ಉದ್ಧವ್ ಠಾಕ್ರೆ ಶಪಥ ಸಮಾರಂಭಕ್ಕೆ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಆಹ್ವಾನಿಸಿದ ಆದಿತ್ಯ ಠಾಕ್ರೆ

ಆದಿತ್ಯ ಠಾಕ್ರೆ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಇಬ್ಬರನ್ನೂ ಭೇಟಿಯಾಗಿ, ಅವರ ತಂದೆ ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವ ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನಿಸಿದರು.

Last Updated : Nov 28, 2019, 08:02 AM IST
ಉದ್ಧವ್ ಠಾಕ್ರೆ ಶಪಥ ಸಮಾರಂಭಕ್ಕೆ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಆಹ್ವಾನಿಸಿದ ಆದಿತ್ಯ ಠಾಕ್ರೆ title=
Pic courtesy: Twitter/@INCIndia

ನವದೆಹಲಿ: ಶಿವಸೇನೆ ಮುಖಂಡ ಆದಿತ್ಯ ಠಾಕ್ರೆ ಅವರು ಬುಧವಾರ (ನವೆಂಬರ್ 27) ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್ ಅವರನ್ನು ನವದೆಹಲಿಯಲ್ಲಿ ಭೇಟಿಯಾದರು. ಈ ಸಂದರ್ಭದಲ್ಲಿ ಅವರ ತಂದೆ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಗುರುವಾರ (ನವೆಂಬರ್ 28) ರಂದು ಸಂಜೆ  6 : 40ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದು, ಈ ಸಮಾರಂಭದಲ್ಲಿ ಹಾಜರಿರುವಂತೆ ಅವರನ್ನು ಆಹ್ವಾನಿಸಿದರು.

ಅಕ್ಟೋಬರ್ 2019ರಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ವರ್ಲಿ ವಿಧಾನಸಭಾ ಕ್ಷೇತ್ರದಿಂದ ಗೆದ್ದ ಆದಿತ್ಯ ಠಾಕ್ರೆ ಅವರು ಸೋನಿಯಾ ಗಾಂಧಿ(Sonia Gandhi)ಯವರನ್ನು ಅವರ 10, ಜನಪಥ್ ನಿವಾಸದಲ್ಲಿ ಭೇಟಿಯಾದರು. ನಂತರ ಕಾಂಗ್ರೆಸ್ ಉಭಯ ನಾಯಕರ ಭೇಟಿಯ ಫೋಟೋವನ್ನು ಟ್ವೀಟ್ ಮಾಡಿದೆ.

ಕಾಂಗ್ರೆಸ್(Congress) ಸೇರಿದಂತೆ ಮೂರು ಪಕ್ಷಗಳ ಒಕ್ಕೂಟದ 'ಮಹಾ ವಿಕಾಸ್ ಅಘಾಡಿ' (MVA) ಯ ಭಾಗವಾಗಿದೆ, ಇದರಲ್ಲಿ ಶಿವಸೇನೆ(Shiv Sena) ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ(NCP)ವೂ ಸೇರಿದೆ. ಮುಂಬೈನ ಅಪ್ರತಿಮ ಶಿವಾಜಿ ಉದ್ಯಾನವನದಲ್ಲಿ ನಡೆಯಲಿರುವ ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿಸಲು ಸೋನಿಯಾ ಗಾಂಧಿಯವರನ್ನು ಭೇಟಿಯಾಗಲು ಹೋಗಿದ್ದೆ ಎಂದು 29 ವರ್ಷದ ಆದಿತ್ಯ ಸೋನಿಯಾ ಭೇಟಿಯ ಬಗ್ಗೆ ಮಾಹಿತಿ ನೀಡಿದರು.

ಬಳಿಕ ಮಾಜಿ ಪ್ರಧಾನಿ ಮನಮೋಹನ್ ಸಿಂಗ(Manmohan Singh) ಅವರ ನಿವಾಸಕ್ಕೆ ತೆರಳಿದ ಆದಿತ್ಯ ಠಾಕ್ರೆ(Aaditya Thackeray), ಮಹಾರಾಷ್ಟ್ರದಲ್ಲಿ ಎಂವಿಎ ಸರ್ಕಾರವನ್ನು ಮುನ್ನಡೆಸಲಿರುವ ಶಿವಸೇನೆ ಮುಖ್ಯಸ್ಥರಾದ ಉದ್ಧವ್ ಠಾಕ್ರೆ(Uddhav Thackeray) ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸುವಂತೆ ಅವರಿಗೂ ಆಹ್ವಾನ ನೀಡಿದರು. ಆದಿತ್ಯ ಅವರೊಂದಿಗೆ ಶಿವಸೇನೆ ಕಾರ್ಯದರ್ಶಿ ಮಿಲಿಂದ್ ನರ್ವೇಕರ್ ಕೂಡ ಉಪಸ್ಥಿತರಿದ್ದರು.

