ಶೀಘ್ರವೇ ನೀವು ಸ್ವೈಪ್ ಮಾಡದೆಯೇ ನಿಮ್ಮ Debit Cardನಿಂದ ಹಣ ಪಾವತಿಸಬಹುದು..ಹೇಗೆ?

ನಿಮ್ಮ ವ್ಯವಹಾರವನ್ನು ಸುರಕ್ಷಿತಗೊಳಿಸುವುದು  ಹಾಗೂ ಸಂಪರ್ಕ ರಹಿತಗೊಳಿರುವುದು ಇದು ಇದರ ಮುಖ್ಯ ಉದ್ದೇಶವಾಗಿದೆ.  ಕೊರೊನಾ ಸಂಕಷ್ಟದ ಕಾಲದಲ್ಲಿ ಮತ್ತು ಅದರ ಬಳಿಕ ಈ ಕ್ರಮ ತುಂಬಾ ಸಹಕಾರಿಯಾಗಲಿದೆ.

Last Updated : May 1, 2020, 02:21 PM IST
ಶೀಘ್ರವೇ ನೀವು ಸ್ವೈಪ್ ಮಾಡದೆಯೇ ನಿಮ್ಮ Debit Cardನಿಂದ ಹಣ ಪಾವತಿಸಬಹುದು..ಹೇಗೆ?  title=

ಮುಂಬೈ: ಇನ್ಮುಂದೆ ಶೀಘ್ರದಲ್ಲಿಯೇ ನೀವು ನಿಮ್ಮ ಡೆಬಿಟ್ ಕಾರ್ಡ್ ಅನ್ನು ಎಲ್ಲಿಯೂ ಇನ್ಸರ್ಟ್ ಮಾಡದೆ ಹಾಗೂ ಸ್ವೈಪ್ ಮಾಡದೆಯೇ ನಿಮ್ಮ ಬಿಲ್ ಅನ್ನು ಪಾವತಿಸಬಹುದಾಗಿದೆ. ರಿಟೇಲ್ ಹಾಗೂ ಶಾಪಿಂಗ್ ಸೆಂಟರ್ ಗಳಲ್ಲಿ ಎಲ್ಲ ರೀತಿಯ ಖರೀದಿಗಾಗಿ ಈ ಸೌಲಭ್ಯ ಸಿಗಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲ ಪೇಮೆಂಟ್ ನೆಟ್ವರ್ಕ್ ಗಳಿಗೆ ಈ ರೀತಿಯ ಸೌಕರ್ಯ ಆರಂಭಿಸಲು ಹಸಿರು ನಿಶಾನೆ ನೀಡಿದೆ. ಈ ಪೇಮೆಂಟ್ ನೆಟ್ವರ್ಕ್ ಗಳಲ್ಲಿ ವಿಜಾ, ಮಾಸ್ಟರ್ ಕಾರ್ಡ್ ಹಾಗೂ NPCIಗಳೂ ಕೂಡ ಶಾಮೀಲಾಗಿವೆ. ನಿಮ್ಮ ವ್ಯವಹಾರವನ್ನು ಸುರಕ್ಷಿತಗೊಳಿಸುವುದು  ಹಾಗೂ ಸಂಪರ್ಕ ರಹಿತಗೊಳಿರುವುದು ಇದು ಇದರ ಮುಖ್ಯ ಉದ್ದೇಶವಾಗಿದೆ.  ಕೊರೊನಾ ಸಂಕಷ್ಟದ ಕಾಲದಲ್ಲಿ ಮತ್ತು ಅದರ ಬಳಿಕ ಈ ಕ್ರಮ ತುಂಬಾ ಸಹಕಾರಿಯಾಗಲಿದೆ

ನಿಮ್ಮ ಬ್ಯಾಂಕ್ ಗಳು ಹಾಗೂ ಪೇಮೆಂಟ್ ಸೇವೆ ಒದಗಿಸುವ ಕಂಪನಿಗಳು ಈ ಅಪ್ಡೇಟ್ ಮಾಡುತ್ತಿದ್ದಂತೆ ನೀವು ಈ ಸೇವೆಯನ್ನು ಬಳಸಬಹುದಾಗಿದೆ. ಇದರ ಅರ್ಥ ಯಾವ ಅಂಗಡಿಗಳಲ್ಲಿ ಕಾಂಟಾಕ್ಟ್ ಲೆಸ್ ಪಾಯಿಂಟ್ ಆಫ್  ಸೆಲ್ ಉಪಕರಣಗಳಿರಲಿವೆಯೋ ಅಂತಹ ಅಂಗಡಿಗಳಲ್ಲಿ ಖರೀದಿ ಮಾಡಿದ ಬಳಿಕ ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಸ್ವೈಪ್ ಮಾಡುವ ಅವಶ್ಯಕತೆ ಬೀಳುವುದಿಲ್ಲ ಎಂದರ್ಥ. ಸದ್ಯ ಇಂತಹ ಖರೀದಿಗಳಿಗಾಗಿ 2000 ರೂಪಾಯಿಗಳ ಮಿತಿಯನ್ನು ಹೇರಲಾಗಿದೆ. ಆದರೆ, ಒಮ್ಮೆ ಎಲ್ಲೆಡೆ ಈ ಸೇವೆ ಜಾರಿಯಾದ ಬಳಿಕ ಯಾವುದೇ ಮಿತಿಯ ಅವಶ್ಯಕತೆ ಬೀಳುವುದಿಲ್ಲ ಎನ್ನಲಾಗಿದೆ.

