Trending News: 28ರ ಸೊಸೆಯನ್ನು ಮದುವೆಯಾದ 70ರ ಮಾವ: ಇವರ ಪ್ರೇಮ್ ಕಹಾನಿ ಕೇಳಿದ್ರೆ ಶಾಕ್ ಆಗ್ತೀರ!

Father-in-law married Daughter-in-law: ಬರ್ಹಲ್ಗಂಜ್ ಕೊಟ್ವಾಲಿ ಪ್ರದೇಶದ ಛಾಪಿಯಾ ಉಮ್ರಾವ್ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ನಿವಾಸಿ 70 ವರ್ಷದ ಕೈಲಾಶ್ ಯಾದವ್ ಎಂಬವರು 28 ವರ್ಷದ ಸೊಸೆ ಪೂಜಾ ಅವರೊಂದಿಗೆ ದೇವಸ್ಥಾನದಲ್ಲಿ ವಿವಾಹವಾಗುತ್ತಿರುವ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಚಾರ ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿದೆ. ವೈರಲ್ ಫೋಟೋವನ್ನು ದೃಢೀಕರಿಸದಿದ್ದರೂ. ಸದ್ಯ ಮುದುಕನನ್ನೇ ಮದುವೆಯಾದ ಸೊಸೆ ಸಪ್ತಪದಿ ತುಳಿದು ತವರು ಮನೆಯಲ್ಲಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ.

Written by - Bhavishya Shetty | Last Updated : Jan 26, 2023, 08:32 PM IST
    • ಮಾವನೊಬ್ಬ ಸಮಾಜವನ್ನು ಲೆಕ್ಕಿಸದೆ ತನ್ನ ಸೊಸೆಯನ್ನು ವಿವಾಹವಾಗಿದ್ದಾನೆ.
    • ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯಲ್ಲಿ ಈ ವಿಶಿಷ್ಟ ಪ್ರಕರಣ ಬೆಳಕಿಗೆ ಬಂದಿದೆ
    • ಇಬ್ಬರ ಮದುವೆಯ ಫೋಟೋಗಳೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
Trending News: 28ರ ಸೊಸೆಯನ್ನು ಮದುವೆಯಾದ 70ರ ಮಾವ: ಇವರ ಪ್ರೇಮ್ ಕಹಾನಿ ಕೇಳಿದ್ರೆ ಶಾಕ್ ಆಗ್ತೀರ!  title=
Uttar Pradesh

Father-in-law married Daughter-in-law: ಪ್ರೀತಿ, ಒತ್ತಾಯ ಅಥವಾ ಇನ್ನೇನಿದ್ದರೂ ಸಹ ಮಾವನೊಬ್ಬ ಸಮಾಜವನ್ನು ಲೆಕ್ಕಿಸದೆ ತನ್ನ ಸೊಸೆಯನ್ನು ವಿವಾಹವಾಗಿದ್ದಾನೆ. ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯಲ್ಲಿ ಈ ವಿಶಿಷ್ಟ ಪ್ರಕರಣ ಬೆಳಕಿಗೆ ಬಂದಿದೆ. 70 ವರ್ಷದ ಮಾವ ತನ್ನ 28 ವರ್ಷದ ಸೊಸೆಯನ್ನು ದೇವಸ್ಥಾನದಲ್ಲಿ ಮದುವೆಯಾಗಿದ್ದಾನೆ. ಇಬ್ಬರ ಮದುವೆಯ ಫೋಟೋಗಳೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಇದನ್ನೂ ಓದಿ: Viral Video: ಕಾರ್ಯಕರ್ತನ ಮೇಲೆ ಕೋಪದಿಂದ ‘ಕಲ್ಲು’ ಎಸೆದ ತಮಿಳುನಾಡು ಸಚಿವ..!

ವಿಷಯ ಏನು?

ಬರ್ಹಲ್ಗಂಜ್ ಕೊಟ್ವಾಲಿ ಪ್ರದೇಶದ ಛಾಪಿಯಾ ಉಮ್ರಾವ್ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ನಿವಾಸಿ 70 ವರ್ಷದ ಕೈಲಾಶ್ ಯಾದವ್ ಎಂಬವರು 28 ವರ್ಷದ ಸೊಸೆ ಪೂಜಾ ಅವರೊಂದಿಗೆ ದೇವಸ್ಥಾನದಲ್ಲಿ ವಿವಾಹವಾಗುತ್ತಿರುವ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಚಾರ ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿದೆ. ವೈರಲ್ ಫೋಟೋವನ್ನು ದೃಢೀಕರಿಸದಿದ್ದರೂ. ಸದ್ಯ ಮುದುಕನನ್ನೇ ಮದುವೆಯಾದ ಸೊಸೆ ಸಪ್ತಪದಿ ತುಳಿದು ತವರು ಮನೆಯಲ್ಲಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ.

ಕೈಲಾಶ್ ಯಾದವ್ ಬದಲ್‌ಗಂಜ್ ಪೊಲೀಸ್ ಠಾಣೆಯಲ್ಲಿ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ಪತ್ನಿ 12 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಕೈಲಾಶ್ ಅವರ ನಾಲ್ವರು ಮಕ್ಕಳಲ್ಲಿ ಮೂರನೇ ಮಗ ಅಂದರೆ ಸೊಸೆ ಪೂಜಾ ಅವರ ಪತಿಯೂ ಸಾವನ್ನಪ್ಪಿದ್ದಾರೆ. ಇದಾದ ನಂತರ ಪೂಜಾ ಬೇರೆ ವ್ಯಕ್ತಿಯನ್ನು ಮದುವೆಯಾಗಿದ್ದರು. ಆದರೆ ಸೊಸೆಗೆ ಆತ ಇಷ್ಟವಾಗಿರಲಿಲ್ಲ. ಇದಾದ ನಂತರ ಸೊಸೆ ಅಲ್ಲಿಂದ ಹೊರಟು ಕೈಲಾಶ್ ಮನೆಗೆ ಬಂದಿದ್ದಾಳೆ.

ಇದನ್ನೂ ಓದಿ: Art of Living's Bhav 2023 : ಆರ್ಟ್ ಆಫ್ ಲಿವಿಂಗ್‌ನ 4 ದಿನಗಳ ಸಾಂಸ್ಕೃತಿಕ ಸಂಭ್ರಮ : 650 ಕಲಾವಿದರು ಭಾಗಿ!

ಅಷ್ಟರಲ್ಲಿ ಸೊಸೆಯ ಮೇಲೆ ಮಾವನಿಗೆ ಪ್ರೀತಿಯಾಗಿದೆ ಎಂದು ಹೇಳಲಾಗುತ್ತಿದೆ. ನಂತರ ಇಬ್ಬರೂ ವಯಸ್ಸು ಮತ್ತು ಸಮಾಜವನ್ನು ಲೆಕ್ಕಿಸದೆ ಮದುವೆಯಾಗಲು ನಿರ್ಧರಿಸಿದ್ದಾರೆ. ಈ ಮದುವೆ ಇಡೀ ಪ್ರದೇಶದಲ್ಲಿ ಚರ್ಚೆಯ ವಿಷಯವಾಗಿದೆ. ಮಾವ ಮತ್ತು ಸೊಸೆಯ ಮದುವೆಯ ಫೋಟೋ ಅಂತರ್ಜಾಲ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸುತ್ತಮುತ್ತಲಿನ ಜನರು ಒಂದೊಂದು ರೀತಿ ಮಾತನಾಡುತ್ತಿದ್ದಾರೆ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News