವಿಭಿನ್ನವಾದ ವಿಡಿಯೋಗಳನ್ನು ನೋಡಲು ಅವಕಾಶ ಸಿಕ್ಕಿದೆ. ಅವುಗಳಲ್ಲಿ ಮದುವೆ ಸೀಸನ್ ಮಾತ್ರವಲ್ಲದೆ ಎಲ್ಲಾ ಸಮಯದಲ್ಲೂ ವಧು-ವರರಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ಸಖತ್ ವಿರಲ್ ಆಗುತ್ತಲೇ ಇರುತ್ತವೆ. ಇದೀಗ ನವ ವಿವಾಹಿತರು ರಾಕೆಟ್ನಲ್ಲಿ ತೆರಳುವ ವಿಡಿಯೋ ವೈರಲ್ ಆಗುತ್ತಿದೆ.
ವಾಸ್ತವವಾಗಿ, ಮದುವೆಯಾದ ಬಳಿಕ ಅನುಕೂಲ ಇರುವವರು ತಮ್ಮ ಅಳಿಯನಿಗೆ ಹೊಸ ವಾಹನವನ್ನು ಉಡುಗೊರೆಯಾಗಿ ನೀಡಿ ಅದೇ ವಾಹನದಲ್ಲಿ ವಧು-ವರರಿಬ್ಬರಿಗೂ ಬೀಳ್ಗೊಡುತ್ತಾರೆ. ಆದರೆ, ಇಲ್ಲೊಂದು ಕಡೆ ರಾಕೆಟ್ ಮೇಲೆ ವಧು-ವರರನ್ನು ನಿಲ್ಲಿಸಿ ಅದಕ್ಕೆ ಬೆಂಕಿ ಹಚ್ಚಲಾಗಿದೆ.
ಇದನ್ನೂ ಓದಿ- Viral Video: ವಧು-ವರರಿಬ್ಬರೂ ಇನ್ನೇನು ಹಾರ ಬದಲಿಸಬೇಕು ಅಷ್ಟರಲ್ಲೇ ಸ್ನೇಹಿತನ ಎಂಟ್ರಿ, ಮುಂದೇನಾಯ್ತು!
ಹೌದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಮದುವೆ ಸಂಬಂಧಿತ ಈ ವಿಡಿಯೋದಲ್ಲಿ ವಧುವಿನ ಸಂಬಂಧಿಕರು ಬಹಳ ದುಃಖದಿಂದ ವಧುವನ್ನು ವರನೊಂದಿಗೆ ಮೊದಲ ಬಾರಿಗೆ ಕಳುಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕಾರ್, ವಿಮಾನದ ವ್ಯವಸ್ಥೆ ಬದಲಿಗೆ ರಾಕೆಟ್ ವ್ಯವಸ್ಥೆ ಮಾಡಲಾಗಿದೆ.
ಬಹಳ ತಮಾಷಾದಾಯಕವಾಗಿರುವ ಈ ವಿಡಿಯೋದಲ್ಲಿ ಮೊದಲಿಗೆ ಮದುವೆಯ ಗಂಡು ರಾಕೆಟ್ ಮುಂದೆ ನಿಂತಿರುತ್ತಾನೆ. ಬಳಿಕ ವರನ ಹಿಂದೆಯೇ ಮದುವೆ ಹುಡುಗಿಯನ್ನು ನಿಲ್ಲಿಸಿ ಹಿಂಬದಿಯಿಂದ ಕಿಡಿ ಹತ್ತಿಸಲಾಗುತ್ತದೆ. ಕೂಡಲೇ ರಾಕೆಟ್ ಉಡಾವಣೆಗೊಳ್ಳುತ್ತದೆ. ವಧು-ವರರಿಬ್ಬರೂ ಮೇಲೆ ಹಾರುತ್ತಾ ಕೆಳಗಿದ್ದವರಿಗೆ ಕೈ ಬೀಸುತ್ತಿದ್ದಾರೆ.
Amazing creativity. 😂pic.twitter.com/D3dTNXPd75
— Figen (@TheFigen_) August 25, 2024
ಇದನ್ನೂ ಓದಿ- ಹುಲಿ ಜೊತೆ ಯುವಕನ ಚೆಲ್ಲಾಟ, ಮುಂದೇನಾಯ್ತು ನೀವೇ ನೋಡಿ...
@TheFigen_ ಹೆಸರಿನ X ಹ್ಯಾಂಡಲ್ನಲ್ಲಿ ವಧು-ವರರ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಾಸ್ತವವಾಗಿ, ಅತ್ಯುತ್ತಮ ಎಡಿಟಿಂಗ್ ಮೂಲಕ ಈ ವಿಡಿಯೋವನ್ನು ಸಿದ್ಧಪಡಿಸಲಾಗಿದೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಕೆಲವರು ಕಾಮೆಂಟ್ ಕೂಡ ಮಾಡುತ್ತಿದ್ದಾರೆ.
ಎಕ್ಸ್ ಬಳಕೆದಾರರೊಬ್ಬರು, ನವ ವಧು-ವರರು ರಾಕೆಟ್ ಹತ್ತಿ ಹೋದ ಮುಂದಿನ ಭಾಗವನ್ನು ತೋರಿಸಬಹುದೇ ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ಇಬ್ಬರೂ ಸುರಕ್ಷಿತವಾಗಿ ಮನೆ ಸೇರಿದ್ದಾರೆಯೇ ಎಂದು ಕೇಳಿದ್ದಾರೆ. ಮತ್ತೊರ್ವ ಬಳಕೆದಾರದು ಇದೊಂದು ಸೃಜನಾತ್ಮಕ ವಿವಾಹ ಎಂದು ಬರೆದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.