"ಮಮತಾ ದೀದಿ ಹೇಳಿದ್ದೆಲ್ಲವೂ ನನ್ನ ಕಿವಿಗೆ ಸಂಗೀತದಂತೆ"

ತೃಣಮೂಲ ಕಾಂಗ್ರೆಸ್ ಸೇರಿದ ಎರಡು ದಿನಗಳ ನಂತರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಭೇಟಿಯಾದ ಮಾಜಿ ಬಿಜೆಪಿ ಸಚಿವ ಬಾಬುಲ್ ಸುಪ್ರಿಯೋ ಅವರು ದೀದಿ ಜೊತೆಗಿನ ಮಾತುಕತೆ ಸಂಗೀತದಂತೆ ಇತ್ತು ಎಂದು ಹೇಳಿದ್ದಾರೆ.

Written by - Zee Kannada News Desk | Last Updated : Sep 20, 2021, 07:35 PM IST
  • ತೃಣಮೂಲ ಕಾಂಗ್ರೆಸ್ ಸೇರಿದ ಎರಡು ದಿನಗಳ ನಂತರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಭೇಟಿಯಾದ ಮಾಜಿ ಬಿಜೆಪಿ ಸಚಿವ ಬಾಬುಲ್ ಸುಪ್ರಿಯೋ ಅವರು ದೀದಿ ಜೊತೆಗಿನ ಮಾತುಕತೆ ಸಂಗೀತದಂತೆ ಇತ್ತು ಎಂದು ಹೇಳಿದ್ದಾರೆ.
"ಮಮತಾ ದೀದಿ ಹೇಳಿದ್ದೆಲ್ಲವೂ ನನ್ನ ಕಿವಿಗೆ ಸಂಗೀತದಂತೆ" title=
Photo Courtesy: ANI

ನವದೆಹಲಿ: ತೃಣಮೂಲ ಕಾಂಗ್ರೆಸ್ ಸೇರಿದ ಎರಡು ದಿನಗಳ ನಂತರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಭೇಟಿಯಾದ ಮಾಜಿ ಬಿಜೆಪಿ ಸಚಿವ ಬಾಬುಲ್ ಸುಪ್ರಿಯೋ ಅವರು ದೀದಿ ಜೊತೆಗಿನ ಮಾತುಕತೆ ಸಂಗೀತದಂತೆ ಇತ್ತು ಎಂದು ಹೇಳಿದ್ದಾರೆ.

ಅಸನ್ಸೋಲ್‌ನ ಸಂಸದ ಸುಪ್ರಿಯೋ (Babul Supriyo) ಮಮತಾ ಬ್ಯಾನರ್ಜಿಯನ್ನು ಭೇಟಿ ಮಾಡಲು ನಬಣ್ಣಾಗೆ ಭೇಟಿ ನೀಡಿದರು."ದೀದಿ ಅವರನ್ನು ಭೇಟಿಯಾಗುವುದು ತುಂಬಾ ಸಂತೋಷವಾಗಿದೆ. ನಾವು ಬಹಳ ಒಳ್ಳೆಯ ಚರ್ಚೆ ನಡೆಸಿದ್ದೇವೆ. ಬಂಗಾಳಕ್ಕಾಗಿ ಕೆಲಸ ಮಾಡಲು ಮತ್ತು ಜನರ ಸೇವೆ ಮಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಿದ್ದೇನೆ' ಎಂದು ತಿಳಿಸಿದರು.

