ಹಸುವಿನ ಸಗಣಿಯಿಂದ ತಯಾರಿಸಿದ 21 ಸಾವಿರ ದೀಪಗಳು ಅಯೋಧ್ಯೆಗೆ ರವಾನೆ: ‘ಪವಿತ್ರ ದೀಪಾವಳಿ’ ಆಚರಣೆಗೆ ಸಕಲ ಸಿದ್ಧತೆ

Cow Dung diyas for Ayodhya: ಮುಜಾಫರ್‌ಪುರ ಜಿಲ್ಲೆಯ ಸಕ್ರಾ ಬ್ಲಾಕ್‌’ನ ವಿಶುನ್‌ಪುರ ಬಾಘನಗರಿ ಗ್ರಾಮದ ಮಹಿಳೆಯರು ದೀಪಗಳನ್ನು ತಯಾರಿಸಲು ಪ್ರಾರಂಭಿಸಿದ್ದಾರೆ. ವಿಶೇಷವೆಂದರೆ ಇಲ್ಲಿನ ಮಹಿಳೆಯರು ಹಸುವಿನ ಸಗಣಿಯಿಂದ ದೀಪಗಳನ್ನು ಸಿದ್ಧಪಡಿಸುತ್ತಿದ್ದಾರೆ.

Written by - Bhavishya Shetty | Last Updated : Jan 15, 2024, 07:02 AM IST
    • ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ
    • ಮನೆಗಳಲ್ಲಿ ದೀಪಗಳನ್ನು ಬೆಳಗಿಸುವಂತೆ ಕರೆ ನೀಡಿದ ಪ್ರಧಾನಿ
    • ರಾಮಮಂದಿರ ಅಯೋಧ್ಯೆಗೆ 21 ಸಾವಿರ ದೀಪಗಳ ರವಾನೆ
ಹಸುವಿನ ಸಗಣಿಯಿಂದ ತಯಾರಿಸಿದ 21 ಸಾವಿರ ದೀಪಗಳು ಅಯೋಧ್ಯೆಗೆ ರವಾನೆ: ‘ಪವಿತ್ರ ದೀಪಾವಳಿ’ ಆಚರಣೆಗೆ ಸಕಲ ಸಿದ್ಧತೆ  title=
Cow Dung diyas for Ayodhya

Cow Dung diyas for Ayodhya: ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ಭಗವಾನ್ ಶ್ರೀರಾಮನ ಪ್ರತಿಮೆಯ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಈ ದಿನದಂದು ದೇಶವಾಸಿಗಳು ತಮ್ಮ ಮನೆಗಳಲ್ಲಿ ದೀಪಗಳನ್ನು ಬೆಳಗಿಸುವಂತೆ ಕರೆ ನೀಡಿದ್ದಾರೆ.

ಇದನ್ನೂ ಓದಿ: ಮಕರ ಸಂಕ್ರಾಂತಿ 2024ರ ರಾಶಿಫಲ: ಇಂದು ಈ ರಾಶಿಗೆ ಬರೀ ಶುಭಶಕುನವೇ…ಅದೃಷ್ಟ ತಾನಾಗೇ ಹುಡುಕಿ ಬರುತ್ತೆ

ಇನ್ನು ಮುಜಾಫರ್‌ಪುರದ ಸಕ್ರಾ ಬ್ಲಾಕ್‌’ನ ಮಹಿಳೆಯರು ಹಸುವಿನ ಸಗಣಿ ದೀಪಗಳನ್ನು ಸಿದ್ಧಪಡಿಸಿ, ಅವುಗಳನ್ನು ಅಯೋಧ್ಯೆಗೆ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ.

