ಗಂಭೀರ್ ಗೆ ಎರಡು ಮತ ಗುರುತಿನ ಚೀಟಿ ಇವೆ ಎಂದು ಆಪ್ ನಿಂದ ಕ್ರಿಮಿನಲ್ ಕೇಸ್ ದಾಖಲು

 ಈಶಾನ್ಯ ದೆಹಲಿಯ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಅವರ ಹೆಸರು ಎರಡು ಮತದಾರರ ಪಟ್ಟಿಯಲ್ಲಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷವು ತೀಸ್ ಹಜಾರಿ ಕೋರ್ಟ್ ನಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ.

Updated: Apr 26, 2019 , 04:30 PM IST
 ಗಂಭೀರ್ ಗೆ ಎರಡು ಮತ ಗುರುತಿನ ಚೀಟಿ ಇವೆ ಎಂದು ಆಪ್ ನಿಂದ ಕ್ರಿಮಿನಲ್ ಕೇಸ್ ದಾಖಲು

ನವದೆಹಲಿ:  ಈಶಾನ್ಯ ದೆಹಲಿಯ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಅವರ ಹೆಸರು ಎರಡು ಮತದಾರರ ಪಟ್ಟಿಯಲ್ಲಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷವು ತೀಸ್ ಹಜಾರಿ ಕೋರ್ಟ್ ನಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ.

ಈಗ ಈ ವಿಚಾರವಾಗಿ ಸುದ್ದಿಗಾರರರೊಂದಿಗೆ ಮಾತನಾಡಿದ ಪೂರ್ವ ದೆಹಲಿ ಆಪ್ ಅಭ್ಯರ್ಥಿ ಅತಿಶಿ, ಇದು ಕ್ರಿಮಿನಲ್ ವಿಷಯ ಆದ್ದರಿಂದ ಅವರನ್ನು ತಕ್ಷಣ ಅನರ್ಹಗೊಳಿಸಬೇಕೆಂದು ಒತ್ತಾಯಿಸಿದರು."ನಾವು ಗಂಭೀರ್ ವಿರುದ್ಧ ತೀಸ್ ಹಜಾರಿ ಕೋರ್ಟ್ನಲ್ಲಿ ಕ್ರಿಮಿನಲ್ ಮೊಕದ್ದಮೆ ದೂರು ಸಲ್ಲಿಸಿದ್ದೇವೆ" ಎಂದು ಹೇಳಿದರು.

ರಾಜೇಂದ್ರ ನಗರ ಮತ್ತು ಕರೋಲ್ ಬಾಗ್ ನಲ್ಲಿ ಗಂಭೀರ್ ಹೆಸರು ಮತದಾರರ ಪಟ್ಟಿಯಲ್ಲಿದೆ ಎಂದು ಆಪ್ ಆರೋಪಿಸಿದೆ. ಈ ಅಪರಾಧಕ್ಕಾಗಿ ಅವರು ಒಂದು ವರ್ಷದವರೆಗೆ ಜೈಲು ಶಿಕ್ಷೆಯಾಗಲಿದೆ ಎನ್ನಲಾಗಿದೆ.ಆದರೆ ಗಂಭೀರ್ ಅವರು ತಕ್ಷಣ ಪ್ರತಿಕ್ರಿಯೆಗೆ ಸಿಕ್ಕಿಲ್ಲ ಎನ್ನಲಾಗಿದೆ. ಗೌತಮ್ ಗಂಭೀರ್ ಅವರು ಇತ್ತೀಚಿಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಬಿಜೆಪಿ ಅವರನ್ನು ಈಶ್ಯಾನ್ಯ ದೆಹಲಿ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿತ್ತು.