ಅಪ್ಪ ಮುಖೇಶ್ ಅಂಬಾನಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ,ಮಗ ಮೋದಿಗೆ ಬೆಂಬಲ!

ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಇತ್ತೀಚಿಗಷ್ಟೇ ವೀಡಿಯೋ ಸಂದೇಶದ ಮೂಲಕ ಮುಂಬೈ ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ಮಿಲಿಂದ್ ಡಿಯೋರಾರನ್ನು ಬೆಂಬಲಿಸಿದ ಬೆನ್ನಲ್ಲೇ ಈಗ ಮುಖೇಶ್ ಪುತ್ರ ಅನಂತ್ ಅಂಬಾನಿ ಪ್ರಧಾನಿ ಮೋದಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. 

Last Updated : Apr 27, 2019, 10:37 AM IST
ಅಪ್ಪ ಮುಖೇಶ್ ಅಂಬಾನಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ,ಮಗ ಮೋದಿಗೆ ಬೆಂಬಲ! title=

ನವದೆಹಲಿ: ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಇತ್ತೀಚಿಗಷ್ಟೇ ವೀಡಿಯೋ ಸಂದೇಶದ ಮೂಲಕ ಮುಂಬೈ ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ಮಿಲಿಂದ್ ಡಿಯೋರಾರನ್ನು ಬೆಂಬಲಿಸಿದ ಬೆನ್ನಲ್ಲೇ ಈಗ ಮುಖೇಶ್ ಪುತ್ರ ಅನಂತ್ ಅಂಬಾನಿ ಪ್ರಧಾನಿ ಮೋದಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. 

ಮರಾಠಿ ಚಾನೆಲ್ ವೊಂದಕ್ಕೆ ಪ್ರತಿಕ್ರಿಯಿಸಿರುವ ಅನಂತ್ ಅಂಬಾನಿ "ನಾನು ಪ್ರಧಾನಿ ಭಾಷಣ ಕೇಳಲು ಮತ್ತು ದೇಶಕ್ಕೆ ಬೆಂಬಲ ನೀಡಲು ಇಲ್ಲಿಗೆ ಬಂದಿದ್ದೇನೆ" ಎಂದು ಹೇಳಿದ್ದಾರೆ.ಇದಕ್ಕೂ ಮೊದಲು ಅವರ ತಂದೆ ಮುಖೇಶ್ ಅಂಬಾನಿ ಕಾಂಗ್ರೆಸ್ ಅಭ್ಯರ್ಥಿ ಮಿಲಿಂದ್ ಡಿಯೋರಾ ಅವರನ್ನು ಬೆಂಬಲಿಸಿ " ಮಿಲಿಂದ್  ದಕ್ಷಿಣ ಮುಂಬೈ ವ್ಯಕ್ತಿಯಾಗಿದ್ದಾರೆ ... ಅವರಿಗೆ ದಕ್ಷಿಣ ಬಾಂಬೆ ಕ್ಷೇತ್ರದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಪರಿಸರ ವ್ಯವಸ್ಥೆಯ ಬಗ್ಗೆ ಆಳವಾದ ಜ್ಞಾನವಿದೆ" ಎಂದು ವೀಡಿಯೋ ಸಂದೇಶದಲ್ಲಿ ಹೇಳಿದ್ದರು.

ಸಹೋದರ ಅನಿಲ್ ಅಂಬಾನಿ ವಿರುದ್ಧ ರಫೇಲ್ ಒಪ್ಪಂದದ ವಿಚಾರವಾಗಿ ಕಾಂಗ್ರೆಸ್ ನ ರಾಹುಲ್ ಗಾಂಧಿ ತೀವ್ರ ಟೀಕೆ ಟಿಪ್ಪಣಿಗಳು ನಡೆಸುತ್ತಿರುವ ಬೆನ್ನಲ್ಲೇ ಅವರು ಕಾಂಗ್ರೆಸ್ ಅಭ್ಯರ್ಥಿಗೆ ಏಕಾಏಕಿ ಬೆಂಬಲ ವ್ಯಕ್ತಪಡಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು.ಈಗ ಮಗ ಅನಂತ್ ಅಂಬಾನಿ ಮುಂಬೈನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಚುನಾವಣಾ ರ್ಯಾಲಿಯಲ್ಲಿ ಮುಂಭಾಗದಲ್ಲಿ ಕುಳಿತು "ನಾನು ಪ್ರಧಾನಿ ಮೋದಿ ಭಾಷಣ ಕೇಳಲು ಮತ್ತು ದೇಶಕ್ಕೆ ಬೆಂಬಲ ನೀಡಲು ಇಲ್ಲಿಗೆ ಬಂದಿದ್ದೇನೆ" ಎಂದು ಹೇಳಿರುವುದು ಕೂತೂಹಲಕ್ಕೆ ಕಾರಣವಾಗಿದೆ.

Trending News