ಇದನ್ನೂ ಓದಿ: ಟಿಎಂಸಿ ಸೇರಿದ ಬಿಜೆಪಿ ಮಾಜಿ ಸಂಸದ ಬಾಬುಲ್ ಸುಪ್ರಿಯೋ

ಬಿಜೆಪಿಯಲ್ಲಿದ್ದಾಗ ಬ್ಯಾನರ್ಜಿಯವರ ತೀವ್ರ ಟೀಕಾಕಾರರಾಗಿದ್ದ ಸುಪ್ರಿಯೋ 'ನಾವು ತುಂಬಾ ಸಂಗೀತದ ಮಾತುಕತೆ ನಡೆಸಿದ್ದೇವೆ.ಅವರು ಏನೇ ಹೇಳಿದರೂ ಅದು ನನ್ನ ಕಿವಿಗೆ ಸಂಗೀತದಂತೆ.ಟಿಎಂಸಿ ಕುಟುಂಬಕ್ಕೆ ನನ್ನನ್ನು ಪ್ರೀತಿಯಿಂದ ಸ್ವಾಗತಿಸಿದ್ದಕ್ಕಾಗಿ ದೀದಿ ಮತ್ತು ಅಭಿಷೇಕ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರು ನನಗೆ ಪೂರ್ಣ ಮನಸ್ಸಿನಿಂದ ಕೆಲಸ ಮಾಡಲು ಮತ್ತು ಹಾಡಲು ಹೇಳಿದ್ದಾರೆ ಎಂದು ಸುಪ್ರಿಯೋ ತಿಳಿಸಿದರು.

ಇದನ್ನೂ ಓದಿ: ಟಿಎಂಸಿಗೆ ಸೇರಿದ ನಂತರ ಬಾಬುಲ್ ಸುಪ್ರಿಯೋ ಭದ್ರತೆ ಕಡಿತಗೊಳಿಸಿದ ಕೇಂದ್ರ

ಟಿಎಂಸಿಯಲ್ಲಿ ತಮ್ಮ ಜವಾಬ್ದಾರಿಗಳ ಬಗ್ಗೆ ಕೇಳಿದಾಗ,ಸುಪ್ರಿಯೋ ಅದನ್ನು ಪಕ್ಷ ನಿರ್ಧರಿಸುತ್ತದೆ ಎಂದು ಹೇಳಿದರು."ನಾನು ಅದರ ಬಗ್ಗೆ ಹೇಳಲು ಏನೂ ಇಲ್ಲ. ಪಕ್ಷ ಮತ್ತು ಮಮತಾ ಬ್ಯಾನರ್ಜಿ ನಿರ್ಧರಿಸುತ್ತಾರೆ.ಇದು ಅವರಿಗಿರುವ ಪರಮಾಧಿಕಾರ" ಎಂದು ಹೇಳಿದರು.ಶನಿವಾರ ಔಪಚಾರಿಕವಾಗಿ ಪಕ್ಷಕ್ಕೆ ಸೇರಿದ ನಂತರ ಬ್ಯಾನರ್ಜಿಯೊಂದಿಗೆ ಸುಪ್ರಿಯೋ ಅವರ ಮೊದಲ ಭೇಟಿಯಾಗಿದೆ.

ಈ ಹಿಂದೆ ಅವರು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಒಳ್ಳೆಯ ಕೆಲಸ ಮಾಡಿದ ನಂತರವೂ ತಮ್ಮನ್ನು ಕೇಂದ್ರ ಸಚಿವ ಸಂಪುಟದಿಂದ ಕೈ ಬಿಟ್ಟಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. "ನನ್ನ ಉತ್ತಮ ಸ್ನೇಹಿತ ಡೆರೆಕ್ ಒ'ಬ್ರೇನ್ ತೃಣಮೂಲ ಕಾಂಗ್ರೆಸ್ ಗೆ ಸೇರುತ್ತಿರಾ ಎಂದು ಕೇಳಿದಾಗ ನನಗೆ ಆಶ್ಚರ್ಯವಾಯಿತು. ನಾನು ಒಂದು ಒಳ್ಳೆಯ ಅವಕಾಶಕ್ಕೆ ಪ್ರತಿಕ್ರಿಯಿಸಿದ್ದೇನೆ ಎಂದು ಅವರು ತಿಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News