AAP ಅನ್ನು ಬಿಜೆಪಿಯ ಬಿ ಟೀಮ್ ಎಂದು ಕರೆದ ವರಿಷ್ಠ ಕಾಂಗ್ರೆಸ್ ಮುಖಂಡ

Madhya Pradesh Politics: ಬಿಹಾರದ ರಾಜಧಾನಿ ಪಾಟ್ನಾದಲ್ಲಿ, ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಮಹಾಯುದ್ಧವನ್ನು ಸಾರಲು ಕಾಂಗ್ರೆಸ್ ನಾಯಕರು ಯಾವುದೇ ಅವಕಾಶವನ್ನು ಬಿಡುತ್ತಿಲ್ಲ. ಏತನ್ಮಧ್ಯೆ, ದೆಹಲಿ ಕಾಂಗ್ರೆಸ್ (ಡಿಪಿಸಿಸಿ) ಮತ್ತು ಮಧ್ಯಪ್ರದೇಶ ಕಾಂಗ್ರೆಸ್ (ಎಂಪಿಸಿಸಿ) ಯಿಂದ ಬಂದಿರುವ ಹೇಳಿಕೆಗಳು ಪ್ರತಿಪಕ್ಷಗಳ ಒಗ್ಗಟ್ಟಿನ ಮಂತ್ರಕ್ಕೆಹೊಂದಿಕೆಯಾಗುತ್ತಿಲ್ಲ.  

Written by - Nitin Tabib | Last Updated : Jun 25, 2023, 03:57 PM IST
  • ಮಾಧ್ಯಮಗಳೊಂದಿಗೆ ಮಾತನಾಡಿದ ಜೈವರ್ಧನ್, "ಪ್ರತಿಪಕ್ಷಗಳ ಒಗ್ಗಟ್ಟಿಗೆ, ನಿಮ್ಮ ನಿಲುವನ್ನು ಸ್ಪಷ್ಟಪಡಿಸುವುದು ಅವಶ್ಯಕ" ಎಂದು ಹೇಳಿದ್ದಾರೆ,
  • ನಿನ್ನೆ ಪಾಟ್ನಾದಲ್ಲಿ ಹಾಜರಿದ್ದ ಬಹುತೇಕ ಎಲ್ಲಾ ವಿರೋಧ ಪಕ್ಷಗಳು ಸಂವಿಧಾನವನ್ನು ನಂಬುತ್ತವೆ ಎಂದು ಹೇಳಿದ್ದರು.
  • ಮುಂದಿನ ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಒಂದೇ ವೇದಿಕೆಯಲ್ಲಿ ಇದ್ದು ಒಟ್ಟಾಗಿ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
AAP ಅನ್ನು ಬಿಜೆಪಿಯ ಬಿ ಟೀಮ್ ಎಂದು ಕರೆದ ವರಿಷ್ಠ ಕಾಂಗ್ರೆಸ್ ಮುಖಂಡ  title=

AAP vs Congress: ಆಮ್ ಆದ್ಮಿ ಪಕ್ಷದ ಸಂಯೋಜಕ ಮತ್ತು ದೆಹಲಿ ಸಿಎಂ ಅರವಿಂದ್ ಕೆಜ್ರಿವಾಲ್ ಅವರು ವಿರೋಧಿಸುತ್ತಿರುವ ದೆಹಲಿ ಸರ್ಕಾರದ ಅಧಿಕಾರವನ್ನು ಮೊಟಕುಗೊಳಿಸುವ ಸುಗ್ರೀವಾಜ್ಞೆಯ ಕುರಿತು ಕಾಂಗ್ರೆಸ್ ನ ವಿಚಾರ ಮಂಥನ ಸರಿಯಾಗಿಯೇ ಇದೆ ಎಂದು ದೆಹಲಿ ಪ್ರದೇಶ್ ಕಾಂಗ್ರೆಸ್ ಸಮಿತಿ ಹೇಳಿದ್ದು, ಕೆಜ್ರಿವಾಲ್ ಅವರನ್ನು ಬಿಜೆಪಿಯ ಬಿ ಟೀಮ್ ಭಾಗ ಎಂದು ಹೇಳಿದ್ದಾರೆ. ಇಂತಹುದೇ ಹೇಳಿಕೆ ಮಧ್ಯಪ್ರದೇಶದಿಂದ ಕೂಡ ಬಂದಿದೆ. ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕ ಜಯವರ್ಧನ್ ಸಿಂಗ್ ಕೂಡ ಆಮ್ ಆದ್ಮಿ ಪಕ್ಷವನ್ನು ಬಿಜೆಪಿಯ ಬಿ ಟೀಮ್ ಎಂದು ಕರೆದಿದ್ದಾರೆ. 