ಸದ್ಯ ರೂ.2000ಕ್ಕಿಂತ ಹೆಚ್ಚಿನ ಮೌಲ್ಯದ ಶಾಪಿಂಗ್ ಗೆ ಟ್ಯಾಪ್ ಅಂಡ್ ಗೋ ಕಾರ್ಡ್ ನಲ್ಲಿ ಟೂ ಫ್ಯಾಕ್ಟರ್ ಅಥಾಂಟಿಕೆಶನ್ ನ ಅವಶ್ಯಕತೆ ಇದೆ. ಇಲ್ಲಿ ನೀವು ನಿಮ್ಮ ಪಿನ್ ನಮೂದಿಸುವುದು ಅನಿವಾರ್ಯವಾಗಿದೆ. 

ಇದಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಮೂರು ಕಾರ್ಡ್ ನೆಟ್ವರ್ಕ್ ಗಳಿಗೆ ಇ-ಮೇಲ್ ಕಳುಹಿಸಿದ್ದು, ಇ-ಮೇಲ್ ಪ್ರಕಾರ "EMV ಚಿಪ್ ಹಾಗೂ ಪಿನ್ ಹೊಂದಿರುವ ಕಾರ್ಡ್ ಗಳು ಎಲ್ಲೆಲ್ಲಿ ಅವಶ್ಯಕತೆ ಇವೆಯೋ ಅವುಗಳನ್ನು ಕಾಂಟಾಕ್ಟ್ ಲೆಸ್ ಕೂಡ ಮಾಡಬಹುದು ಮತ್ತು ಇದರಲ್ಲಿ ಟ್ರಾನ್ಸಾಕ್ಶನ್ ಮೌಲ್ಯದ ಯಾವುದೇ ಮಿತಿಯ ಅವಶ್ಯಕತೆ ಬೀಳುವುದಿಲ್ಲ" ಎಂದು ಹೇಳಿದೆ.

ಟ್ಯಾಪ್ ಅಂಡ್ ಗೋ ಟ್ರಾನ್ಸಾಕ್ಶನ್ ನಲ್ಲಿ ರೇಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್ ಟೆಕ್ನಾಲಜಿಯ ಬಳಕೆ ಮಾಡಲಾಗುತ್ತದೆ. ಈ ತಂತ್ರಜ್ಞಾನದಲ್ಲಿ ಪೇಮೆಂಟ್ ಟರ್ಮಿನಲ್ ಗಳಲ್ಲಿ ನಿಮ್ಮ ಕಾರ್ಡ್ ಗಳ ಭೌತಿಕ ಸ್ಪರ್ಶದ ಅಗತ್ಯತೆ ಬೀಳುತ್ತದೆ. ಹೀಗಾಗಿ ನೀವು ನಿಮ್ಮ ಕಾರ್ಡ್ ಅನ್ನು ಎಲ್ಲಿಯೂ ಕೂಡ ಇನ್ಸರ್ಟ್ ಅಥವಾ ಸ್ವೈಪ್ ಮಾಡುವ ಅಗತ್ಯತೆ ಇಲ್ಲ.

ಆದರೆ ಇದೆ ವೇಳೆ ಯಾವ ಸ್ಥಳಗಳಲ್ಲಿ ಈ ರೀತಿಯ ವಿಕಲ್ಪ ಲಭ್ಯವಿಲ್ಲವೋ ಅಲ್ಲಿ ಸಾಂಪ್ರದಾಯಿಕ ಸ್ವೈಪ್ ಟ್ರಾನ್ಸಾಕ್ಶನ್ ಸೌಲಭ್ಯ ಮುಂದುವರೆಸಬಹುದು ಎಂದು ಕೇಂದ್ರೀಯ ಬ್ಯಾಂಕ್ ಇದೆ ವೇಳೆ ಸ್ಪಷ್ಟಪಡಿಸಿದೆ.

Trending News