ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗೆ ಸಂಪರ್ಕ ಹಿನ್ನೆಲೆ , 6 ಸರ್ಕಾರಿ ಉದ್ಯೋಗಿಗಳ ವಜಾ

ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ಮತ್ತು ಓವರ್ ಗ್ರೌಂಡ್ ವರ್ಕರ್ಸ್ ಆಗಿ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಸರ್ಕಾರವು 6 ಸರ್ಕಾರಿ ನೌಕರರನ್ನು ವಜಾ ಮಾಡಿದೆ.

Written by - Ranjitha R K | Last Updated : Sep 22, 2021, 09:10 PM IST
  • 6 ಸರ್ಕಾರಿ ನೌಕರರನ್ನು ವಜಾ ಮಾಡಲಾಗಿದೆ
  • ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಕ್ರಮ
  • ಓವರ್ ಗ್ರೌಂಡ್ ವರ್ಕರ್ ಆಗಿ ಕೆಲಸ ಮಾಡುತ್ತಿದ್ದ ನೌಕರರು
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗೆ ಸಂಪರ್ಕ ಹಿನ್ನೆಲೆ ,  6 ಸರ್ಕಾರಿ ಉದ್ಯೋಗಿಗಳ ವಜಾ

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ (Jammu Kashmir) 370 ನೇ ವಿಧಿಯನ್ನು ತೆರವುಗೊಳಿಸಿದ ಬಳಿಕ ಭದ್ರತಾ ಪಡೆಗಳು ಭಯೋತ್ಪಾದಕರ ದೆ ನಡುಗಿಸಿದೆ. ನಿರಂತರವಾಗಿ ಭದ್ರತಾಪಡಗಳು ಭಯೋತ್ಪಾದಕರನ್ನು ಮಟ್ಟ ಹಾಕುತ್ತಲೇ ಬಂದಿವೆ. ಈ ಮಧ್ಯೆ, ಸರ್ಕಾರಿ ಇಲಾಖೆಗಳಲ್ಲಿ ಒದ್ಯೋಗ ಮಾಡಿಕೊಂಡು ಭಯೋತ್ಪಾದಕರ  (Terrorist) ಜೊತೆ ಸಂಪರ್ಕ ಇಟ್ಟುಕೊಂಡಿದ್ದ ಹಿನ್ನೆಲೆಯಲ್ಲಿ  ಆರು ಮಂದಿ ನೌಕರರನ್ನು ಸೇವೆಯಿಂದ ವಜಾ (Terminate) ಮಾಡಲಾಗಿದೆ. ಇವರು ಭಯೋತ್ಪಾದಕರಿಗೆ ಗುಪ್ತಚರ ಮಾಹಿತಿಗಳನ್ನು ರವಾನಿಸುತ್ತಿದ್ದರು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ  ಆರೂ ಮಂದಿಯನ್ನು ಸೇವೆಯಿಂದ ತೆಗೆದು ಹಾಕಲಾಗಿದೆ.

ಓವರ್ ಗ್ರೌಂಡ್ ವರ್ಕರ್ ಆಗಿ ಕೆಲಸ ಮಾಡುತ್ತಿದ್ದರು : 
ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ಮತ್ತು ಓವರ್ ಗ್ರೌಂಡ್ ವರ್ಕರ್ಸ್ (OGW) ಆಗಿ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಸರ್ಕಾರವು 6 ಸರ್ಕಾರಿ ನೌಕರರನ್ನು ವಜಾ ಮಾಡಿದೆ. ಭಾರತೀಯ ಸಂವಿಧಾನದ (IPC) ಕಲಂ 311 (2) (C) ಅಡಿಯಲ್ಲಿ ಈ ಘಟನೆಯ ತನಿಖೆ ನಡೆಸಿದ ಜಮ್ಮು ಮತ್ತು ಕಾಶ್ಮೀರ (Jammu Kashmir) ಕೇಂದ್ರಾಡಳಿತ ಪ್ರದೇಶದಲ್ಲಿ ನೇಮಕಗೊಂಡ ಸಮಿತಿಯು ಉದ್ಯೋಗಿಗಳನ್ನು ವಜಾಗೊಳಿಸಲು ಶಿಫಾರಸು ಮಾಡಿದೆ.