ಯಾರು ಯಾರ ಬಿ-ಟೀಮ್?
ತಮ್ಮ ಹೇಳಿಕೆಯಲ್ಲಿ, ಕಾಂಗ್ರೆಸ್ ಶಾಸಕರು ಮಧ್ಯಪ್ರದೇಶದಲ್ಲಿ ಲೋಕಸಭೆ ಚುನಾವಣೆಯಲ್ಲಿ ಎಎಪಿಗೆ ಯಾವುದೇ ಸ್ಥಾನ ನೀಡುವುದಿಲ್ಲ ಎಂದು ಹೇಳಿದ್ದಾರೆ, ಏಕೆಂದರೆ ಈ ಪಕ್ಷಕ್ಕೆ ರಾಜ್ಯದಲ್ಲಿ ಯಾವುದೇ ನೆಲೆ ಇಲ್ಲ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರ ಪುತ್ರ ಜೈವರ್ಧನ್ ಅವರ ಈ ಹೇಳಿಕೆಯು ದೆಹಲಿ ಸುಗ್ರೀವಾಜ್ಞೆಗೆ ಕಾಂಗ್ರೆಸ್‌ನಿಂದ ಬೆಂಬಲ ಪಡೆಯಲು ವಿಫಲವಾಗಿದೆ ಎಂದು ಎಎಪಿ ಒಂದು ದಿನದ ಹಿಂದೆ ಹೇಳಿದ್ದ ಸಮಯದಲ್ಲಿ ಬಂದಿದೆ. ಇದರಿಂದಾಗಿ ಪಾಟ್ನಾದಲ್ಲಿ ಪ್ರತಿಪಕ್ಷಗಳ ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಗೆ ಆಪ್  ಹಾಜರಾಗಲಿಲ್ಲ.

ಪ್ರತಿಪಕ್ಷಗಳ ಒಗ್ಗಟ್ಟಿನ ಮಂತ್ರ ಜಾಪ ವ್ಯರ್ಥ?
ಮಾಧ್ಯಮಗಳೊಂದಿಗೆ ಮಾತನಾಡಿದ ಜೈವರ್ಧನ್, "ಪ್ರತಿಪಕ್ಷಗಳ ಒಗ್ಗಟ್ಟಿಗೆ, ನಿಮ್ಮ ನಿಲುವನ್ನು ಸ್ಪಷ್ಟಪಡಿಸುವುದು ಅವಶ್ಯಕ" ಎಂದು ಹೇಳಿದ್ದಾರೆ, ನಿನ್ನೆ ಪಾಟ್ನಾದಲ್ಲಿ ಹಾಜರಿದ್ದ ಬಹುತೇಕ ಎಲ್ಲಾ ವಿರೋಧ ಪಕ್ಷಗಳು ಸಂವಿಧಾನವನ್ನು ನಂಬುತ್ತವೆ ಎಂದು ಹೇಳಿದ್ದರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಒಂದೇ ವೇದಿಕೆಯಲ್ಲಿ ಇದ್ದು ಒಟ್ಟಾಗಿ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

'ನೀವು' ನಿಮ್ಮ ನಿಲುವನ್ನು ಸ್ಪಷ್ಟಪಡಿಸಿ'
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಬಲ ನಾಯಕ ಮತ್ತು ಶಾಸಕರು, 'ನಿನ್ನೆಯ ಸಭೆಯಲ್ಲೂ ಆಪ್ ಮೂಲಕ ಕೆಲವು ಕಾಮೆಂಟ್‌ಗಳು ನಮ್ಮ ಒಗ್ಗಟ್ಟಿಗೆ ಸರಿಯಲ್ಲ ಎಂದು ಹೇಳಿರುವುದು ವಿಷಾದದ ಸಂಗತಿ. ಆಮ್ ಆದ್ಮಿ ಪಕ್ಷದ ಕೆಲವು ಕೆಲಸಗಳಿಂದ ಅದು (ಎಎಪಿ) ಬಿಜೆಪಿಯ ಬಿ ಟೀಮ್‌ನಂತೆ ಕೆಲಸ ಮಾಡುತ್ತಿದೆ ಎಂಬುದು ಸ್ಪಷ್ಟವಾದ ಗೋಚರಿಸುತ್ತದೆ.  ಮೊದಲು ನೀವು ಸಂಪೂರ್ಣವಾಗಿ ಕಾಂಗ್ರೆಸ್ ಮತ್ತು ವಿರೋಧ ಪಕ್ಷದ ಜೊತೆ ಇರುತ್ತೀರಾ ಎಂಬುದನ್ನು  ಸ್ಪಷ್ಟಪಡಿಸಬೇಕು ಎಂದು ನಾವು ಬಯಸುತ್ತೇವೆ ಎಂದು ಜಯವರ್ಧನ್ ಹೇಳಿದ್ದಾರೆ. ನೀವು ಕಾಂಗ್ರೆಸ್ ಮತ್ತು ಇತರ ಪಕ್ಷಗಳಿಗೆ ಬದ್ಧರಾಗಿದ್ದರೆ ಅದು ಸ್ವಾಗತಾರ್ಹ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Opposition Meeting: 'ದೇಶಕ್ಕೆ ಗೌರವ ಸಿಗುತ್ತದೆ... ಪ್ರಧಾನಿ ಮೋದಿಗಲ್ಲ' ವಾಪಸ್ಸಾಗುತ್ತಲೇ ಹಿಂದೂ ಮುಸ್ಲಿಂ ಹೇಳುತ್ತಾರೆ ಎಂದ ಮೇಹಬೂಬಾ ಮುಫ್ತಿ

