ದೇಶಾದ್ಯಂತ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಆಮ್ ಆದ್ಮಿ ಪಕ್ಷ ನಿರ್ಧಾರ

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಗೆಲುವು ಸಾಧಿಸಿದ ಆಮ್ ಆದ್ಮಿ ಪಕ್ಷ (ಎಎಪಿ) ದೆಹಲಿಯನ್ನು ಮೀರಿ ತನ್ನ ಅಸ್ತಿತ್ವವನ್ನು ವಿಸ್ತರಿಸುವ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ದೇಶಾದ್ಯಂತ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ.

Last Updated : Feb 15, 2020, 03:22 PM IST
ದೇಶಾದ್ಯಂತ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಆಮ್ ಆದ್ಮಿ ಪಕ್ಷ  ನಿರ್ಧಾರ  title=

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಗೆಲುವು ಸಾಧಿಸಿದ ಆಮ್ ಆದ್ಮಿ ಪಕ್ಷ (ಎಎಪಿ) ದೆಹಲಿಯನ್ನು ಮೀರಿ ತನ್ನ ಅಸ್ತಿತ್ವವನ್ನು ವಿಸ್ತರಿಸುವ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ದೇಶಾದ್ಯಂತ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ.

"ಸಕಾರಾತ್ಮಕ ರಾಷ್ಟ್ರೀಯತೆ" ಮಂತ್ರವನ್ನು ಬಳಸಿಕೊಂಡು ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಮಾರ್ಗಗಳನ್ನು ನೋಡಲು ಪಕ್ಷವು ತನ್ನ ರಾಷ್ಟ್ರೀಯ ಕಾರ್ಯಕಾರಿಣಿಯ ಸಭೆಯನ್ನು ಭಾನುವಾರ ಕರೆದಿದೆ ಎಂದು ಎಎಪಿ ನಾಯಕ ಗೋಪಾಲ್ ರೈ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.

"9871010101 ಗೆ ಮಿಸ್ಡ್ ಕರೆ ನೀಡುವ ಮೂಲಕ ಜನರು ನಮ್ಮ ರಾಷ್ಟ್ರ ನಿರ್ಮಾಣ ಅಭಿಯಾನಕ್ಕೆ ಸೇರಲು ಸಾಧ್ಯವಾಗುತ್ತದೆ. ಒಮ್ಮೆ ನಾವು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಸೇವಕರನ್ನು ನೇಮಿಸಿಕೊಂಡ ನಂತರ, ಎಎಪಿ ದೇಶಾದ್ಯಂತದ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸುತ್ತದೆ. ನಾವು ಪ್ರಸ್ತುತ ಮುಂಬರುವ ಮಧ್ಯಪ್ರದೇಶ ಮತ್ತು ಗುಜರಾತ್‌ನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನೋಡುತ್ತಿದ್ದೇವೆ ಎಂದು ಅರವಿಂದ್ ಕೇಜ್ರಿವಾಲ್ ಸರ್ಕಾರದಲ್ಲಿ ಸಚಿವರಾಗಿದ್ದ ರೈ ಹೇಳಿದರು.

ಎಎಪಿ ನಾಯಕ ಪಂಜಾಬ್ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆಯೂ ದೃಷ್ಟಿ ಹಾಯಿಸಿದ್ದಾರೆ.ತಮ್ಮ ಪಕ್ಷದ ರಾಷ್ಟ್ರೀಯತೆಯು ಬಿಜೆಪಿ ಆಚರಣೆಯಿಂದ ಭಿನ್ನವಾಗಿದೆ ಎಂದು ರೈ ಹೇಳಿದ್ದಾರೆ. 'ದೆಹಲಿಯಲ್ಲಿ, ನಾವು ಪ್ರೀತಿ ಮತ್ತು ಗೌರವವನ್ನು ಆಧರಿಸಿ ಸಕಾರಾತ್ಮಕ ರಾಷ್ಟ್ರೀಯತೆಯನ್ನು ಹರಡುತ್ತೇವೆ. ಬಿಜೆಪಿಯ ರಾಷ್ಟ್ರೀಯತೆ ದ್ವೇಷ ಮತ್ತು ವಿಭಜಕ ರಾಜಕೀಯವನ್ನು ಆಧರಿಸಿದೆ'ಎಂದು ಅವರು ಪಿಟಿಐಗೆ ತಿಳಿಸಿದರು.

