ಪಟಾಕಿ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ; ನಾಲ್ವರು ಸಾವು

ಮೃತರನ್ನು ಶಾರುಖ್ (19), ಸಲ್ಮಾನ್ (16), ನಫಿಸ್ (35) ಮತ್ತು ರಾಮ್ವಧ್ರಾ(15) ಎಂದು ಗುರುತಿಸಲಾಗಿದ್ದು, ನಾಲ್ವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Last Updated : Feb 1, 2019, 04:02 PM IST
ಪಟಾಕಿ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ; ನಾಲ್ವರು ಸಾವು title=

ಬಾಂದಾ: ಪಟಾಕಿ ಫ್ಯಾಕ್ಟರಿಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ನಾಲ್ವರು ಮೃತಪಟ್ಟಿದ್ದು, ಓರ್ವ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಇಲ್ಲಿನ ಬಿಸಾಂಡಾ ಪ್ರದೇಶದಲ್ಲಿ ನಫೀಸ್ ಖಾನ್ನ ನಿವಾಸದ ಬಳಿಯ ಕಾರ್ಖಾನೆಯಲ್ಲಿ ಗುರುವಾರ ಸಂಭವಿಸಿದ ಸ್ಫೋಟದಿಂದಾಗಿ ಎರಡು ಅಂತಸ್ತಿನ ಮನೆ ಕುಸಿದಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ(ಎಎಸ್ಪಿ) ಲಾಲ್ ಭಾರತ್ ಕುಮಾರ್ ಪಾಲ್ ಹೇಳಿದ್ದಾರೆ.

ಮೃತರನ್ನು ಶಾರುಖ್ (19), ಸಲ್ಮಾನ್ (16), ನಫಿಸ್ (35) ಮತ್ತು ರಾಮ್ವಧ್ರಾ(15) ಎಂದು ಗುರುತಿಸಲಾಗಿದ್ದು, ನಾಲ್ವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಪರಿಸ್ಥಿತಿ ಗಂಭೀರವಾಗಿದೆ. 

ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಲೈಸೆನ್ಸ್ ಪಡೆದು ಕಾರ್ಖಾನೆ ನಡೆಸಲಾಗುತ್ತಿದೆಯೇ ಇಲ್ಲವೇ ಎಂಬುದರ ಬಗ್ಗೆ ತನಿಖೆ ಆರಂಭಿಸಿದ್ದಾರೆ.

Trending News