ನವದೆಹಲಿ: ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕಿದಾಗಿನಿಂದ, ಪಾಕಿಸ್ತಾನವು ನಿರಂತರವಾಗಿ ಕಾಶ್ಮೀರದ ಒಳನುಸುಳಲು ಪ್ರಯತ್ನಿಸುತ್ತಿದೆ. ಕಾಶ್ಮೀರದ ವಾತಾವರಣವನ್ನು ಹಾಳುಮಾಡಲು ಸಂಚು ರೂಪಿಸಿರುವ ಪಾಕಿಸ್ತಾನದ ಆರಂಭಿಕ ಸಮೀಕ್ಷೆಯಲ್ಲಿ ವಿಡಿಯೋವೊಂದು ಬೆಳಕಿಗೆ ಬಂದಿದೆ. ಸೇನಾ ಮೂಲಗಳು ಬಿಡುಗಡೆ ಮಾಡಿದ ವಿಡಿಯೋದಲ್ಲಿ, ಪಾಕಿಸ್ತಾನ ಸೇನೆಯ ಒಳನುಸುಳುವವರು ಮತ್ತು ಉಗ್ರಗಾಮಿ ಗುಂಪು 'ಬ್ಯಾಟ್' (ಬಾರ್ಡರ್ ಆಕ್ಷನ್ ತಂಡ) ಹೇಗೆ ಭಾರತೀಯ ಗಡಿಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.
ವಾಸ್ತವವಾಗಿ, ಒಳನುಸುಳಲು ಪ್ರಯತ್ನಿಸುತ್ತಿದ್ದ ಗುಂಪು ಸೆಪ್ಟೆಂಬರ್ 12-13ರ ರಾತ್ರಿ ಹಾಜಿಪುರ ವಲಯದಲ್ಲಿ LoC ಮೂಲಕ ನುಸುಳಲು ಪ್ರಯತ್ನಿಸಿದರು. ಗಡಿಯಲ್ಲಿ, ಭಾರತೀಯ ಭದ್ರತಾ ಪಡೆಗಳು ಪಾಕಿಸ್ತಾನದಿಂದ ಒಳನುಗ್ಗುವವರ ಮೇಲೆ ಗುಂಡು ಹಾರಿಸಿ ಅವರ ಯತ್ನವನ್ನು ವಿಫಲಗೊಳಿಸಿದ್ದಾರೆ. ಆಗಸ್ಟ್ ತಿಂಗಳಲ್ಲಿ ಪಾಕಿಸ್ತಾನ ನಿರಂತರವಾಗಿ ಭಯೋತ್ಪಾದಕರ ಒಳನುಸುಳುವಿಕೆ ಪ್ರಯತ್ನಗಳಲ್ಲಿ ತೊಡಗಿದ್ದು, ಭಾರತೀಯ ಭದ್ರತಾ ಪಡೆಗಳು 15 ಒಳನುಸುಳುವ ಪ್ರಯತ್ನಗಳನ್ನು ತಡೆದಿದೆ.
ಪಾಕಿಸ್ತಾನದಿಂದ ಭಾರತದ ಗಡಿ ಒಳನುಸುಳುವಿಕೆಗೆ ಯಾವ ರೀತಿ ಪ್ರಯತ್ನಿಸಲಾಗುತ್ತಿದೆ ಎಂಬುದನ್ನು ಸೇನೆಯ ಮೂಲಗಳು ವೀಡಿಯೊದಲ್ಲಿ ಸ್ಪಷ್ಟವಾಗಿ ಚಿತ್ರಿಸಿವೆ. ನೈವ್ ವಿಷನ್ ಕ್ಯಾಮೆರಾದ ಈ ಚಿತ್ರಗಳಲ್ಲಿ ಒಳನುಗ್ಗುವವರು ಕಂಡುಬರುತ್ತಾರೆ. ಈ ರೀತಿ ಗಡಿ ಬಳಿ ಒಳನುಸುಳುವವರನ್ನು ಭಾರತೀಯ ಭದ್ರತಾ ಪಡೆಗಳು ಗ್ರೆನೇಡ್‌ಗಳಿಂದ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ಪಾಕಿಸ್ತಾನದ ವಿಶೇಷ ಸೇವಾ ಗುಂಪಿನ ಕಮಾಂಡೋಗಳು ಮತ್ತು ಭಯೋತ್ಪಾದಕರ ಈ ಗುಂಪು ಅಂಡರ್-ಬ್ಯಾರೆಲ್ ಗ್ರೆನೇಡ್ ಲಾಂಚರ್‌ಗಳನ್ನು ಹೊಂದಿತ್ತು ಎಂದು ಹೇಳಲಾಗಿದೆ.
ವಿಡಿಯೋ:
#WATCH Army sources: Infiltration or attempted BAT(Border Action Team) action by Pakistan on 12-13 Sept 2019, was seen&eliminated. In video, Indian troops can be seen launching grenades at Pak's SSG(Special Service Group) commandos/terrorists using Under Barrel Grenade Launchers. pic.twitter.com/KOnYJPWyV8
— ANI (@ANI) September 18, 2019
ಸೆಪ್ಟೆಂಬರ್ 10-11 ರಂದು ಹಾಜಿಪುರ ಸೆಕ್ಟರ್‌ನಲ್ಲಿ ಪಾಕಿಸ್ತಾನ ನಡೆಸಿದ ಕದನ ವಿರಾಮ ಉಲ್ಲಂಘನೆಗೆ ಭಾರತೀಯ ಸೇನೆಯಿಂದ ಸೂಕ್ತ ಉತ್ತರ ದೊರೆತಿದೆ. ಪಾಕಿಸ್ತಾನ ಸೇನೆಯ ಇಬ್ಬರು ಸೈನಿಕರನ್ನು ಭಾರತ ಹತ್ಯೆಗೈದಿದೆ. ಇದರ ನಂತರ, ಪಾಕಿಸ್ತಾನ ಸೇನೆಯು ಭಾರತೀಯ ಸೈನ್ಯಕ್ಕೆ ಬಿಳಿ ಧ್ವಜವನ್ನು ತೋರಿಸಿ ಅವರ ಸೈನಿಕರ ಮೃತ ದೇಹಗಳನ್ನು ಪಡೆದರು.
#WATCH Hajipur Sector: Indian Army killed two Pakistani soldiers in retaliation to unprovoked ceasefire violation by Pakistan. Pakistani soldiers retrieved the bodies of their killed personnel after showing white flag. (10.9.19/11.9.19) pic.twitter.com/1AOnGalNkO
— ANI (@ANI) September 14, 2019
ಮಾಹಿತಿಯ ಪ್ರಕಾರ, ಕಾಶ್ಮೀರದ ಹಾಜಿಪುರ ವಲಯದಲ್ಲಿ ಪಾಕಿಸ್ತಾನ ಸೇನೆಯು ಸೆಪ್ಟೆಂಬರ್ 10 ಮತ್ತು 11 ರಂದು ಭಾರಿ ಗುಂಡಿನ ಕಾಳಗ ನಡೆಸಿತ್ತು. ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿದ್ದ ಭಾರತೀಯ ಸೇನೆಯು ಗಡಿಯುದ್ದಕ್ಕೂ ಗುಂಡು ಹಾರಿಸಿ 2 ಪಾಕಿಸ್ತಾನಿ ಸೈನಿಕರನ್ನು ಮಣಿಸಿತ್ತು.