ಏತನ್ಮಧ್ಯೆ, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi)ಯವರ ಪಿಎಂಒ ಕಚೇರಿಗೆ ಆಮಂತ್ರಣ ಪತ್ರವನ್ನು ಕಳುಹಿಸಿದ ನಂತರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಅವರನ್ನೂ ಆಹ್ವಾನಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಉದ್ಧವ್ ಠಾಕ್ರೆ ಅವರನ್ನು ಅಭಿನಂದಿಸಿದರು. ವಿಶೇಷವಾಗಿ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ಉದ್ಧವ್ ಠಾಕ್ರೆ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳ ಸುಮಾರು 400 ರೈತರನ್ನು ಆಹ್ವಾನಿಸಿದ್ದಾರೆ.

ಇದಕ್ಕೂ ಮುನ್ನ ಬುಧವಾರ ಎನ್‌ಸಿಪಿ ಹಿರಿಯ ಮುಖಂಡ ಪ್ರಫುಲ್ ಪಟೇಲ್ ಅವರು ಹೊಸ ಮಹಾರಾಷ್ಟ್ರ ಸರ್ಕಾರದ ಏಕೈಕ ಉಪಮುಖ್ಯಮಂತ್ರಿ ತಮ್ಮ ಪಕ್ಷದಿಂದ ಬರುತ್ತಾರೆ ಮತ್ತು ವಿಧಾನಸಭಾ ಸ್ಪೀಕರ್ ಹುದ್ದೆ ಕಾಂಗ್ರೆಸ್‌ಗೆ ಹೋಗಲಿದೆ ಎಂದು ಖಚಿತಪಡಿಸಿದರು. ಮಹಾರಾಷ್ಟ್ರ ನೂತನ ಸರ್ಕಾರದಲ್ಲಿ ಒಬ್ಬ ಉಪಮುಖ್ಯಮಂತ್ರಿ ಮಾತ್ರ ಇರುತ್ತಾರೆ ಮತ್ತು ಅದು ಎನ್‌ಸಿಪಿಯಿಂದ ಎಂದು ಅವರು ಸ್ಪಷ್ಟಪಡಿಸಿದರು.

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್(Sharad Pawar) ಅವರ ಸೋದರಳಿಯ ಅಜಿತ್ ಪವಾರ್(Ajit Pawar) ಉಪಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್(Prithviraj Chavan) ಅವರು ಸ್ಪೀಕರ್ ಹುದ್ದೆಗೆ ಮುಂಚೂಣಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಮಂಗಳವಾರ (ನವೆಂಬರ್ 26) ಮೂರು ಪಕ್ಷಗಳ ಮೈತ್ರಿಕೂಟದ ನಾಯಕರಾಗಿ ಉದ್ಧವ್ ಠಾಕ್ರೆ ಸರ್ವಾನುಮತದಿಂದ ಆಯ್ಕೆಯಾದರು. ಎನ್‌ಸಿಪಿ, ಕಾಂಗ್ರೆಸ್ ಮತ್ತು ಶಿವಸೇನೆಯ ಶಾಸಕರು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರನ್ನು ಭೇಟಿ ಮಾಡಿ ಉದ್ದವ್ ಠಾಕ್ರೆ ಅವರನ್ನು ತಮ್ಮ ನಾಯಕರನ್ನಾಗಿ ಘೋಷಿಸುವ ಪತ್ರವನ್ನು ಸಲ್ಲಿಸಿದ್ದರು, ಅದರ ನಂತರ ನವೆಂಬರ್ 28 ರಂದು ರಾಜ್ಯದ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಅವರನ್ನು ಕೇಳಲಾಯಿತು.

ಮಂಗಳವಾರ 'ಮಹಾ' ಬಿಕ್ಕಟ್ಟಿನ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರವಾಗಿ ತೀರ್ಪು ಪ್ರಕಟಿಸಿದ ಸುಪ್ರೀಂಕೋರ್ಟ್,  "ಮಹಾರಾಷ್ಟ್ರ ಸರ್ಕಾರಕ್ಕೆ ಬುಧವಾರ ಸಂಜೆ 5 ಗಂಟೆಯೊಳಗೆ ಬಹುಮತ ಸಾಬೀತು ಪಡಿಸುವಂತೆ ಆದೇಶ ನೀಡಿತ್ತು. ಜೊತೆಗೆ ಇದನ್ನು ಲೈವ್ ಟೆಲಿಕಾಸ್ಟ್ ಮಾಡಲು ಸೂಚಿಸಿತ್ತು.  288 ಸದಸ್ಯರ ವಿಧಾನಸಭೆಯಲ್ಲಿ ಬುಧವಾರ ಸಂಜೆ 5 ಗಂಟೆಯ ಮೊದಲು ತನ್ನ ಬಹುಮತವನ್ನು ಸಾಬೀತುಪಡಿಸುವಂತೆ ಸುಪ್ರೀಂ ಕೋರ್ಟ್ ಫಡ್ನವೀಸ್ ಸರ್ಕಾರವನ್ನು ಕೋರಿತ್ತು. ಆದರೆ ಬಹುಮತಕ್ಕೆ ಅಗತ್ಯವಾದ ಸಂಖ್ಯಾಬಲ ಹೊಂದಿರದ ಕಾರಣ ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್(Devendra Fadnavis) ಅವರು ಮಂಗಳವಾರ ಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮ ರಾಜೀನಾಮೆ  ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದರು.
 

Trending News