ಎಎಪಿಯ ದೆಹಲಿ ಪ್ರಯೋಗವು ಇಡೀ ದೇಶಕ್ಕೆ "ರೋಲ್ ಮಾಡೆಲ್" ಆಗಿ ಮಾರ್ಪಟ್ಟಿದೆ ಎಂದು ಅವರು ಹೇಳಿದ್ದಾರೆ. "ನಮ್ಮ ರಾಷ್ಟ್ರೀಯತೆಯ ಬ್ರಾಂಡ್ ರೈತರು ಸೇರಿದಂತೆ ಸಮಾಜದ ಪ್ರತಿಯೊಂದು ವರ್ಗದವರಿಗೆ ಉತ್ತಮ ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಜೀವನೋಪಾಯದ ಖಾತರಿಯನ್ನು ನೀಡುತ್ತದೆ" ಎಂದು ರೈ ಹೇಳಿದರು. ಮತ್ತೊಂದೆಡೆ, ಬಿಜೆಪಿ ಭಾರತದ ಜನರನ್ನು ಗೌರವಿಸುವುದಿಲ್ಲ. ಅದು ಪ್ರತಿಯೊಬ್ಬ ವ್ಯಕ್ತಿಯನ್ನು ತನ್ನ ಮತ ಬ್ಯಾಂಕ್ ಎಂದು ನೋಡುತ್ತದೆ' ಎಂದು ಹೇಳಿದರು.

ಅರವಿಂದ್ ಕೇಜ್ರಿವಾಲ್ ಅವರು ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ಮತ್ತು ಹನುಮಾನ್ ಚಾಲಿಸಾವನ್ನು ದೆಹಲಿ ಚುನಾವಣೆಯ ಸಮಯದಲ್ಲಿ ಪಠಿಸುವ ಮೂಲಕ "ಮೃದು ಹಿಂದುತ್ವ" ದಲ್ಲಿ ತೊಡಗಿದ್ದಾರೆ ಎಂಬ ಆರೋಪವನ್ನು ರೈ ತಿರಸ್ಕರಿಸಿದರು. 'ಬಿಜೆಪಿಗೆ ಧರ್ಮವು ರಾಜಕೀಯ ಅಸ್ತ್ರವಾಗಿದೆ. ಆದರೆ ಈ ದೇಶದ ಜನರಿಗೆ ಧರ್ಮವು ನಂಬಿಕೆಯ ಬಗೆ" ಎಂದು ಅವರು ಹೇಳಿದರು.

ಎಎಪಿ ತನ್ನ ರಾಜಕೀಯ ಮಹತ್ವಾಕಾಂಕ್ಷೆಗಳೊಂದಿಗೆ ರಾಷ್ಟ್ರ ರಾಜಧಾನಿಯನ್ನು ಮೀರಿ ಹೋಗಲು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. ಆದರೆ 2017 ರ ಪಂಜಾಬ್ ಚುನಾವಣೆಯಲ್ಲಿ ಅದರ ಸಾಧನೆ ನಿರೀಕ್ಷೆಗಿಂತ ಕಡಿಮೆಯಾಗಿದ್ದು, ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಒಂದು ಸಂಸದೀಯ ಸ್ಥಾನವನ್ನು ಸಹ ಪಡೆಯಲು ಪಕ್ಷ ವಿಫಲವಾಗಿದೆ.

Trending News