ಪ್ರತಿ ಲೀಟರ್ ಗೆ 2 ರೂಪಾಯಿ ಹಾಲಿನ ದರ ಹೆಚ್ಚಿಸಿದ ಅಮುಲ್

ಅಮುಲ್ ತನ್ನ ಹಾಲಿನ ದರವನ್ನು ಲೀಟರ್‌ಗೆ 2 ರೂಪಾಯಿ ಹೆಚ್ಚಿಸುವುದಾಗಿ ಸೋಮವಾರ ಹೇಳಿದೆ. ಈಗ ಅಮುಲ್ ಬ್ರಾಂಡ್ ಹೆಸರಿನಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದ (GCMMF) ಪ್ರಕಾರ, ಬೆಲೆ ಏರಿಕೆಯು ಗೋಲ್ಡ್, ತಾಜಾ, ಶಕ್ತಿ, ಟಿ-ಸ್ಪೆಷಲ್ ಹಸು ಮತ್ತು ಎಮ್ಮೆ ಹಾಲು ಸೇರಿದಂತೆ ಬ್ರಾಂಡ್‌ನ ಎಲ್ಲಾ ಹಾಲಿನ ಪ್ರಭೇದಗಳಿಗೆ ಅನ್ವಯಿಸುತ್ತದೆ ಎನ್ನಲಾಗಿದೆ.

Written by - Zee Kannada News Desk | Last Updated : Feb 28, 2022, 09:54 PM IST
  • ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ ಕೊನೆಯದಾಗಿ ಜುಲೈ 2021 ರಲ್ಲಿ ಪ್ರತಿ ಲೀಟರ್ ಹಾಲಿನ ಬೆಲೆಯನ್ನು 2 ರೂಪಾಯಿಗಳಷ್ಟು ಹೆಚ್ಚಿಸಿತ್ತು.
  • ಅಮುಲ್ ತನ್ನ ಪಾಲಿಸಿಯಂತೆ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಗ್ರಾಹಕರು ಪಾವತಿಸುವ ಪ್ರತಿ ರೂಪಾಯಿಯ ಸುಮಾರು 80 ಪೈಸೆಯನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸುತ್ತದೆ​.
 ಪ್ರತಿ ಲೀಟರ್ ಗೆ 2 ರೂಪಾಯಿ ಹಾಲಿನ ದರ ಹೆಚ್ಚಿಸಿದ ಅಮುಲ್  title=

ನವದೆಹಲಿ: ಅಮುಲ್ ತನ್ನ ಹಾಲಿನ ದರವನ್ನು ಲೀಟರ್‌ಗೆ 2 ರೂಪಾಯಿ ಹೆಚ್ಚಿಸುವುದಾಗಿ ಸೋಮವಾರ ಹೇಳಿದೆ. ಈಗ ಅಮುಲ್ ಬ್ರಾಂಡ್ ಹೆಸರಿನಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದ (GCMMF) ಪ್ರಕಾರ, ಬೆಲೆ ಏರಿಕೆಯು ಗೋಲ್ಡ್, ತಾಜಾ, ಶಕ್ತಿ, ಟಿ-ಸ್ಪೆಷಲ್ ಹಸು ಮತ್ತು ಎಮ್ಮೆ ಹಾಲು ಸೇರಿದಂತೆ ಬ್ರಾಂಡ್‌ನ ಎಲ್ಲಾ ಹಾಲಿನ ಪ್ರಭೇದಗಳಿಗೆ ಅನ್ವಯಿಸುತ್ತದೆ ಎನ್ನಲಾಗಿದೆ.

ಇದನ್ನೂ ಓದಿ: Business Opportunities : 2 ಲಕ್ಷ ರೂ. ಹೂಡಿಕೆ ಮಾಡುವ ಮೂಲಕ, ಪ್ರತಿ ತಿಂಗಳು 5 ಲಕ್ಷ ಗಳಿಸಿ : ಹೇಗೆ ಇಲ್ಲಿದೆ ಫುಲ್ ಡಿಟೈಲ್ಸ್ 

ಅಮುಲ್ (Amul) ಗೋಲ್ಡ್ ಈಗ ಗುಜರಾತ್‌ನ ಅಹಮದಾಬಾದ್ ಮತ್ತು ಸೌರಾಷ್ಟ್ರ ಮಾರುಕಟ್ಟೆಯಲ್ಲಿ 500 ಮಿಲಿಗೆ 30 ರೂ., ಅಮುಲ್ ತಾಜಾ 500 ಮಿಲಿಗೆ 24 ರೂ.ಮತ್ತು ಅಮುಲ್ ಶಕ್ತಿ 500 ಮಿಲಿಗೆ 27 ರೂ.ಇದೆ.

