ಅಸಾನಿ ಚಂಡಮಾರುತ ಎಚ್ಚರಿಕೆ: ಅಸಾನಿ ಚಂಡಮಾರುತ ತನ್ನ ದಿಕ್ಕನ್ನು ಬದಲಿಸಿದ್ದು, ಸಮೀಪದ ಕಾಕಿನಾಡ ಕರಾವಳಿಯನ್ನು ಮುಟ್ಟಲಿದೆ. ಕಾಕಿನಾಡ ಕರಾವಳಿಯನ್ನು ಮುಟ್ಟಿದ ನಂತರ ಮತ್ತೆ ಕಾಕಿನಾಡ ಮತ್ತು ವಿಶಾಖಪಟ್ಟಣಂ ನಡುವೆ ಸಮುದ್ರಕ್ಕೆ ಬರಲಿದೆ ಎಂದು ವಿಶಾಖಪಟ್ಟಣ ಚಂಡಮಾರುತ ಎಚ್ಚರಿಕೆ ಕೇಂದ್ರದ ನಿರ್ದೇಶಕಿ ಸುನಂದಾ ತಿಳಿಸಿದ್ದಾರೆ. ಹವಾಮಾನ ಇಲಾಖೆಯು ಹಲವೆಡೆ ಭಾರೀ ಮಳೆ ಮತ್ತು ಪ್ರವಾಹದ ಎಚ್ಚರಿಕೆ ನೀಡಿದೆ.
ಆಂಧ್ರಪ್ರದೇಶಕ್ಕೆ ಅಸಾನಿ ಚಂಡಮಾರುತದ ಎಚ್ಚರಿಕೆ ಮತ್ತು ರೆಡ್ ಅಲರ್ಟ್ ನೀಡಲಾಗಿದೆ. ನಿನ್ನೆಯವರೆಗೆ, ಟ್ರ್ಯಾಕ್ ವಾಯುವ್ಯ ದಿಕ್ಕನ್ನು ತೋರಿಸುತ್ತಿತ್ತು ಆದರೆ ಕಳೆದ 6 ಗಂಟೆಗಳಲ್ಲಿ ಅದು ಪಶ್ಚಿಮ-ವಾಯುವ್ಯ ದಿಕ್ಕಿನತ್ತ ಚಲಿಸುತ್ತಿದೆ. ಹಾಗಾಗಿ ಇದು ನಮ್ಮ ಆಂಧ್ರಪ್ರದೇಶಕ್ಕೆ ಬಹಳ ಹತ್ತಿರದಲ್ಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಧಿಕಾರಿಗಳು, ಅಸಾನಿ ಚಂಡಮಾರುತ ಬಂಗಾಳ ಕೊಲ್ಲಿಯಲ್ಲಿ ತಿರುವು ತೆಗೆದುಕೊಳ್ಳುತ್ತದೆ ಎಂದು ಭವಿಷ್ಯ ನುಡಿದಿದ್ದರು. ಆದರೆ, ಅನಿರೀಕ್ಷಿತವಾಗಿ ಚಂಡಮಾರುತವು ಕಾಕಿನಾಡ ಕರಾವಳಿಯನ್ನು ತಲುಪಲಿದೆ. ಈ ಹಿನ್ನಲೆಯಲ್ಲಿ ಈ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ.
ಇದನ್ನೂ ಓದಿ- ಒಂದು ದೇಶ-ಹಲವಾರು ರುಚಿಕರ ಖಾದ್ಯ: ಭಾರತದ ಪ್ರಮುಖ ಆಹಾರ ಪದ್ಧತಿ ಬಗ್ಗೆ ಇಲ್ಲಿದೆ ಮಾಹಿತಿ
ಅಸಾನಿ ಚಂಡಮಾರುತದಿಂದಾಗಿ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದು, ಹಲವೆಡೆ ಪ್ರವಾಹದ ಬಗ್ಗೆಯೂ ಮುನ್ನೆಚ್ಚರಿಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಚಂಡಮಾರುತವನ್ನು ಎದುರಿಸಲು ಒಟ್ಟು 50 ತಂಡಗಳನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ ಎಂದು ಎನ್‌ಡಿಆರ್‌ಎಫ್ ವಕ್ತಾರರು ತಿಳಿಸಿದ್ದಾರೆ.
50 ತಂಡಗಳ ಪೈಕಿ 22 ತಂಡಗಳನ್ನು ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ನಿಯೋಜಿಸಲಾಗಿದೆ. ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳಲ್ಲಿ 12 ತಂಡಗಳು, ಆಂಧ್ರಪ್ರದೇಶದಲ್ಲಿ 9 ಮತ್ತು ಒಡಿಶಾದ ಬಾಲಸೋರ್‌ನಲ್ಲಿ ಒಂದು ತಂಡವನ್ನು ನಿಯೋಜಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಉಳಿದ 28 ತಂಡಗಳಿಗೆ ಈ ರಾಜ್ಯಗಳಲ್ಲಿ ಎಚ್ಚರಿಕೆ ವಹಿಸಲು ತಿಳಿಸಲಾಗಿದೆ.
ಇದನ್ನೂ ಓದಿ- ಫೇಮಸ್ ಮ್ಯೂಸಿಕ್ ಕಂಪೋಸರ್ ಪಂಡಿತ್ ಶಿವ ಕುಮಾರ್ ಶರ್ಮಾ ನಿಧನ
ಅಸಾನಿ ಚಂಡಮಾರುತದ ಪರಿಣಾಮದಿಂದಾಗಿ ಕಾಕಿನಾಡ, ಗಣಗವರಂ ಮತ್ತು ಭೀಮುನಿಪಟ್ಟಣ ಬಂದರುಗಳಿಗೆ ಹವಾಮಾನ ಇಲಾಖೆ ಅಪಾಯದ ಸಂಕೇತವನ್ನು ನೀಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ವಿಶಾಖಪಟ್ಟಣಂ, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಕೃಷ್ಣಾ ಮತ್ತು ಗುಂಟೂರು ಸೇರಿದಂತೆ ಆಂಧ್ರಪ್ರದೇಶದ ಜಿಲ್ಲೆಗಳಿಗೆ ಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದಿರುವ ಐಎಂಡಿ ರೆಡ್ ವಾರ್ನಿಂಗ್ ಅಲರ್ಟ್ ಘೋಷಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.