'ಗಾಂಧಿಜೀ ಸಾವು ಅಪಘಾತದಿಂದ ಸಂಭವಿಸಿದ್ದು' ಎಂದ ಒಡಿಶಾದ ವಿವಾದಾತ್ಮಕ ಕರಪತ್ರ

ಒಡಿಶಾದ ಸರ್ಕಾರಿ ಕರಪತ್ರದಲ್ಲಿ ಮಹಾತ್ಮಾ ಗಾಂಧಿ ಅವರ ಸಾವು ಅಪಘಾತದಿಂದ ಎಂದು ವಿವಾದಾತ್ಮಕವಾಗಿ ದಾಖಲಿಸಿರುವ ಬೆಳವಣಿಗೆ ನಡೆದಿದೆ.

Last Updated : Nov 15, 2019, 05:42 PM IST
'ಗಾಂಧಿಜೀ ಸಾವು ಅಪಘಾತದಿಂದ ಸಂಭವಿಸಿದ್ದು' ಎಂದ ಒಡಿಶಾದ ವಿವಾದಾತ್ಮಕ ಕರಪತ್ರ title=

ನವದೆಹಲಿ: ಒಡಿಶಾದ ಸರ್ಕಾರಿ ಕರಪತ್ರದಲ್ಲಿ ಮಹಾತ್ಮಾ ಗಾಂಧಿ ಅವರ ಸಾವು ಅಪಘಾತದಿಂದ ಎಂದು ವಿವಾದಾತ್ಮಕವಾಗಿ ದಾಖಲಿಸಿರುವ ಬೆಳವಣಿಗೆ ನಡೆದಿದೆ.

ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿರುವ ರಾಜಕೀಯ ನಾಯಕರು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೆ ಈಗ ಆಗಿರುವ ಪ್ರಮಾದವನ್ನು ಸರಿಪಡಿಸಲು ತಕ್ಷಣ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಕೋರಿದ್ದಾರೆ.

ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಯಂದು ಪ್ರಕಟವಾದ ಎರಡು ಪುಟಗಳ 'ಆಮಾ ಬಾಪುಜಿ: ಎಕಾ ಝಾಲಕಾ" (ನಮ್ಮ ಬಾಪುಜಿ: ಒಂದು ನೋಟ) - ಅವರ ಬೋಧನೆಗಳು, ಕೃತಿಗಳು ಮತ್ತು ಒಡಿಶಾದೊಂದಿಗಿನ ಸಂಪರ್ಕಗಳ ಸಂಕ್ಷಿಪ್ತ ವಿವರವನ್ನು ಪ್ರಸ್ತುತಪಡಿಸುತ್ತದೆ. ಇದರಲ್ಲಿ ಗಾಂಧಿಜಿ ಅವರು ಜನವರಿ 30, 1948 ರಂದು ದೆಹಲಿಯ ಬಿರ್ಲಾ ಹೌಸ್‌ನಲ್ಲಿ ನಡೆದ ಹಠಾತ್ ಘಟನೆಗಳಲ್ಲಿ ಆಕಸ್ಮಿಕ ಕಾರಣಗಳಿಂದ ನಿಧನರಾದರು ಎಂದು ವಿವರಿಸಲಾಗಿದೆ.

ಈ ವಿವಾದಾತ್ಮಕ  ಕರಪತ್ರದಿಂದಾಗಿ ಎಚ್ಚೆತ್ತುಕೊಂಡಿರುವ ನವೀನ್ ಪಟ್ನಾಯಕ್ ನೇತೃತ್ವದ ಸರ್ಕಾರ, ಶಾಲಾ ಮತ್ತು ಸಾಮೂಹಿಕ ಶಿಕ್ಷಣ ಇಲಾಖೆಯಿಂದ ರಾಜ್ಯ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ವಿತರಣೆಗಾಗಿ ಅದರ ಪ್ರಕಟಣೆಗೆ ಕಾರಣವಾದ ಸಂದರ್ಭಗಳನ್ನು ಕಂಡುಹಿಡಿಯಲು ತನಿಖೆಗೆ ಆದೇಶಿಸಿದೆ.

ಈ ಪ್ರಮಾದವನ್ನು ಕ್ಷಮಿಸಲಾಗದ ಕೃತ್ಯಎಂದು ಕರೆದಿರುವ ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ಮಾಜಿ ಸಚಿವ ನರಸಿಂಗ ಮಿಶ್ರಾ, ಈ ಕರಪತ್ರದಲ್ಲಿ ಒದಗಿಸಿರುವ ತಪ್ಪು ಮಾಹಿತಿಗಾಗಿ ಕ್ಷಮೆಯಾಚಿಸಬೇಕು ಎಂದು ಹೇಳಿದರು."ಪ್ರಮಾದದ ಜವಾಬ್ದಾರಿಯನ್ನು ನವೀನ್ ಪಟ್ನಾಯಕ್ ತೆಗೆದುಕೊಳ್ಳಬೇಕು, ಕ್ಷಮೆಯಾಚಿಸಬೇಕು ಮತ್ತು ಕರಪತ್ರವನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ನಿರ್ದೇಶನ ನೀಡಬೇಕು" ಎಂದು ಅವರು ಹೇಳಿದರು.

Trending News