ಇದನ್ನೂ ಓದಿ : RBI Rule : ನಿಮ್ಮ ಬಳಿಯೂ ಟೇಪ್ ಅಂಟಿಸಿರುವ ನೋಟುಗಳಿವೆಯೇ? ಹಾಗಿದ್ದರೆ ಇಲ್ಲಿ ಬಳಸಿ, ಪೂರ್ತಿ ಹಣ ಪಡೆಯಿರಿ

ಈ ಹಿಂದೆಯೂ 11 ಸರ್ಕಾರಿ ನೌಕರರು ವಜಾ : 
ಈ ವರ್ಷದ ಜುಲೈನಲ್ಲಿ, ವಿವಿಧ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ 11 ಸರ್ಕಾರಿ ನೌಕರರನ್ನು ಸೇವೆಯಿಂದ ವಜಾಗೊಳಿಸಲಾಯಿತು (Terminate). ಈ ಉದ್ಯೋಗಿಗಳು ಕೂಡಾ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಲಾಗಿತ್ತು. ವಜಾಗೊಳಿಸಿದ 11 ಉದ್ಯೋಗಿಗಳಲ್ಲಿ, ಇಬ್ಬರು ಸರ್ಕಾರಿ ಶಿಕ್ಷಕರು ಸೇರಿದ್ದಾರೆ. ಇವರು ಅನಂತನಾಗ್ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು.  ಇದರೊಂದಿಗೆ ಭಯೋತ್ಪಾದಕರ (Terrorist) ಓವರ್ ಗ್ರೌಂಡ್ ವರ್ಕರ್ ಆಗಿ ಕೆಲಸ ಮಾಡುತ್ತಿದ್ದರು.  

ಇವರಲ್ಲದೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ನಲ್ಲಿ (police) ಕಾರ್ಯ ನಿರ್ವಹಿಸುತ್ತಿದ್ದ  ಬ್ಬರನ್ನು ಕೂಡಾ ವಜಾ ಮಾಡಲಾಗಿದೆ. ಅವರು ಭದ್ರತಾ ಪಡೆಗಳ ಕಾರ್ಯಾಚರಣೆಗಳ ಬಗ್ಗೆ ಗುಪ್ತಚರ ಮಾಹಿತಿಯನ್ನು ಭಯೋತ್ಪಾದಕರಿಗೆ ಸೋರಿಕೆ ಮಾಡುತ್ತಿದ್ದರು. ವಜಾಗೊಳಿಸಿದ ನೌಕರರಲ್ಲಿ ಅನಂತನಾಗ್ ಜಿಲ್ಲೆಯಿಂದ 4, ಬುಡ್ಗಂನಿಂದ 3, ಬಾರಾಮುಲ್ಲಾ, ಶ್ರೀನಗರ, ಪುಲ್ವಾಮ ಮತ್ತು ಕುಪ್ವಾರ ಜಿಲ್ಲೆಗಳಿಂದ ತಲಾ ಒಬ್ಬರು ಸೇರಿದ್ದಾರೆ.

ಇದನ್ನೂ ಓದಿ : Compensation For Covid Deaths: ಕೊರೊನಾದಿಂದಾದ ಸಾವುಗಳಿಗೆ ಸರ್ಕಾರದಿಂದ ಪರಿಹಾರ ನಿಗದಿ, ಸಂತ್ರಸ್ತ ಕುಟುಂಬಕ್ಕೆ ಸಿಗಲಿದೆ 50 ಸಾವಿರ ರೂ. ಪರಿಹಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News