ಎಂಪಿಯಲ್ಲಿ ಎಎಪಿ ಶೂನ್ಯ
ಆಮ್ ಆದ್ಮಿ ಪಕ್ಷವು ಮಧ್ಯಪ್ರದೇಶದ ಚುನಾವಣಾ ಕಣದಲ್ಲಿ ಕಣಕ್ಕಿಳಿದಿರುವ ಮತ್ತು ಲೋಕಸಭೆ ಚುನಾವಣೆಯಲ್ಲಿ ಸ್ಥಾನವನ್ನು ಪಡೆಯುವ ಪ್ರಶ್ನೆಗೆ ಅವರು, 'ಮಧ್ಯಪ್ರದೇಶದಲ್ಲಿ ಆಪ್ ಪಕ್ಷಕ್ಕೆ ಯಾವುದೇ ನೆಲೆಯಿಲ್ಲ ಮತ್ತು ಇದರಲ್ಲಿ ಯಾವುದೇ ಸಂದೇಹವೆ ಇಲ್ಲ ಅವರು ಇಲ್ಲಿ ಅಂತಹ ಯಾವುದೇ ಜನಾಧಾರವನ್ನು ಹೊಂದಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Rahul Gandhi Marriage: 'ಗಡ್ಡ ಬಿಡಬೇಡಿ... ಮದುವೆ ಮಾಡ್ಕೊಳ್ಳಿ' ರಾಹುಲ್ ಗಾಂಧಿಗೆ ಸಲಹೆ ನೀಡಿದ ಲಾಲೂ ಯಾದವ್

ಬಿಜೆಪಿಯೊಂದಿಗೆ ಯಾರು ಸಂಬಂಧ ಹೊಂದಿದ್ದಾರೆ: ಅಜಯ್ ಮಾಕನ್
542 ಲೋಕಸಭಾ ಸಂಸದರ ಪೈಕಿ ಕೇವಲ 1 ಸಂಸದರನ್ನು ಹೊಂದಿರುವ ಪಕ್ಷ ಎಂದರೆ ಅದು ಆಮ್ ಆದ್ಮಿ ಪಕ್ಷ ಎಂದು ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಟ್ವೀಟ್ ಮೂಲಕ ಹೇಳಿದ್ದಾರೆ. ಕೇಂದ್ರದ ಸುಗ್ರೀವಾಜ್ಞೆಯ ವಿರುದ್ಧ ಕಾಂಗ್ರೆಸ್ ಬೆಂಬಲವನ್ನು ಅವರು ಬಯಸುತ್ತಾರೆ ಮತ್ತು ಅದೇ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅದೇ ಕಾಂಗ್ರೆಸ್ ನಾಯಕರ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಹೇಳುತ್ತಿದ್ದಾರೆಯೇ? ಇದು ಅವರ ಬೆಂಬಲ ಕೇಳುವ ವಿಧಾನವೇ? ಕೇಜ್ರಿವಾಲ್ ಜೈಲು ಭಯದಿಂದ ಇದೆಲ್ಲ ಮಾಡುತ್ತಿದ್ದಾರೆ, ಆದರೆ ಅವರು ಭ್ರಷ್ಟಾಚಾರ ಮಾಡಿದಾಗ ಶಿಕ್ಷೆ ಅನುಭವಿಸುತ್ತಾರೆ ಮತ್ತು ಇಲ್ಲಿ ಕಾನೂನಿನ ಆಡಳಿತ ನಡೆಯುತ್ತದೆ ಎಂದು ಹೇಳಿದ್ದಾರೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News