close

News WrapGet Handpicked Stories from our editors directly to your mailbox

ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜೀ ಭಾರತದ ಆರ್ಥಿಕತೆಗೆ ಸಹಾಯ ಮಾಡಬಹುದು- ಪ.ಬಂಗಾಳ ಬಿಜೆಪಿ ಮುಖ್ಯಸ್ಥ

ಒಂದೆಡೆ ಬಿಜೆಪಿ ನಾಯಕರು ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಅವರ ‘ಎಡಪಂಥೀಯ ವಿಚಾರಗಳಿಗಾಗಿ’ ಟೀಕಿಸಿದರೆ, ಬಿಜೆಪಿ ಬಂಗಾಳದ ಮುಖ್ಯಸ್ಥ ದಿಲೀಪ್ ಘೋಷ್ ಅವರು ಬ್ಯಾನರ್ಜಿಯ ಸಲಹೆಯು ದೇಶದ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Updated: Oct 21, 2019 , 02:58 PM IST
ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜೀ ಭಾರತದ ಆರ್ಥಿಕತೆಗೆ ಸಹಾಯ ಮಾಡಬಹುದು- ಪ.ಬಂಗಾಳ ಬಿಜೆಪಿ ಮುಖ್ಯಸ್ಥ

ನವದೆಹಲಿ: ಒಂದೆಡೆ ಬಿಜೆಪಿ ನಾಯಕರು ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಅವರ ‘ಎಡಪಂಥೀಯ ವಿಚಾರಗಳಿಗಾಗಿ’ ಟೀಕಿಸಿದರೆ, ಬಿಜೆಪಿ ಬಂಗಾಳದ ಮುಖ್ಯಸ್ಥ ದಿಲೀಪ್ ಘೋಷ್ ಅವರು ಬ್ಯಾನರ್ಜಿಯ ಸಲಹೆಯು ದೇಶದ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

"ಭಾರತ ಮತ್ತು ಇಡೀ ಪ್ರಪಂಚವು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಅವರು ಉತ್ತಮ ಸಲಹೆಗಳನ್ನು ನೀಡುತ್ತಾರೆ ಎಂದು ನನಗೆ ಖಾತ್ರಿಯಿದೆ. ಅವರದು ದೊಡ್ಡ ವ್ಯಕ್ತಿತ್ವ ಮತ್ತು ನೊಬೆಲ್ ಒಂದು ದೊಡ್ಡ ಸಾಧನೆ. ಇತರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅರ್ಹರಾಗಿದ್ದಾರೆ ”ಎಂದು ಘೋಷ್ ಉತ್ತರ 24 ಪರಗಣದ ಕಾಮರ್ಹತಿಯಲ್ಲಿ ಗಾಂಧಿ ಸಂಕಲ್ಪ ಯಾತ್ರೆ ಸಂದರ್ಭದಲ್ಲಿ ಹೇಳಿದರು.

ಇತ್ತೀಚೆಗೆ, ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಪ್ರಖ್ಯಾತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಅವರನ್ನು ನೊಬೆಲ್ ಪ್ರಶಸ್ತಿ ಗೆದ್ದಿದ್ದಕ್ಕಾಗಿ ಅಭಿನಂದಿಸಿದರು, ಆದರೆ ಅವರ ಎಡಪಂಥೀಯ ನಿಲುವು ಹೊಂದಿರುವುದಕ್ಕೆ ಅವರು ಟೀಕಿಸಿದರು.