ಬಿಹಾರ ಚುನಾವಣೆಯಲ್ಲಿ ಎಷ್ಟು ಲಕ್ಷ 'ನೋಟಾ' ವೋಟ್ ಗೊತ್ತಾ?

ಬಿಹಾರ ಚುನಾವಣೆಯಲ್ಲಿ 7 ಲಕ್ಷಕ್ಕೂ ಹೆಚ್ಚು 'ನೋಟಾ' ವೋಟ್

Last Updated : Nov 11, 2020, 04:50 PM IST
  • ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ 7 ಲಕ್ಷಕ್ಕೂ ಹೆಚ್ಚು ಮತದಾರರು 'ನೋಟಾ' ವೋಟ್
  • ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ 7,06,252 ಮತದಾರರು 'ನಾವು ಯಾವುದೇ ಅಭ್ಯರ್ಥಿಗಳಿಗೆ ಮತಚಲಾಯಿಸುವುದಿಲ್ಲ' ಎಂದು ಸೂಚಿಸುವ 'ನೋಟಾ'ವನ್ನು ಬಟನ್ ಹಾಕಿದ್ದಾರೆ
  • ಸತತ ನಾಲ್ಕನೇ ಅವಧಿಗೆ ನಿತೀಶ್ ಕುಮಾರ್ ಅವರು ಬಿಹಾರದ ಮುಖ್ಯಮಂತ್ರಿಯಾಗುವತ್ತ ಹೆಜ್ಜೆ
ಬಿಹಾರ ಚುನಾವಣೆಯಲ್ಲಿ ಎಷ್ಟು ಲಕ್ಷ 'ನೋಟಾ' ವೋಟ್ ಗೊತ್ತಾ? title=
Image Courtesy zee news

ದೆಹಲಿ: ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ 7 ಲಕ್ಷಕ್ಕೂ ಹೆಚ್ಚು ಮತದಾರರು 'ನೋಟಾ(NOTA)' ವೋಟ್ ಗಳನ್ನ ಹಾಕಿದ್ದಾರೆ ಎಂದು ಚುನಾವಣಾ ಆಯೋಗ ವರದಿ ಬಿಡುಗಡೆ ಮಾಡಿದೆ. 

Pfizer’s Covid vaccine: ಲಸಿಕೆ ವಿತರಣಾ ಕಾರ್ಯತಂತ್ರ ರಚಿಸಲು ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಸಲಹೆ

ಬಿಹಾರ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ 7,06,252 ಮತದಾರರು (ಶೇ 1.7) ನಾವು ಯಾವುದೇ ಅಭ್ಯರ್ಥಿಗಳಿಗೆ ಮತಚಲಾಯಿಸುವುದಿಲ್ಲ ಎಂದು ಸೂಚಿಸುವ 'ನೋಟಾ'ವನ್ನು ಬಟನ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಮತ್ತೆ ನಿತೀಶ್ ಕುಮಾರ್ ಬಿಹಾರದ ಸಿಎಂ ಆಗಲಿದ್ದಾರೆಯೇ ? ಇಲ್ಲಿದೆ ಸುಶಿಲ್ ಮೋದಿ ಉತ್ತರ

ಬಿಹಾರದಲ್ಲಿ ಮೂರು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು. 4 ಕೋಟಿ ಮತದಾರರು ಮತಚಲಾಯಿಸಿದ್ದರು. ಒಟ್ಟು ಮತದಾರರ ಸಂಖ್ಯೆ 7.3 ಕೋಟಿ. ಚಲಾವಣೆಯಾಗಿದ್ದು ಶೇ 57.09ರಷ್ಟು ಮತಗಳು. ಇದರಲ್ಲಿ ಶೇ 1.7 ರಷ್ಟು ಮತದಾರರು ನೋಟಾ ಆಯ್ಕೆ ಮಾಡಿಕೊಂಡಿದ್ದಾರೆ.

ಇನ್ಮುಂದೆ Netflix,Hotstar ಹಾಗೂ ಇತರೆ OTT ಕಂಟೆಂಟ್ ಗಳ ಮೇಲೆ ಕೇಂದ್ರ ಸರ್ಕಾರದ ನಿಗಾ

ಈ ಚುನಾವಣೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ(NDA) ಸರಳ ಬಹುಮತದೊಂದಿಗೆ ಪುನಃ ಅಧಿಕಾರ ನಡೆಸಲು ಅವಕಾಶ ಪಡೆದುಕೊಂಡಿದೆ.
243 ಸದಸ್ಯರ ಪೈಕಿ 125 ಸ್ಥಾನಗಳನ್ನು ಎನ್‌ಡಿಎ ಒಕ್ಕೂಟ ಗೆದ್ದುಕೊಂಡರೆ, ಆರ್‌ಜೆಡಿ(RJD) ನೇತೃತ್ವದ ಮಹಾ ಘಟಬಂಧನ್‌ 110 ಸ್ಥಾನ ಪಡೆದು ವಿರೋಧ ಪಕ್ಷವಾಗಿದೆ. ಸತತ ನಾಲ್ಕನೇ ಅವಧಿಗೆ ನಿತೀಶ್ ಕುಮಾರ್ ಅವರು ಬಿಹಾರದ ಮುಖ್ಯಮಂತ್ರಿಯಾಗುವತ್ತ ಹೆಜ್ಜೆ ಹಾಕಿದ್ದಾರೆ.

JOB: IOCL ನಲ್ಲಿ ವಿವಿಧ 482 ಹುದ್ದೆಗಳಿಗೆ ಅರ್ಜಿ: ಇದೆ 22 ಕೊನೆ ದಿನ

Trending News