ಥಾಣೆ: ಗಟಾರಕ್ಕೆ ಇಳಿದಿದ್ದ ಮೂವರು ಕಾರ್ಮಿಕರ ಸಾವು, ಐವರು ಆಸ್ಪತ್ರೆಗೆ

ಮ್ಯಾನ್‌ಹೋಲ್‌ ಸ್ವಚ್ಚಗೊಳಿಸಲೆಂದು ಒಳಗೆ ಇಳಿದಿದ್ದ 11 ಕಾರ್ಮಿಕರಲ್ಲಿ ಮೂವರು ಉಸಿರುಗಟ್ಟಿ ಒಳಗೇ ಸಾವನ್ನಪ್ಪಿದ್ದು, ಐವರನ್ನು ರಕ್ಷಿಸಿ ಮೆಟ್ರೋ ಆಸ್ಪತ್ರೆಗೆ ದಾಖಲಿಸಲಾಗಿದೆ.

Last Updated : May 10, 2019, 11:38 AM IST
ಥಾಣೆ: ಗಟಾರಕ್ಕೆ ಇಳಿದಿದ್ದ ಮೂವರು ಕಾರ್ಮಿಕರ ಸಾವು, ಐವರು ಆಸ್ಪತ್ರೆಗೆ title=

ಥಾಣೆ : ಮ್ಯಾನ್‌ಹೋಲ್‌ ಸ್ವಚ್ಚತೆಗಾಗಿ ಇಳಿದಿದ್ದ ಮೂವರು ಕಾರ್ಮಿಕರು ಸಾವನ್ನಪ್ಪಿದ್ದು, ಐವರು ಆಸ್ಪತ್ರೆಗೆ ದಾಖಲಾದ ಘಟನೆ ಮಹಾರಾಷ್ಟ್ರದ ಥಾಣೆ ನಗರದ ಧೋಕಾಲಿ ಪ್ರದೇಶದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ. 

ಮ್ಯಾನ್‌ಹೋಲ್‌ ಸ್ವಚ್ಚಗೊಳಿಸಲೆಂದು ಒಳಗೆ ಇಳಿದಿದ್ದ 11 ಕಾರ್ಮಿಕರಲ್ಲಿ ಮೂವರು ಉಸಿರುಗಟ್ಟಿ ಒಳಗೇ ಸಾವನ್ನಪ್ಪಿದ್ದು, ಐವರನ್ನು ರಕ್ಷಿಸಿ ಮೆಟ್ರೋ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಈ ಬಗ್ಗೆ ಎಎನ್ಐ ವರದಿ ಮಾಡಿದ್ದು, ಮೃತರನ್ನು ಅಮಿತ್‌ ಪುಹಾಲ್‌(20), ಅಮನ್‌ ಬಾದಲ್‌(21) ಮತ್ತು ಅಜಯ್‌ ಬುಂಬಾಕ್‌(24) ಎಂದು ಗುರುತಿಸಲಾಗಿದೆ.

ಇದೇ ತಿಂಗಳ ಆರಂಭದಲ್ಲಿ ಇಂತಹದ್ದೇ ಒಂದು ಘಟನೆ ದೆಹಲಿಯಲ್ಲಿ ನಡೆದಿತ್ತು, ಅಲ್ಲಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿ ಮೂವರು ಆಸ್ಪತ್ರೆಗೆ ದಾಖಲಾಗಿದ್ದರು.

Trending News