Fact Check : ಏಪ್ರಿಲ್ 19 ರವರೆಗೆ ಭಾರತದಲ್ಲಿ ಮತ್ತೆ ಲಾಕ್ ಡೌನ್? ವೈರಲ್ SMS ಹಿಂದಿನ ಅಸಲಿ ಸತ್ಯ ಇಲ್ಲಿದೆ!

ಲಾಕ್‌ಡೌನ್ ಬಗ್ಗೆ ಭಾರತ ಸರ್ಕಾರ ಅಂತಹ ಯಾವುದೇ ಘೋಷಣೆ ಮಾಡಿಲ್ಲ. ದಯವಿಟ್ಟು ಇಂತಹ ದಾರಿತಪ್ಪಿಸುವ ಫೋಟೋ ಅಥವಾ ಸಂದೇಶಗಳನ್ನು ಹಂಚಿಕೊಳ್ಳಬೇಡಿ

Last Updated : Apr 11, 2021, 05:11 PM IST
  • ಏಪ್ರಿಲ್ 9 ರಿಂದ 19 ರವರೆಗೆ ಭಾರತದಲ್ಲಿ ಸಂಪೂರ್ಣ ಲಾಕ್ ಡೌನ್ ವಿಧಿಸಲಾಗುತ್ತಿದೆ.
  • ಈ ಕುರಿತು ಪಿಐಬಿ ಫ್ಯಾಕ್ಟ್ ಚೆಕ್ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ ನಲ್ಲಿ ಸ್ಪಷ್ಟ
  • ಲಾಕ್‌ಡೌನ್ ಬಗ್ಗೆ ಭಾರತ ಸರ್ಕಾರ ಅಂತಹ ಯಾವುದೇ ಘೋಷಣೆ ಮಾಡಿಲ್ಲ. ದಯವಿಟ್ಟು ಇಂತಹ ದಾರಿತಪ್ಪಿಸುವ ಫೋಟೋ ಅಥವಾ ಸಂದೇಶಗಳನ್ನು ಹಂಚಿಕೊಳ್ಳಬೇಡಿ
Fact Check : ಏಪ್ರಿಲ್ 19 ರವರೆಗೆ ಭಾರತದಲ್ಲಿ ಮತ್ತೆ ಲಾಕ್ ಡೌನ್? ವೈರಲ್ SMS ಹಿಂದಿನ ಅಸಲಿ ಸತ್ಯ ಇಲ್ಲಿದೆ! title=

ಪ್ರಸ್ತುತ ದೇಶದಲ್ಲಿ ಕೊರೋನಾ ತಾಂಡವಾಡುತ್ತಿರುವುದರಿಂದ ಭಾರತದಲ್ಲಿ ಮತ್ತೆ ಲಾಕ್‌ಡೌನ್ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.  ಹೆಚ್ಚುತ್ತಿರುವ ಕರೋನವೈರಸ್ ಪ್ರಕರಣಗಳ ದೃಷ್ಟಿಯಿಂದ, ದೇಶದ ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ, ವೀಕ್ ಎಂಡ್ ಲಾಕ್‌ಡೌನ್ ಮತ್ತು ಲಾಕ್‌ಡೌನ್‌ನಂತಹ ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ. ಆದ್ರೆ, ಎಲ್ಲರ ಮನಸ್ಸಿನಲ್ಲಿ ಮತ್ತೊಮ್ಮೆ ಇಡೀ ದೇಶದಲ್ಲಿ ಲಾಕ್ ಡೌನ್ ಘೋಷಿಸಬಹುದು ಎಂಬ ಭಯ ಕಾಡುತ್ತಿದೆ.

ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ದೇಶದಲ್ಲಿ ಮತ್ತೆ ಲಾಕ್ ಡೌನ್(Lockdown) ಆಗುವ ಬಗ್ಗೆ ಅನೇಕ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಇವುಗಳಲ್ಲಿ ಒಂದು ಫೋಟೋ ಭಾರಿ ವೈರಲ್ ಆಗುತ್ತಿದೆ, ಅದರಲ್ಲಿ ಏಪ್ರಿಲ್ 9 ರಿಂದ 19 ರವರೆಗೆ ಭಾರತದಲ್ಲಿ ಸಂಪೂರ್ಣ ಲಾಕ್ ಡೌನ್ ವಿಧಿಸಲಾಗುತ್ತಿದೆ ಎಂದು ಬರೆಯಲಾಗಿದೆ. ಇದನ್ನ ಪಿಐಬಿ ಫ್ಯಾಕ್ಟ್ ಚೆಕ್ ತನಿಖೆ ಮಾಡಿದಾಗ, ಅದು ಸುಳ್ಳು ಸುದ್ದಿ ಎಂದು ಸಾಭೀತಾಗಿದೆ.

ಇದನ್ನೂ ಓದಿ : "ದೆಹಲಿಯಲ್ಲಿನ ನಾಲ್ಕನೇ ಕೊರೊನಾ ಅಲೆ ಹೆಚ್ಚು ಅಪಾಯಕಾರಿ"

ಈ ಕುರಿತು ಪಿಐಬಿ ಫ್ಯಾಕ್ಟ್ ಚೆಕ್(PIB Fact Check) ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ ನಲ್ಲಿ ಸ್ಪಷ್ಟಪಡಿಸಿದ್ದು, "ಏಪ್ರಿಲ್ 9 ರಿಂದ 19 ರವರೆಗೆ ಭಾರತ ಸರ್ಕಾರವು ಲಾಕ್‌ಡೌನ್ ಮಾಡಲಾಗುತ್ತಿದೆ.  #Morphed ಫೋಟೋ. ಲಾಕ್‌ಡೌನ್ ಬಗ್ಗೆ ಭಾರತ ಸರ್ಕಾರ ಅಂತಹ ಯಾವುದೇ ಘೋಷಣೆ ಮಾಡಿಲ್ಲ. ದಯವಿಟ್ಟು ಇಂತಹ ದಾರಿತಪ್ಪಿಸುವ ಫೋಟೋ ಅಥವಾ ಸಂದೇಶಗಳನ್ನು ಹಂಚಿಕೊಳ್ಳಬೇಡಿ, "ಎಂದು ಟ್ವೀಟ್ ಮಾಡಿದೆ.

