'ಮಿಷನ್ ಕಾಶ್ಮೀರ'ದ ಕ್ರಮಕ್ಕಾಗಿ ಮೋದಿ-ಶಾರನ್ನು ಕೃಷ್ಣಾರ್ಜುನ್ ರಿಗೆ ಹೋಲಿಸಿದ ರಜನಿಕಾಂತ್

ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿರುವ 370 ನೇ ವಿಧಿಯನ್ನು ರದ್ದುಗೊಳಿಸುವ ಎನ್‌ಡಿಎ ಸರ್ಕಾರದ ಕ್ರಮಕ್ಕೆ ರಜನಿಕಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Last Updated : Aug 11, 2019, 06:12 PM IST
'ಮಿಷನ್ ಕಾಶ್ಮೀರ'ದ ಕ್ರಮಕ್ಕಾಗಿ ಮೋದಿ-ಶಾರನ್ನು ಕೃಷ್ಣಾರ್ಜುನ್ ರಿಗೆ ಹೋಲಿಸಿದ ರಜನಿಕಾಂತ್  title=
ANI PHOTO

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿರುವ 370 ನೇ ವಿಧಿಯನ್ನು ರದ್ದುಗೊಳಿಸುವ ಎನ್‌ಡಿಎ ಸರ್ಕಾರದ ಕ್ರಮಕ್ಕೆ ರಜನಿಕಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ಎರಡು ವರ್ಷಗಳ ಆಡಳಿತಾವಧಿ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಜನಿಕಾಂತ್ ಕೇಂದ್ರ ಸರ್ಕಾರದ ಕ್ರಮವನ್ನು ಶ್ಲಾಘಿಸಿದರು. ಈ ಮಿಶನ್ ಕಾಶ್ಮೀರಕ್ಕೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ತಮಿಳು ಮೆಗಾಸ್ಟಾರ್ ಅಭಿನಂದಿಸಿ ಈ ಜೋಡಿಯನ್ನು 'ಕೃಷ್ಣ ಮತ್ತು ಅರ್ಜುನ್' ಎಂದು ಹೊಗಳಿದ್ದಾರೆ.

'ಮಿಷನ್ ಕಾಶ್ಮೀರ ಕಾರ್ಯಾಚರಣೆಗಾಗಿ ಅಮಿತ್ ಶಾ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ನೀವು ಅದನ್ನು ನಡೆಸಿದ ರೀತಿ, ವಿಶೇಷವಾಗಿ ನೀವು ಸಂಸತ್ತಿನಲ್ಲಿ ಮಾಡಿದ ಭಾಷಣ ಅದ್ಭುತವಾಗಿತ್ತು. ಅಮಿತ್ ಶಾ ಜಿ ಮತ್ತು ಮೋದಿ ಜಿ ಕೃಷ್ಣ-ಅರ್ಜುನರ ಜೋಡಿಯಂತೆ ' ಎಂದರು.ಇದೇ ವೇಳೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ರನ್ನು ಹೊಗಳಿದ ರಜನಿಕಾಂತ್, ನಾಯ್ಡು ಅವರು ಜನರ ಕಲ್ಯಾಣದಲ್ಲಿ ಆಸಕ್ತಿ ಹೊಂದಿರುವ ಸಂಪೂರ್ಣ ಆಧ್ಯಾತ್ಮಿಕ ವ್ಯಕ್ತಿ ಎಂದು ಹೊಗಳಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್, ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್, ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಒ ಪನ್ನೀರ್ಸೆಲ್ವಂ ಭಾಗವಹಿಸಿದ್ದರು.

Trending News