ಛತ್ತೀಸ್ ಘಡ್ ದಲ್ಲಿ 60 ನಕ್ಸಲರು ಶರಣಾಗತ

    

Last Updated : Apr 26, 2018, 10:48 PM IST
ಛತ್ತೀಸ್ ಘಡ್ ದಲ್ಲಿ 60 ನಕ್ಸಲರು ಶರಣಾಗತ title=
Photo:ANI

ನವದೆಹಲಿ: ಛತ್ತೀಸ್ ಘಡ್ ನ ಬಸ್ತರ್ ಪ್ರದೇಶದಲ್ಲಿ  ಸುಮಾರು 60 ನಕ್ಸಲರು ಶರಣಾಗತರಾಗಿದ್ದಾರೆ.

ಈ ನಕ್ಸಲರನ್ನು ಅರುಜ್ಮಾರ್ಹ್ನ ಪ್ರದೇಶದವರು ಎಂದು ಹೇಳಲಾಗಿದ್ದು, ಇಂದು ನಾರಾಯಣಪುರದಲ್ಲಿ ಬಸ್ತರ್ ಇನ್ಸ್ಪೆಕ್ಟರ್ ಜನರಲ್ (ಐಜಿ) ವಿವೇಕಾನಂದ ಸಿನ್ಹಾ  ಸಮ್ಮುಖದಲ್ಲಿ  ಶರಣಾತರಾಗಿದ್ದಾರೆ.

ಶರಣಾಗತರಾಗಿರುವ ನಕ್ಸಲರಲ್ಲಿ 40 ಜನರು  ಪುರುಷರು ಮತ್ತು 20 ಮಹಿಳೆಯರಿದ್ದಾರೆ ಎಂದು ತಿಳಿದುಬಂದಿದೆ.ಪೊಲೀಸರಿಗೆ ಶರಣಾದ ನಂತರ ಅವರು  ನಕ್ಸಲೀಯರ ಕಾರ್ಯಾಚರಣೆ ಮತ್ತು ತಂತ್ರಗಳಿಂದ ಹತಾಶರಾಗಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ನಕ್ಸಲೀಯರು ಶರಣಾಗತರಾಗಿರುವುದರಿಂದ ಅವರಿಗೆ ಈಗ ಪುನರ್ವಸತಿ ಯೋಜನೆ ಅಡಿಯಲ್ಲಿ ಸರ್ಕಾರದ ಪರಿಹಾರ ದೊರಕುತ್ತದೆ ಎಂದು ಹೇಳಲಾಗಿದೆ.

Trending News