ಪುಣೆಯಲ್ಲಿ ಮಳೆಯಿಂದ ಕಂಪೌಂಡ್ ಗೋಡೆ ಕುಸಿದು 15 ಜನರು ಸಾವು

ಪುಣೆಯ ಕೊಂಡ್ವಾದಲ್ಲಿ ಕಂಪೌಂಡ್ ಗೋಡೆಯ ಒಂದು ಭಾಗ ಕುಸಿದು ಪಕ್ಕದ ಗುಡಿಸಲುಗಳ ಮೇಲೆ ಬಿದ್ದ ಪರಿಣಾಮವಾಗಿ ನಾಲ್ಕು ಮಕ್ಕಳು ಸೇರಿದಂತೆ ಕನಿಷ್ಠ 15 ಜನರು ಮೃತಪಟ್ಟಿದ್ದಾರೆ. ಈ ಗುಡಿಸಲುಗಳನ್ನು ಕಟ್ಟಡ ನಿರ್ಮಾಣ ಮಾಡುವ ಕಾರ್ಮಿಕರಿಗಾಗಿ ನಿರ್ಮಿಸಲಾಗಿತ್ತು ಎನ್ನಲಾಗಿದೆ.

Last Updated : Jun 29, 2019, 11:02 AM IST
ಪುಣೆಯಲ್ಲಿ ಮಳೆಯಿಂದ ಕಂಪೌಂಡ್ ಗೋಡೆ ಕುಸಿದು 15 ಜನರು ಸಾವು  title=
photo:ANI

ನವದೆಹಲಿ: ಪುಣೆಯ ಕೊಂಡ್ವಾದಲ್ಲಿ ಕಂಪೌಂಡ್ ಗೋಡೆಯ ಒಂದು ಭಾಗ ಕುಸಿದು ಪಕ್ಕದ ಗುಡಿಸಲುಗಳ ಮೇಲೆ ಬಿದ್ದ ಪರಿಣಾಮವಾಗಿ ನಾಲ್ಕು ಮಕ್ಕಳು ಸೇರಿದಂತೆ ಕನಿಷ್ಠ 15 ಜನರು ಮೃತಪಟ್ಟಿದ್ದಾರೆ. ಈ ಗುಡಿಸಲುಗಳನ್ನು ಕಟ್ಟಡ ನಿರ್ಮಾಣ ಮಾಡುವ ಕಾರ್ಮಿಕರಿಗಾಗಿ ನಿರ್ಮಿಸಲಾಗಿತ್ತು ಎನ್ನಲಾಗಿದೆ.

ಈಗ ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು, ನಿರಂತರ ಮಳೆಯಿಂದಾಗಿ ಗೋಡೆ ಕುಸಿದಿರಬಹುದು ಎಂದು ಹೇಳಿದ್ದಾರೆ. ಸುಮಾರು 12 ರಿಂದ 15 ಅಡಿ ಎತ್ತರದ ಗೋಡೆಯ ಒಂದು ಭಾಗ ಮುಂಜಾನೆ 1.30 ರಿಂದ 1.45 ರ ನಡುವೆ ಕುಸಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಘಟನೆ ನಡೆದ ನಂತರ ಅಗ್ನಿಶಾಮಕ ದಳ, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿ ಮತ್ತು ಪೊಲೀಸರ ತಂಡ ರಕ್ಷಣಾ ಕಾರ್ಯಾಚರಣೆ ನಡೆಸಲು ಸ್ಥಳಕ್ಕೆ ಧಾವಿಸಿದರು. ಈ ಘಟನೆಯಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ, ಅದರಲ್ಲಿ ಇಬ್ಬರು ಮಹಿಳೆಯರು ಮತ್ತು ನಾಲ್ಕು ಮಕ್ಕಳು ಸೇರಿದ್ದಾರೆ ಎಂದು ಕೊಂಡ್ವಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ದುರಂತದಲ್ಲಿ ಬಲಿಯಾದವರನ್ನು ಬಿಹಾರ ಅಥವಾ ಉತ್ತರಪ್ರದೇಶದ ಮೂಲದವರು ಎಂದು ಅಗ್ನಿ ಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಈಗ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ನೇವಲ್ ಕಿಶೋರ್ ರಾಮ್ ಭೇಟಿ ನೀಡಿದ್ದಾರೆ. ಈ ಘಟನೆಯ ಬಗ್ಗೆ ತನಿಖೆಗೆ ನಾವು ಆದೇಶಿಸಿದ್ದೇವೆ ಮತ್ತು ಇದಕ್ಕೆ ಜವಾಬ್ದಾರಿಯಾದವರಿಗೆ ಶಿಕ್ಷೆಯಾಗಲಿದೆ ಎಂದು ಅವರು ಹೇಳಿದರು.   

 

Trending News