ಉತ್ತರಾಖಂಡ್‌ನಲ್ಲಿ ಮೇಘಸ್ಫೋಟ; ಮೂವರ ದುರ್ಮರಣ

ಗೋವಿಂದಘಾಟ್ ಮತ್ತು ಪಿಥೋರಗಘರ್ ಜಿಲ್ಲೆಗಳಲ್ಲಿ ನಿರಂತರ ಸುರಿದ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಮನೆ ಕುಸಿದ ಕಾರಣ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. 

Last Updated : Sep 7, 2019, 05:17 PM IST
ಉತ್ತರಾಖಂಡ್‌ನಲ್ಲಿ ಮೇಘಸ್ಫೋಟ; ಮೂವರ ದುರ್ಮರಣ title=

ಪಿಥೋರಘರ್: ಉತ್ತರಾಖಂಡದ ಪಿಥೋರಘರ್ ಜಿಲ್ಲೆಯ ಟಿಮ್ತಿಯಾ ಗ್ರಾಮದಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಮೇಘಸ್ಫೋಟದಿಂದಾಗಿ ಇಬ್ಬರು ಮಹಿಳೆಯರೂ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.

ಗೋವಿಂದಘಾಟ್ ಮತ್ತು ಪಿಥೋರಗಘರ್ ಜಿಲ್ಲೆಗಳಲ್ಲಿ ನಿರಂತರ ಸುರಿದ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಮನೆ ಕುಸಿದ ಕಾರಣ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಮಳೆಯಾಗಿದೆ, ಅಲ್ಲಿ ಮಳೆನೀರಿನ ಅತಿಯಾದ ಶಕ್ತಿಯಿಂದಾಗಿ ಮನೆ ತೊಳೆಯಲ್ಪಟ್ಟಿತು ಮತ್ತು ಮೂರು ಜನರ ಸಾವಿಗೆ ಕಾರಣವಾಯಿತು. ಈ ಪ್ರದೇಶದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವಾರುಭಾರೀ ಮಳೆಯಿಂದಾಗಿ ಹಲವು ಮನೆಗಳು ಹಾನಿಗೊಳಗಾಗಿವೆ.

ಘಟನೆ ಬಗ್ಗೆ ತಿಳಿಯುತ್ತಿದ್ದಂತೆಯೇ ಪೊಲೀಸರು, ಎಸ್‌ಡಿಆರ್‌ಎಫ್ ತಂಡ ಮತ್ತು ಸ್ಥಳೀಯರು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಮನೆಯ ಅವಶೇಷಗಳ ಅಡಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ತೀವ್ರವಾಗಿ ಗಾಯಗೊಂಡ ಮಹಿಳೆಯರು ಬಳಿಕ ಸಾವನ್ನಪ್ಪಿದ್ದಾರೆ.

ಟಿಮ್ಟಿಯಾ, ನಚಾನಿ, ತಾರಾಲಿ, ಬಸ್‌ಬಾಗಾದ್ ಮತ್ತು ಗೋವಿಂದಘಾಟ್ ಗ್ರಾಮಗಳಲ್ಲಿ ಮಳೆ ನೀರಿನಲ್ಲಿ ಹಲವು ಕಾರುಗಳು, ಬೈಕ್‌ಗಳು ಮತ್ತು ಇತರ ವಾಹನಗಳು ಕೊಚ್ಚಿ ಹೋಗಿದ್ದು, ಸಾಕಷ್ಟು ಆಸ್ತಿಪಾಸ್ತಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. 

ಉತ್ತರಾಖಂಡದ ಭುಜ್‌ಗಡ್ ನದಿ ತುಂಬಿ ಹರಿಯುತ್ತಿದ್ದು, ನದಿ ಪಾತ್ರದುದ್ದಕ್ಕೂ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.
 

Trending News