ಆಧಾರ ಕಾರ್ಡ್ ಕಡ್ಡಾಯ: 'ತುಘಲಕ್ ರಾಜ್'ಗೆ ಹೋಲಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯು ಸರ್ಕಾರದ ಯೋಜನೆಗಳನ್ನು ಪಡೆಯಲು ಕೇಂದ್ರ ಸರಕಾರವು ಕಡ್ಡಾಯಗೊಳಿಸಿರುವುದು ಒಂದು ರೀತಿಯಲ್ಲಿ ತುಘಲಕ್ ರಾಜ್ಯದಲ್ಲಿ ಪತಿ ಪತ್ನಿಯನ್ನು ಸಾರ್ವಜನಿಕವಾಗಿ ಮತಾಂತರ ಮಾಡುವಂತಿದೆ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

Last Updated : Nov 21, 2017, 05:22 PM IST
ಆಧಾರ ಕಾರ್ಡ್ ಕಡ್ಡಾಯ: 'ತುಘಲಕ್ ರಾಜ್'ಗೆ ಹೋಲಿಸಿದ ಮಮತಾ ಬ್ಯಾನರ್ಜಿ title=

 ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯು ಸರ್ಕಾರದ ಯೋಜನೆಗಳನ್ನು ಪಡೆಯಲು ಕೇಂದ್ರ ಸರಕಾರವು ಕಡ್ಡಾಯಗೊಳಿಸಿರುವುದು ಒಂದು ರೀತಿಯಲ್ಲಿ ತುಘಲಕ್ ರಾಜ್ಯದಲ್ಲಿ ಪತಿ ಪತ್ನಿಯನ್ನು ಸಾರ್ವಜನಿಕವಾಗಿ ಮತಾಂತರ ಮಾಡುವಂತಿದೆ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಸೋಮವಾರ ಇಲ್ಲಿನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ 12 ಸಂಖ್ಯೆಗಳ ಯೋಜನೆಯನ್ನು  ಬ್ಯಾಂಕಿನ ಖಾತೆ ಮತ್ತು ಮೊಬೈಲ್ ನಂಬರಗಳಿಗೆ  ಕಡ್ಡಾಯ ಗೊಲಿಸಿರುವುದು ಅಪಾಯಕಾರಿ ಎಂದರು. ಇದರ ಮೂಲಕವಾಗಿ ಕೇಂದ್ರಸರ್ಕಾರವು  ತಾಯಿ-ಮಗಳ ,ಗಂಡ-ಹೆಂಡತಿಯ ವೈಯಕ್ತಿಕ ಸಂಭಾಷಣೆಗಳನ್ನೂ ಸರ್ಕಾರ ಆಲಿಸುತ್ತಿದೆ ಎಂದು ಮೋದಿ ಸರ್ಕಾರದ ವಿರುದ್ಡ ಆಕ್ರೋಶ ವ್ಯಕ್ತಪಡಿಸಿದರು.ಈಗಾಗಲೇ ಪಾನ್ ಕಾರ್ಡ್ ಮತದಾನ ಚೀಟಿಗಳಿವೆ ಆದರೆ ಸದ್ಯ ಆಧಾರ ಕಾರ್ಡಿನ ಹೆಸರಲ್ಲಿ  ನಡೆಯುತ್ತಿರುವ ಎಲ್ಲ ಸಂಗತಿಗಳು ಯಾವುದೇ ವ್ಯಕ್ತಿ ಮತ್ತು ಸಮಾಜಕ್ಕೆ ಒಳ್ಳೆಯದಲ್ಲ ಎಂದು ತಿಳಿಸಿದರು.

 ಈ ಹಿಂದೆ ಅಕ್ಟೋಬರ್ 30 ರಂದು ಮಮತಾ ಬ್ಯಾನರ್ಜಿ ಸರ್ಕಾರವು ಸರ್ಕಾರದ ಯೋಜನೆಗಳ ಉಪಯೋಗ ಪಡೆದುಕೊಳ್ಳಲು ಕೇಂದ್ರ ಸರ್ಕಾರವು ಕಡ್ಡಾಯ ಗೊಳಿಸಿರುವ ಯೋಜನೆಯನ್ನು  ಖಂಡಿಸಿ ಕೋರ್ಟ್ ನ ಮೆಟ್ಟಿಲೇರಿದ್ದರು ಅಲ್ಲದೆ ಈ ಯೋಜನೆ ಒಕ್ಕೂಟ ವ್ಯವಸ್ತೆಗೆ ಅಪಾಯಕಾರಿ ಎಂದು ಕೋರ್ಟ್ ಗೆ ತಿಳಿಸಿದ್ದರು.ಆದರೆ ಇದಕ್ಕೆ ಪ್ರತಿಕ್ರಿಯಿಸಿದ  ಕೋರ್ಟ್ ವೈಯಕ್ತಿಕ ಅರ್ಜಿಯ ಮೂಲಕ ಕೋರ್ಟ್ ಗೆ ಮನವಿ ಮಾಡಿಕೊಳ್ಳಿ ಎಂದು ಈ ಅರ್ಜಿಯನ್ನು  ಸಾರಸಗಟಾಗಿ ತಿರಸ್ಕರಿಸಿದ್ದನ್ನು ಈ ಸಂಧರ್ಭದಲ್ಲಿ ನೆನೆಯಬಹುದು.
   

Trending News