ನವದೆಹಲಿ: ವಿವಾದಿತ ಕಾರ್ಯಕರ್ತೆ ರೆಹಾನಾ ಫಾತಿಮಾ ಅವರು ತಮ್ಮ ಅಪ್ರಾಪ್ತ ಮಕ್ಕಳಿಂದ ಟಾಪ್ ಲೆಸ್ ಆಗಿ ತನ ಬಾಡಿ ಪೇಂಟಿಂಗ್ ಮಾಡಿಸಿದ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾಳೆ. ಇದಾದ ಬಳಿಕ ಪೊಲೀಸರು ಆಕೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಫಾತಿಮಾ 2018 ರಲ್ಲಿ ಶಬರಿಮಲೈನ ಸ್ವಾಮಿ ಅಯ್ಯಪ್ಪನ ದೇವಸ್ಥಾನವನ್ನು ಪ್ರವೇಶಿಸಲು ಯತ್ನಿಸಿದ್ದಳು.
ಬಿಜೆಪಿಯ ಒಬಿಸಿ ಮೋರ್ಚಾ ನಾಯಕ ಎ.ವಿ. ಅರುಣ್ ಪ್ರಕಾಶ್ ಅವರು ಮಂಗಳವಾರ ನೀಡಿರುವ ದೂರಿನ ಆಧಾರದ ಮೇಲೆ, ಪಥನಮತ್ತಿಟ್ಟ ಜಿಲ್ಲೆಯ ತಿರುವಲಾ ಪೊಲೀಸರು, ರೆಹಾನಾ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಬಾಲಾಪರಾಧಿ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
'ಬಾಡಿ ಅಂಡ್ ಪಾಲಿಟಿಕ್ಸ್ (ಬಾಡಿ ಅಂಡ್ ಪಾಲಿಟಿಕ್ಸ್)' ಎಂಬ ಶೀರ್ಷಿಕೆಯ ಅಡಿ ಫಾತಿಮಾ ಹಂಚಿಕೊಂಡಿರುವ ಈ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಏತನ್ಮಧ್ಯೆ, ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ಕೇರಳದ ರಾಜ್ಯ ಆಯುಕ್ತರು ಹಾಗೂ ಪಥನಮತ್ತಿಟ್ಟ ಜಿಲ್ಲಾ ಪೋಲಿಸ್ ಆಯುಕ್ತರಿಗೆ ಮುಂದಿನ 10 ದಿನಗಳಲ್ಲಿ ವರದಿ ಸಲ್ಲಿಸುವಂತೆ ಬುಧವಾರ ಸೂಚಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ರೆಹಾನಾ ಹಂಚಿಕೊಂಡಿರುವ ವಿಡಿಯೋದಲ್ಲಿ ರೆಹಾನ ಬೆಡ್ ಮೇಲೆ ಅರ್ಧ ನಗ್ನಾವಸ್ಥೆಯಲ್ಲಿ ಮಲಗಿಕೊಂಡಿದ್ದು, ಆಕೆಯ ಮಕ್ಕಳು ಆಕೆಯ ಶರೀರದ ಮೇಲೆ ಪೇಂಟಿಂಗ್ ಮಾಡುತ್ತಿದ್ದಾರೆ. ಈ ವಿಡಿಯೋ ಅನ್ನು ಫೇಸ್ ಬುಕ್ ಮತ್ತು ಯುಟ್ಯೂಬ್ ಮೇಲೆ ಹಂಚಿಕೊಂಡಿರುವ ಫಾತಿಮಾ, ಕಣ್ಣಿನಲ್ಲಿ ಸೊಂಕಿರುವ ಕಾರಣ ತಾವು ವಿಶ್ರಮಿಸುತ್ತಿದ್ದು, ಈ ವೇಳೆ ತಮ್ಮ ಮಕ್ಕಳು ಶರೀರದ ಮೇಲೆ ಪೇಂಟಿಂಗ್ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾಳೆ. ಇದಕ್ಕೂ ಮೊದಲು ಕೂಡ ರೆಹಾನಾ ಫಾತೀಮಾ ಸಾಮಾಜಿಕ ಮಾಧ್ಯಮಗಳ ಮೇಲೆ ಆಕ್ಷೇಪಾರ್ಹ ಭಾವಚಿತ್ರಗಳನ್ನು ಹಂಚಿಕೊಂಡು 18 ದಿನಗಳ ಸೆರೆವಾಸ ಅನುಭವಿಸಿದ್ದಾಳೆ.