ಇದನ್ನೂ ಓದಿ : ಹೆಚ್ಚುತ್ತಲೇ ಇದೆ ಕರೋನಾ ಪ್ರಕರಣಗಳು ; ಎಂದಿನಿಂದ ಜಾರಿಯಾಗಲಿದೆ ಲಾಕ್ ಡೌನ್?

ಕೊರೋನಾ(Corona) ಸಮಯದಲ್ಲಿ ದೇಶದಲ್ಲಿ ನಕಲಿ ಸುದ್ದಿಗಳ ಪ್ರವೃತ್ತಿ ಕೂಡ ಗಣನೀಯವಾಗಿ ಹೆಚ್ಚಾಗಿದೆ. ಇಂತಹ ದಾರಿತಪ್ಪಿಸುವ ಸುದ್ದಿಗಳು ಈ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬರುತ್ತವೆ.  ಜನರು ತಪ್ಪುದಾರಿಗೆಳೆಯುವ ಸುದ್ದಿಗಳಿಂದ ದೂರವಿರಬೇಕು ಎಂದು ಪಿಐಬಿ ಫ್ಯಾಕ್ಟ್ ಚೆಕ್ ಮೂಲಕ ಕಾಲಕಾಲಕ್ಕೆ ತಿಳಿಸಲಾಗುತ್ತಿದೆ.

ಇದನ್ನೂ ಓದಿ : Attack On Terrorism: ಉಗ್ರವಾದದ ಮೇಲೆ ಭಾರಿ ಪ್ರಹಾರ, ಕಳೆದ 72ಗಂಟೆಗಳಲ್ಲಿ 4 ಆಪರೇಶನ್, 12 ಉಗ್ರರ ಬೇಟೆ

'ಪ್ರಧಾನ್ ಮಂತ್ರಿ ಯೋಜನೆ' ಅಡಿಯಲ್ಲಿ ಯಾವುದೇ ಗ್ರಾಹಕರು 1-2 ಲಕ್ಷ ರೂ.ವರೆಗೆ ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಈ ಹಿಂದೆ ಒಂದು ವೆಬ್‌ಸೈಟ್(Website) ಹೇಳಿಕೊಂಡಿತ್ತು. ಈ ಸುದ್ದಿಯ ಸಂಗತಿಗಳನ್ನು ತನಿಖೆ ಮಾಡಿದಾಗ, ಇದು ಕೂಡ ನಕಲಿ ಎಂದು ತಿಳಿದುಬಂದಿದೆ. ಅಂತಹ ಯಾವುದೇ ಯೋಜನೆಯನ್ನು ಸರ್ಕಾರ ಪ್ರಾರಂಭಿಸಿಲ್ಲ.

ಇದನ್ನೂ ಓದಿ : Bank Holidays: April 13 ರಿಂದ ಸತತ 6 ದಿನಗಳ ಕಾಲ ಬ್ಯಾಂಕ್ ಗಳಿಗೆ ಹಾಲಿಡೇ

ಅಧಿಕೃತ ಘೋಷಣೆ ಮಾಡುವವರೆಗೂ ದಾರಿತಪ್ಪಿಸುವ ಅಥವಾ ನಕಲಿ ಸುದ್ದಿ(Fake News)ಗಳನ್ನು ನಂಬಬೇಡಿ ಎಂದು ಸರ್ಕಾರವು ಪದೇ ಪದೇ ಜನರಲ್ಲಿ ಮನವಿ ಮಾಡುತ್ತಲೇ ಇದೆ. 

ಇದನ್ನೂ ಓದಿ : ವರ ಕೊವಿಡ್ ಪಾಸಿಟಿವ್ : ಆದರೂ ಗೈಡ್ ಲೈನ್ ಪಾಲನೆಯೊಂದಿಗೇ ನೆರವೇರಿತು ವಿವಾಹ

ಇಂಟೆರ್ ನೆಟ್ ನಲ್ಲಿ ಹರಿದಾಡುತ್ತಿರುವ ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳನ್ನು ತಡೆಗಟ್ಟಲು ಪತ್ರಿಕಾ ಮಾಹಿತಿ ಬ್ಯೂರೋ (Press Information Bureau) 2019 ರ ಡಿಸೆಂಬರ್‌ನಲ್ಲಿ ಈ ಸತ್ಯ ಪರಿಶೀಲನಾ ವಿಭಾಗವನ್ನು ಪ್ರಾರಂಭಿಸಿತು. ಪಿಐಬಿ ಫ್ಯಾಕ್ಟ್ ಚೆಕ್‌ನ ಉದ್ದೇಶ 'ಸರ್ಕಾರದ ನೀತಿಗಳು ಮತ್ತು ಯೋಜನೆಗಳಿಗೆ ಸಂಬಂಧಿಸಿದ ತಪ್ಪು ಮಾಹಿತಿಯನ್ನು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಸಾರವಾದರೆ ಅದನ್ನ ತನಿಖೆ ಮಾಡಿ ಜನರಿಗೆ ನಿಜಾಂಶ ತಿಳಿಸುವುದಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News