ಮುಜಾಫರ್‌ಪುರ ಜಿಲ್ಲೆಯ ಸಕ್ರಾ ಬ್ಲಾಕ್‌’ನ ವಿಶುನ್‌ಪುರ ಬಾಘನಗರಿ ಗ್ರಾಮದ ಮಹಿಳೆಯರು ದೀಪಗಳನ್ನು ತಯಾರಿಸಲು ಪ್ರಾರಂಭಿಸಿದ್ದಾರೆ. ವಿಶೇಷವೆಂದರೆ ಇಲ್ಲಿನ ಮಹಿಳೆಯರು ಹಸುವಿನ ಸಗಣಿಯಿಂದ ದೀಪಗಳನ್ನು ಸಿದ್ಧಪಡಿಸುತ್ತಿದ್ದಾರೆ. ಅಯೋಧ್ಯೆ ಹೊರತುಪಡಿಸಿ, ಬ್ಲಾಕ್ ವ್ಯಾಪ್ತಿಯ 27 ಪಂಚಾಯತ್‌’ಗಳಿಗೆ ತಲಾ ಐದು ದೀಪಗಳನ್ನು ಕಳುಹಿಸಲಾಗುವುದು ಎಂದು ಹೇಳಲಾಗುತ್ತಿದೆ. ಈ ದೀಪವನ್ನು ತಯಾರಿಸಲು ಶುದ್ಧ ಹಸುವಿನ ಸಗಣಿ ಬಳಸಲಾಗುತ್ತಿದೆ. ಅದು ಒಣಗಿದ ನಂತರ ಪ್ಯಾಕ್ ಮಾಡಿ ಅಯೋಧ್ಯೆಗೆ ಕಳುಹಿಸಲಾಗುವುದು ಎಂದು ಈ ಮಹಿಳೆಯರು ಹೇಳಿದ್ದಾರೆ.

ಅಯೋಧ್ಯೆ 21 ಸಾವಿರ ದೀಪಗಳು:

ಇಲ್ಲಿನ ಮುಖ್ಯಸ್ಥೆ ಬಬಿತಾ ಕುಮಾರಿ ಮಾತನಾಡಿ, “21 ಸಾವಿರ ದೀಪಗಳನ್ನು ತಯಾರಿಸಲಾಗುತ್ತಿದ್ದು, ಅದನ್ನು ರಾಮಮಂದಿರ ಅಯೋಧ್ಯೆಗೆ ಕಳುಹಿಸಲಾಗುವುದು. ಇದಲ್ಲದೇ ಬ್ಲಾಕ್ ನ ಎಲ್ಲ ಪಂಚಾಯಿತಿಗಳಿಗೆ ತಲಾ ಐದರಂತೆ ಕಳುಹಿಸಲಾಗುವುದು” ಎಂದರು.

ಇದನ್ನೂ ಓದಿ: ಫಿನಾಲೆ ಸಮೀಪದಲ್ಲೇ ‘ಬಿಗ್’ ಟ್ವಿಸ್ಟ್.. 8 ಸ್ಪರ್ಧಿಗಳು ಉಳಿದಿದ್ದರೂ ಈ ವಾರ ಎಲಿಮಿನೇಷನ್ ಕ್ಯಾನ್ಸಲ್ ಆಗೋದಕ್ಕೆ ಇದುವೇ ಕಾರಣ!

ಗ್ರಾಮಸ್ಥ ಬಬ್ಲು ಮಿಶ್ರಾ ಮಾತನಾಡಿ, “ಗ್ರಾಮದಲ್ಲಿ ದನಗಾಹಿಗಳ ಸಂಖ್ಯೆ ಹೆಚ್ಚಿದೆ. ಹಸುವಿನ ಸಗಣಿ ಲಭ್ಯತೆಯೇ ಇದಕ್ಕೆ ಕಾರಣ. ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯಲಿರುವ ಶ್ರೀರಾಮನ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕಾಗಿ ಗ್ರಾಮದ ಮಹಿಳೆಯರು ಶುದ್ಧ ಹಸುವಿನ ಸಗಣಿಯಿಂದ ದೀಪಗಳನ್ನು ಸಿದ್ಧಪಡಿಸುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News