ಬಿಸಿಜಿ ಲಸಿಕೆ ಕೋವಿಡ್ -19 ಹೋರಾಟದಲ್ಲಿ ವೃದ್ಧರನ್ನು ರಕ್ಷಿಸಲಿದೆಯೇ? ತಮಿಳುನಾಡಿನಲ್ಲಿ ಟ್ರಯಲ್

ಇದು ಯಶಸ್ವಿಯಾದರೆ ವಯಸ್ಸಾದವರಲ್ಲಿ ಈ ಕಾಯಿಲೆಯಿಂದ ಉಂಟಾಗುವ ಸಾವು ಕಡಿಮೆಯಾಗುತ್ತದೆ.

Last Updated : Jul 17, 2020, 01:12 PM IST
ಬಿಸಿಜಿ ಲಸಿಕೆ ಕೋವಿಡ್ -19 ಹೋರಾಟದಲ್ಲಿ ವೃದ್ಧರನ್ನು ರಕ್ಷಿಸಲಿದೆಯೇ? ತಮಿಳುನಾಡಿನಲ್ಲಿ ಟ್ರಯಲ್  title=

ನವದೆಹಲಿ: ಬಿಸಿಜಿ ಲಸಿಕೆ ವಯಸ್ಸಾದವರಲ್ಲಿ  ಕೋವಿಡ್-19 (COVID-19)  ಮರಣ ಪ್ರಮಾಣವನ್ನು ಕಡಿಮೆ ಮಾಡಬಹುದೇ? ತಮಿಳುನಾಡಿನಲ್ಲಿ ಶೀಘ್ರದಲ್ಲೇ ಇದರ ಮೇಲೆ ಪ್ರಯೋಗಗಳು ಆರಂಭವಾಗಲಿದೆ ಮತ್ತು ಅದು ಯಶಸ್ವಿಯಾದರೆ, ವೃದ್ಧರಲ್ಲಿ ಈ ಕಾಯಿಲೆಯಿಂದ ಉಂಟಾಗುವ ಸಾವು ಖಂಡಿತವಾಗಿಯೂ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. 

ಇತ್ತೀಚೆಗೆ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರು  60-95 ವರ್ಷ ವಯಸ್ಸಿನ ವಯಸ್ಕರಿಗೆ ಬಿ.ಸಿ.ಜಿ ಲಸಿಕೆಯನ್ನು ಪರೀಕ್ಷೆಯಾಗಿ ಮೇಲ್ವಿಚಾರಣೆ ಮಾಡಲಾಗುವುದು ಎಂದು ಹೇಳಿದ್ದರು. ಈ ವಯಸ್ಸಿನ ಜನರಲ್ಲಿ ಕೋವಿಡ್‌ನಿಂದ ಉಂಟಾಗುವ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಇದನ್ನು ಮಾಡಲಾಗುತ್ತಿದೆ ಎಂದು ತಮಿಳುನಾಡು ಆರೋಗ್ಯ ಸಚಿವ ಡಾ.ವಿಜಯಬಾಸ್ಕರ್ ಈ ಮಾಹಿತಿ ನೀಡಿದರು.

ತಮಿಳುನಾಡಿನಲ್ಲಿ  ಕರೋನಾವೈರಸ್ (Coronavirus)  ಕೋವಿಡ್ -19 ಗೆ ಸಂಬಂಧಿಸಿದ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಬೆಸಿಲ್ ಕ್ಯಾಲುಮೆಟ್-ಗುಯಿರಿನ್ (ಬಿಸಿಜಿ) ಲಸಿಕೆಯ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಮತ್ತು ತನಿಖೆ ಮಾಡಲು ರಾಜ್ಯ ಸರ್ಕಾರ ಪರೀಕ್ಷೆಯನ್ನು ಪ್ರಾರಂಭಿಸುತ್ತದೆ ಎಂದು ವಿಜಯಭಾಸ್ಕರ್ ಬುಧವಾರ ಹೇಳಿದ್ದಾರೆ. ಕ್ಷಯರೋಗದಲ್ಲಿ ರಾಷ್ಟ್ರೀಯ ಸಂಶೋಧನಾ ಸಂಸ್ಥೆ (ಎನ್‌ಐಆರ್‌ಟಿ) ಶೀಘ್ರದಲ್ಲೇ ಈ ದಿಕ್ಕಿನಲ್ಲಿ ತನ್ನ ಪ್ರಾಯೋಗಿಕ ಕಾರ್ಯಕ್ರಮವನ್ನು ಪ್ರಾರಂಭಿಸಲಿದೆ ಎಂದು ಅವರು ಹೇಳಿದರು.