"ಪ್ರತಿ ಲೀಟರ್‌ಗೆ ರೂ 2 ಏರಿಕೆಯು ಎಂಆರ್‌ಪಿಯಲ್ಲಿ 4% ಹೆಚ್ಚಳಕ್ಕೆ ಸಮನಾಗಿರುತ್ತದೆ, ಇದು ಸರಾಸರಿ ಆಹಾರ ಹಣದುಬ್ಬರಕ್ಕಿಂತ ಗಣನೀಯವಾಗಿ ಕಡಿಮೆಯಾಗಿದೆ" ಎಂದು ನಿಗಮವು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ-PM Kisan Yojana : ಪಿಎಂ ಕಿಸಾನ್ ರೈತರೆ ಈಗಲೇ ಈ ಮಾಡಿ ಕೆಲಸ : ಇಲ್ಲದಿದ್ದರೆ ಬರುವುದಿಲ್ಲ 11ನೇ ಕಂತಿನ ಹಣ!

ವಿದ್ಯುತ್, ಪ್ಯಾಕೇಜಿಂಗ್, ಲಾಜಿಸ್ಟಿಕ್ಸ್ ಮತ್ತು ಜಾನುವಾರುಗಳ ಆಹಾರದ ವೆಚ್ಚಗಳ ಏರಿಕೆಯಿಂದಾಗಿ ಈ ಬೆಲೆ ಏರಿಕೆ ಮಾಡಲಾಗುತ್ತಿದೆ, ಇದು ಕಾರ್ಯಾಚರಣೆಯ ಒಟ್ಟಾರೆ ವೆಚ್ಚ ಮತ್ತು ಹಾಲು ಉತ್ಪಾದನೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.ಇನ್‌ಪುಟ್ ವೆಚ್ಚದಲ್ಲಿನ ಏರಿಕೆಯನ್ನು ಪರಿಗಣಿಸಿ, ನಮ್ಮ ಸದಸ್ಯ ಒಕ್ಕೂಟಗಳು ರೈತರ ಬೆಲೆಯನ್ನು ಕೆಜಿಗೆ 35 ರಿಂದ 40 ರೂ.ಗಳ ವ್ಯಾಪ್ತಿಯಲ್ಲಿ ಹೆಚ್ಚಿಸಿವೆ, ಇದು ಹಿಂದಿನ ವರ್ಷಕ್ಕಿಂತ 5% ಕ್ಕಿಂತ ಹೆಚ್ಚು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಅಮುಲ್ ತನ್ನ ಪಾಲಿಸಿಯಂತೆ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಗ್ರಾಹಕರು ಪಾವತಿಸುವ ಪ್ರತಿ ರೂಪಾಯಿಯ ಸುಮಾರು 80 ಪೈಸೆಯನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸುತ್ತದೆ.ಬೆಲೆ ಪರಿಷ್ಕರಣೆಯು ನಮ್ಮ ಹಾಲು ಉತ್ಪಾದಕರಿಗೆ ಲಾಭದಾಯಕ ಹಾಲಿನ ಬೆಲೆಗಳನ್ನು ಉಳಿಸಿಕೊಳ್ಳಲು ಮತ್ತು ಹೆಚ್ಚಿನ ಹಾಲು ಉತ್ಪಾದನೆಗೆ ಅವರನ್ನು ಪ್ರೋತ್ಸಾಹಿಸಲು ಸಹಾಯ ಮಾಡುತ್ತದೆ" ಎಂದು  ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ ಹೇಳಿದೆ.

ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ ಕೊನೆಯದಾಗಿ ಜುಲೈ 2021 ರಲ್ಲಿ ಪ್ರತಿ ಲೀಟರ್ ಹಾಲಿನ ಬೆಲೆಯನ್ನು 2 ರೂಪಾಯಿಗಳಷ್ಟು ಹೆಚ್ಚಿಸಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News