ಮುಂಬೈ: ಮಹಾರಾಷ್ಟ್ರ ಸರ್ಕಾರ ಹಬ್ಬದ ಋತುವಿನಲ್ಲಿ ವಿದ್ಯುತ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು ಒಂದು ಲಕ್ಷಕ್ಕೂ ಅಧಿಕ ನೌಕರರಿಗೆ ಬೋನಸ್ (Bonus) ನೀಡುವುದಾಗಿ ಘೋಷಿಸಿದೆ. ರಾಜ್ಯದ ಇಂಧನ ಖಾತೆ ಸಚಿವ ನಿತಿನ್ ರಾವುತ್ ಈ ಘೋಷಣೆಯನ್ನು ಮಾಡಿದ್ದಾರೆ. ಸಾರ್ವಜನಿಕ ಕ್ಷೇತ್ರದ ಇಂಧನ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ಈ ಘೋಷಣೆಯ ಲಾಭ ಸಿಗಲಿದೆ ಎಂದು ರಾವುತ್ ಹೇಳಿದ್ದಾರೆ.
ಇದನ್ನು ಓದಿ- ದೀಪಾವಳಿ ಬೋನಸ್ ಬಂತೆಂದು ಖುಷಿಯಲ್ಲಿದ್ದ ಉದ್ಯೋಗಿಗಳಿಗೆ ನಿರಾಶೆ!
ಬೋನಸ್ ಬೇಡಿಕೆಯ ಬಗ್ಗೆ ವಿದ್ಯುತ್ ಕಾರ್ಮಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಮುಷ್ಕರಕ್ಕೆ ಹೋಗುವಂತೆ ಎಚ್ಚರಿಕೆ ನೀಡಿದ ಸಮಯದಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರವನ್ನು ಪ್ರಕಟಿಸಿರುವುದು ಇಲ್ಲಿ ಗಮನಾರ್ಹ. ಸರ್ಕಾರದ ಈ ಪ್ರಕಟಣೆಯು ಪ್ರಸರಣ ಕಂಪನಿ ಮಹತ್ರಾನ್ಸ್ಕೊ, ವಿತರಣಾ ಕಂಪನಿ ಎಂಎಸ್ಇಡಿಸಿಎಲ್ ಮತ್ತು ವಿದ್ಯುತ್ ಉತ್ಪಾದನಾ ಕಂಪನಿ ಮಹಾಗೆಂಕೊ ನೌಕರರಿಗೆ ಅನುಕೂಲವಾಗಲಿದೆ. ಬೋನಸ್ ಪಾವತಿಸದಿದ್ದರೆ ಮುಷ್ಕರ ನಡೆಸುವುದಾಗಿ ಈ ಕಂಪನಿಗಳ ನೌಕರರು ಎಚ್ಚರಿಸಿದ್ದಾರೆ. ಕಳೆದ ವರ್ಷ, ಮೂರು ಕಂಪನಿಗಳ ಉದ್ಯೋಗಿಗಳಿಗೆ 9000 ರಿಂದ 15000 ರೂ.ಗಳ ಬೋನಸ್ ನೀಡಲಾಗಿತ್ತು.
ನವೆಂಬರ್ 9 ರಂದು ರಾಜಸ್ಥಾನ ಸರ್ಕಾರ ಸುಮಾರು 7.30 ಲಕ್ಷ ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ನೀಡಿದೆ. ಇದೇ ವೇಳೆ ಉತ್ತರಾಖಂಡ ಸರ್ಕಾರವು ಸುಮಾರು ಒಂದೂವರೆ ಲಕ್ಷ ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ನೀಡುವುದಾಗಿ ಘೋಷಿಸಿದೆ. ಉತ್ತರಾಖಂಡ ಸರ್ಕಾರದ ಈ ನಿರ್ಧಾರವು ಗೆಜೆಟೆಡ್ ಅಲ್ಲದ ನೌಕರರಿಗೆ, ದೈನಂದಿನ ವೇತನ ನೌಕರರಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ. ಉತ್ತರಪ್ರದೇಶದಲ್ಲಿ ಯೋಗಿ ಸರ್ಕಾರವು 15 ಲಕ್ಷ ಉದ್ಯೋಗಿಗಳಿಗೆ ಬೋನಸ್ ಘೋಷಿಸಿದೆ.
ಇದನ್ನು ಓದಿ- ಕೋಟ್ಯಂತರ ರೈತ ಬಾಂಧವರಿಗೆ ರಾಜ್ಯ ಸರ್ಕಾರದ Diwali Gift, ಮಾರುಕಟ್ಟೆ ಶುಲ್ಕದಲ್ಲಿ ಶೇ.50 ರಷ್ಟು ಕಡಿತ
ಭಾರತೀಯ ರೈಲು ಇಲಾಖೆ ಮೊದಲು ಬೋನಸ್ ಘೋಷಿಸಿದೆ
ಇದಕ್ಕೂ ಮೊದಲು ಭಾರತೀಯ ರೈಲು ಇಲಾಖೆಯಲ್ಲಿ ಕೆಲಸ ಮಾಡುವ ನೌಕರರಿಗೆ ಲಾಟರಿ ಸಿಕ್ಕಿದೆ. ವಿಭಾಗದ ನೌಕರರಿಗೆ 78 ದಿನಗಳ ಪ್ರೊಡಕ್ಷನ್ ಲಿಂಕ್ಡ್ ಬೋನಸ್ ಘೋಷಣೆಯಾಗಿದೆ. ಈ ಬೋನಸ್ FY 2019-20ನೆ ಆರ್ಥಿಕ ವರ್ಷಕ್ಕೆ ಸಂಬಂಧಿಸಿದೆ. ಇದರಿಂದ ರೇಲ್ವೆ ವಿಭಾಗದ ನಾನ್ ಗೆಜೆಟೆಡ್ ನೌಕರರ ಖಾತೆಗೆ ವೇತನ ಹೆಚ್ಚಾಗಿ ಜಮೆಯಾಗಿದೆ
12 ಲಕ್ಷ ನೌಕರರಿಗೆ ಇದರಿಂದ ಲಾಭವಾಗಿದೆ
ಅಕ್ಟೋಬರ್ 21ರಂದು ಹೊರಡಿಸಲಾಗಿರುವ ಈ ಆದೇಶದ ಪ್ರಕಾರ ಈ ಬಾರಿಯ ಬೋನಸ್ ಲಾಭ RPF/RPSF ನೌಕರರಿಗೆ ಸಿಗುವುದಿಲ್ಲ. ಇದರಲ್ಲಿ ನಾನ್-ಗೆಜೆಟೆಡ್ ರೇಲ್ವೆ ನೌಕರರಿಗೆ 17951 ರೂ. ಬೋನಸ್ ಲಭಿಸಿದೆ. ಈ ಲಾಭ ವಿಭಾಗದ ಸುಮಾರು 12 ಲಕ್ಷ ನಾನ್-ಗೆಜೆಟೆಡ್ ನೌಕರರಿಗೆ ಲಭಿಸಿದೆ.