close

News WrapGet Handpicked Stories from our editors directly to your mailbox

ಹಲ್ಲೆ ಪ್ರಕರಣ: ಎಎಪಿ ಶಾಸಕ ಸೋಮ್‌ದತ್‌ಗೆ ಜಾಮೀನು

ಹಲ್ಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಆಮ್ ಆದ್ಮಿ ಪಕ್ಷದ ಶಾಸಕ ಸೋಮ್‌ದತ್‌ಗೆ ದೆಹಲಿ ಹೈಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ.   

Updated: Sep 16, 2019 , 04:38 PM IST
ಹಲ್ಲೆ ಪ್ರಕರಣ: ಎಎಪಿ ಶಾಸಕ ಸೋಮ್‌ದತ್‌ಗೆ ಜಾಮೀನು

ನವದೆಹಲಿ: ಹಲ್ಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಆಮ್ ಆದ್ಮಿ ಪಕ್ಷದ ಶಾಸಕ ಸೋಮ್‌ದತ್‌ಗೆ ದೆಹಲಿ ಹೈಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ. 

ದೆಹಲಿಯ ರೋಹಿಣಿಯ ಜೈಲಿನಲ್ಲಿ ದತ್ ಬಂಧಿತರಾದ ಬಳಿಕ ಸೆಷನ್ ನ್ಯಾಯಾಲಯದ ಆದೇಶದ ವಿರುದ್ಧ ವಕೀಲ ವಿಕಾಸ್ ಪಹ್ವಾ ಮೂಲಕ ಹೈಕೋರ್ಟ್‌ನಲ್ಲಿ ಪರಿಷ್ಕರಣೆ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಈ ಜಾಮೀನು ಆದೇಶ ಹೊರಡಿಸಿದ್ದಾರೆ.

2015ರಲ್ಲಿ ನಡೆದ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯ ಸಂದರ್ಭದಲ್ಲಿ ಸೋಮ್ ದತ್ ತಮ್ಮ ಮೇಲೆ ಹಲ್ಲೆ ಮಾಡಿರುವುದಾಗಿ ಸಂಜೀವ್ ರಾಣಾ ಎಂಬುವರು ದೂರು ಸಲ್ಲಿಸಿದ್ದರು. ಜನವರಿ 10, 2015ರಲ್ಲಿ ನಡೆದ ಈ ಘಟನೆ ಸಂಬಂಧ ಸೋಮ್ ದತ್ ಅವರಿಗೆ 6 ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಿದ್ದರು.