ನವದೆಹಲಿ: ಬಜಾಜ್ ನ ಬಲಿಷ್ಠ ಬೈಕ್ ಡೊಮಿನಾರ್ 400 ಇದೀಗ ನೂತನ ಮತ್ತು ಕಾಂಪ್ಯಾಕ್ಟ್ ವೇರಿಯಂಟ್ ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಬಜಾಜ್ ಈ ಬೈಕ್ ಅನ್ನು ಡೊಮಿನಾರ್ 250 ಹೆಸರಿನ ಅಡಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ಸಂಸ್ಥೆ ಈ ಬೈಕ್ ನ ಟೀಸರ್ ಕೂಡ ಬಿಡುಗಡೆಗೊಳಿಸಿದೆ. ಸುಮಾರು 13 ಸೆಕೆಂಡ್ ಅವಧಿಯ ವಿಡಿಯೋ ಇದಾಗಿದೆ. ಹಾಗಿದ್ದರೆ ಬನ್ನಿ ಈ ಬೈಕ್ ನ ವೈಶಿಷ್ಟ್ಯಗಳೇನು ತಿಳಿಯೋಣ.
ಇದರಲ್ಲಿ 250 ಸಿಸಿ ಇಂಜಿನ್ ಸಾಮರ್ಥ್ಯ ಇರಲಿದೆ
ಬಜಾಜ್ ಆಟೋ ಬಿಡುಗಡೆಳಿಸಲಿರುವ ನೂತನ ಡೊಮಿನಾರ್ ಬೈಕ್ ನಲ್ಲಿ 250 ಸಿಸಿ ಸಾಮರ್ಥ್ಯದ ಇಂಜಿನ್ ಇರಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಡೋಮಿನಾರ್ ನಲ್ಲಿ 400 ಸಿಸಿ ಇಂಜಿನ್ ಅಳವಡಿಸಲಾಗಿದೆ. ನೂತನ ಡೋಮಿನಾರ್ ನಲ್ಲಿ ಅಳವಡಿಸಲಾಗುತ್ತಿರುವ ಇಂಜಿನ್ DUKE 248 ಸಿಸಿ ಸಾಮರ್ಥ್ಯದ ಇಂಜಿನ್ ಮಾದರಿಯಾಗಿದ್ದು, ಈ ಇಂಜಿನ್ ಸುಮಾರು 30BHPಗಳಷ್ಟು ಸಾಮರ್ಥ್ಯ ಹಾಗೂ 24 Nm ಪಿಕ್ ಟಾರ್ಕ್ ನೀಡಲಿದೆ. ಈ ಬೈಕ್ ನಲ್ಲಿ ಒಟ್ಟು ಆರು ಮ್ಯಾನುಅಲ್ ಗಿಯರ್ ಗಳನ್ನು ನೀಡಲಾಗಿದೆ. ಬೈಕ್ ನ ಲುಕ್ ಕುರಿತು ಹೇಳುವುದಾದರೆ ಡೋಮಿನಾರ್ 400 ಹಾಗೂ ಡೋಮಿನಾರ್ 250 ಬೈಕ್ ಗಳಲ್ಲಿ ಯಾವುದೇ ಹೆಚ್ಚಿನ ವ್ಯತ್ಯಾಸ ಇಲ್ಲ. ಈ ಬೈಕ್ ಕುರಿತು ಹೊರಬಂದ ವರದಿಗಳ ಪ್ರಕಾರ ಈ ಬೈಕ್ ನಲ್ಲಿ ಅಲಾಯ್ ವ್ಹೀಲ್, ಸ್ಪ್ಲಿಟ್ ಸೀಟ್, LED ಟೈಲ್ ಲೆನ್ಸ್ ಹಾಗೂ ಅಪ್ಸೈಡ್ ಡೌನ್ ಫ್ರಂಟ್ ಫೋರ್ಕ್ಸ್ ಗಳು ಇರಲಿವೆ. ಡೋಮಿನಾರ್ 250 ಬೈಕ್ ನ ಗ್ರಾಫಿಕ್ಸ್ ನಲ್ಲಿಯೂ ಕೂಡ ಸ್ವಲ್ಪ ಬದಲಾವಣೆಗಳನ್ನು ನೋಡಬಹುದಾಗಿದೆ ಎನ್ನಲಾಗುತ್ತಿದೆ.
ಬೆಲೆ ಎಷ್ಟು ಇರಲಿದೆ?
ಬಜಾಜ್ ನ ನೂತನ ಬೈಕ್ ಡೋಮಿನಾರ್ ಮಾರುಕಟ್ಟೆ ಬೆಲೆ 1.40 ಲಕ್ಷ ಇರಲಿದೆ ಎಂದು ಊಹಿಸಲಾಗುತ್ತಿದೆ. ಆದರೆ, ಈ ಬೈಕ್ ನ ಅಧಿಕೃತ ಬೆಲೆ ಇನ್ನೂ ಬಿಡುಗಡೆಯಾಗಿಲ್ಲ. ಆದರೆ, ಡೋಮಿನಾರ್ 400ನ ಅಧಿಕೃತ ಮಾರುಕಟ್ಟೆ ಬೆಲೆ 1.90 ಲಕ್ಷ ರೂ. ನಿಗದಿಪಡಿಸಲಾಗಿದೆ. ಡೋಮಿನಾರ್ 250 ಕಾಂಪ್ಯಾಕ್ಟ್ ಬೈಕ್ ಆಗಿರುವ ಕಾರಣ ಈ ಬೈಕ್ ನ ಬೆಲೆ ಕೂಡ ಕಡಿಮೆ ಇರುವ ಸಾಧ್ಯತೆ ಇದೆ. ಸದ್ಯ ಮಾರುಕಟ್ಟೆಯಲ್ಲಿ ಇರುವ KTM 250 DUKE, YAMAHA FZS ಗಳಂತಹ ಬೈಕ್ ಗಳಿಗೆ ಈ ಬೈಕ್ ತೀವ್ರ ಪೈಪೋಟಿ ನೀಡಲಿದೆ ಎಂಬುದನ್ನು ನಿರೀಕ್ಷಿಸಲಾಗುತ್ತಿದೆ.
ಬಜಾಜ್ ನ ಬಹುತೇಕ ಷೋರೂಮ್ ಗಳಲ್ಲಿ ಡೋಮಿನಾರ್ 250 ಬೈಕ್ ನ ಮುಂಗಡ ಬುಕ್ಕಿಂಗ್ ಆರಂಭಗೊಂಡಿದೆ. ಅಷ್ಟೇ ಅಲ್ಲ ಬಜಾಜ್ ತನ್ನ ಡೀಲರ್ ಗಳಿಗೆ ಈ ಬೈಕ್ ನ್ನು ಕಳುಹಿಸಲು ಕೂಡ ಪ್ರಾರಂಭಿಸಿದೆ. ಜನರು ಈ ಬೈಕ್ ಗೆ BABY DOMINAR ಎಂದೂ ಕೂಡ ಕರೆಯಲಾರಂಭಿಸಿದ್ದಾರೆ.