ಕ್ಷಯರೋಗ ತಡೆಗಟ್ಟುವಿಕೆಗಾಗಿ ಅನೇಕ ದೇಶಗಳಲ್ಲಿನ ಮಕ್ಕಳಿಗೆ ಬಿಸಿಜಿ ನೀಡಲಾಗುತ್ತದೆ. ತಮಿಳುನಾಡು ಸರ್ಕಾರ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ ಬಿಸಿಜಿ ಲಸಿಕೆ ಸಹಜವಾದ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. 60 ರಿಂದ 95 ವರ್ಷದೊಳಗಿನ ವೃದ್ಧರಿಗೆ COVID-19 ನಿಂದ ಚೇತರಿಸಿಕೊಳ್ಳಲು ಇದು ಸಹಾಯ ಮಾಡುವ ಸಾಧ್ಯತೆಯಿದೆ ಎಂದು ಊಹಿಸಲಾಗಿದೆ.

ವಯಸ್ಸಾದವರಲ್ಲಿ ಬಿಸಿಜಿ ಲಸಿಕೆಯ ಪ್ರಭಾವವನ್ನು ಅಧ್ಯಯನ ಮಾಡಲು ರಾಜ್ಯ ಸರ್ಕಾರ ಇತ್ತೀಚೆಗೆ ಐಸಿಎಂಆರ್ (ICMR) ಅನುಮೋದನೆ ಕೋರಿತ್ತು. ಐಸಿಎಂಆರ್ ಈಗ ಇದನ್ನು ಅನುಮೋದಿಸಿದೆ. ಈ ಪರೀಕ್ಷೆಯು ಇದೀಗ ಶೀಘ್ರದಲ್ಲೇ ಎನ್ಐಆರ್ಟಿಯಲ್ಲಿ ಪ್ರಯೋಗವಾಗಿ ಪ್ರಾರಂಭವಾಗುತ್ತದೆ. ಪರೀಕ್ಷೆ ಮತ್ತು ಪ್ರಯೋಗದ ಸಂಪೂರ್ಣ ಪ್ರಕ್ರಿಯೆಯಲ್ಲಿ ಈ ವಯಸ್ಸಿನ ಜನರನ್ನು ಕೋವಿಡ್ ರೋಗಿಗಳಾಗಿದ್ದಾಗ ಆಸ್ಪತ್ರೆಗೆ ಸೇರಿಸುವ ಅಗತ್ಯವಿಲ್ಲ ಮತ್ತು ವಯಸ್ಸಾದವರ ಸಾವಿನ ಪ್ರಮಾಣವನ್ನು ಸಹ ಕಡಿಮೆ ಮಾಡಬಹುದು ಎಂಬ ಅಂಶದ ಮೇಲೆ ಗಮನ ಹರಿಸಲಾಗುವುದು ಎಂದು ತಿಳಿದು ಬಂದಿದೆ.

ಆದಾಗ್ಯೂ ಈ ವಯಸ್ಸಿನವರಲ್ಲಿ COVID-19 ಸೋಂಕಿನ ಸಾಧ್ಯತೆಯೂ ಹೆಚ್ಚು, ಏಕೆಂದರೆ ಅವರು ಈಗಾಗಲೇ ಮಧುಮೇಹ, ಅಧಿಕ ಬಿಪಿ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಸಾಧ್ಯತೆಯೂ ಇದೇ. ಆದರೆ ಕೋವಿಡ್ -19 ಸೋಂಕಿನಿಂದ ಬಿಸಿಜಿ ಅವರನ್ನು ರಕ್ಷಿಸುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು  ವಿಶ್ವ ಆರೋಗ್ಯ ಸಂಸ್ಥೆ (World Health Organization)   ಹೇಳಿದೆ.

Trending News