ದುಬಾರಿ ದುನಿಯಾ : ಹಾಲಿನ ದರ ಏರಿಸಿದ ಅಮುಲ್, ನಾಳೆಯಿಂದಲೇ ಹೊಸ ದರ ಜಾರಿ

Amul Price Hike : ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಅಡ್ಡಪರಿಣಾಮವು ದೈನಂದಿನ ವಿಷಯಗಳ ಮೇಲೆ ಬೀರಲು ಆರಂಭಿಸಿದೆ. ಅಮುಲ್ ಹಾಲಿನ ಬೆಲೆಯನ್ನು  ಲೀಟರ್‌ಗೆ 2 ರೂ ಏರಿಕೆ ಮಾಡಿದೆ.

Written by - Ranjitha R K | Last Updated : Jun 30, 2021, 03:46 PM IST
  • ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನತೆ ತತ್ತರ
  • ಹಾಲಿನ ಬೆಲೆ ಏರಿಸಿದ ಅಮುಲ್ ಕಂಪನಿ
  • ಪ್ರತಿ ಲೀಟರ್ ಮೇಲೆ 2 ರೂ. ಹೆಚ್ಚಳ
ದುಬಾರಿ  ದುನಿಯಾ : ಹಾಲಿನ ದರ ಏರಿಸಿದ ಅಮುಲ್, ನಾಳೆಯಿಂದಲೇ ಹೊಸ ದರ ಜಾರಿ title=
ಹಾಲಿನ ಬೆಲೆ ಏರಿಸಿದ ಅಮುಲ್ ಕಂಪನಿ (photo zee news)

ನವದೆಹಲಿ : Amul Price Hike : ಸಾಮಾನ್ಯ ಜನರು ಕರೋನಾ ಸಾಂಕ್ರಾಮಿಕ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಏರಿಕೆಯಿಂದ (petrol diesel price hike) ತತ್ತರಿಸಿ ಹೋಗಿದ್ದಾರೆ. ಈ ಮಧ್ಯೆ, ಬಹುತೇಕ ಎಲ್ಲಾ ವಸ್ತುಗಳ ಬೆಲೆಯಲ್ಲೂ ಏರಿಕೆಯಾಗಿದೆ.   ಇದೀಗ ಅಮೂಲ್ ಕಂಪನಿ (Amul price hike) ತನ್ನ ಹಾಲಿನ ಬೆ;ಲೆಯನ್ನು ಕೂಡಾ ಹೆಚ್ಚಳ ಮಾಡಿದೆ. ನಾಳೆಯಿಂದಲೆ ಹೊಸ ದರ ಜಾರಿಗೆ ಬರಲಿದೆ. 

ಪ್ರತಿ ಲೀಟರ್‌ಗೆ 2 ರೂ ಹೆಚ್ಚಳ:
ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಅಡ್ಡಪರಿಣಾಮವು ದೈನಂದಿನ ವಿಷಯಗಳ ಮೇಲೆ ಬೀರಲು ಆರಂಭಿಸಿದೆ. ಅಮುಲ್ ಹಾಲಿನ ಬೆಲೆಯನ್ನು (Amul milk price) ಲೀಟರ್‌ಗೆ 2 ರೂ ಏರಿಕೆ ಮಾಡಿದೆ. ದೇಶದ ಎಲ್ಲಾ ರಾಜ್ಯಗಳಲ್ಲಿನ ಹೊಸ ಬೆಲೆಗಳು ನಾಳೆಯಿಂದ ಅಂದರೆ ಜುಲೈ 1, ರಿಂದ ಅನ್ವಯವಾಗುತ್ತವೆ. ಅಮುಲ್ ಗೋಲ್ಡ್, ಅಮುಲ್ ಶಕ್ತಿ, ಅಮುಲ್ ತಾಜಾ, ಅಮುಲ್ ಟೀ ಸ್ಪೆಷಲ್, ಅಮುಲ್ ಸ್ಲಿಮ್ ಮತ್ತು ಟ್ರಿಮ್ ಬೆಲೆಗಳು ಪ್ರತಿ ಲೀಟರ್‌ಗೆ 2 ರೂ. ಹೆಚ್ಚಳವಾಗಲಿದೆ. 

ಇದನ್ನೂ ಓದಿ : Amarnath Cave Shivling Darshan 2021: ಹೀಗಿದೆ ಅಮರನಾಥ ಗುಹೆಯ ಈ ಬಾರಿಯ ಪವಿತ್ರ ಶಿವಲಿಂಗದ ಆಕಾರ

ಒಂದೂವರೆ ವರ್ಷದ ನಂತರ ಬೆಲೆ ಏರಿಕೆ : 
ಒಂದೂವರೆ ವರ್ಷದ ನಂತರ ಅಮುಲ್ ತನ್ನ ಹಾಲಿನ ಬೆಲೆಯನ್ನು (Milk rate) ಹೆಚ್ಚಿಸಿದೆ. ಬೆಲೆ ಹೆಚ್ಚಳದ ನಂತರ ಅಮುಲ್ ಗೋಲ್ಡ್ ನ ಬೆಲೆ ಲೀಟರ್‌ಗೆ 58 ರೂ.ಯಾಗಲಿದೆ. ನಾಳೆಯಿಂದಲೇ ಎಲ್ಲಾ ರಾಜ್ಯಗಳಲ್ಲೂ ಹೊಸ ದರಗಳು ಜಾರಿಗೆ ಬರಲಿವೆ.

ಈ ಕಂಪನಿಗಳು ಕೂಡಾ ಹೆಚ್ಚಿಸಬಹುದು ಹಾಲಿನ ದರ : 
ಅಮುಲ್ ಹೊರತಾಗಿ, ಖಾಸಗಿ ವಲಯದಲ್ಲಿ ನೆಸ್ಲೆ (nestle), ಬ್ರಿಟಾನಿಯಾ, ನಮಸ್ತೆ ಇಂಡಿಯಾ, ಪತಂಜಲಿ (Patanjali), ಆನಂದಂ ನಂತಹ ಅನೇಕ ಕಂಪನಿಗಳು ದೇಶದಲ್ಲಿವೆ. ಹಾಲು ಮತ್ತು ಅದರಿಂದ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡುತ್ತವೆ. ಅಮುಲ್ ಬೆಲೆ ಹೆಚ್ಚಳ ಘೋಷಿಸಿದ  ನಂತರ, ಈ ಕಂಪನಿಗಳು ಸಹ ಬೆಲೆಯನ್ನು ಹೆಚ್ಚಿಸಬಹುದು.

ಇದನ್ನೂ ಓದಿ : Covid-19 Vaccine News: ಇನ್ಮುಂದೆ ಲಸಿಕೆ ಉತ್ಪಾದಕರಿಂದ ಖಾಸಗಿ ಆಸ್ಪತ್ರೆಗಳು ನೇರವಾಗಿ ಲಸಿಕೆ ಪಡೆಯುವ ಹಾಗಿಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News