ಬಿಹಾರದಲ್ಲಿ ಮಹಾಗಟಬಂಧನ್ ಪ್ರಣಾಳಿಕೆ ಬಿಡುಗಡೆ: 10 ಲಕ್ಷ ಯುವಕರಿಗೆ ಉದ್ಯೋಗದ ಭರವಸೆ

ಬಿಹಾರ ವಿಧಾನಸಭಾ ಚುನಾವಣೆ 2020ರ ಹಿನ್ನಲೆಯಲ್ಲಿ ಮಹಾಗಟಬಂಧನ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು ಇದರಲ್ಲಿ 10 ಲಕ್ಷ ಯುವಕರಿಗೆ ಉದ್ಯೋಗ ಒದಗಿಸುವ ಭರವಸೆ ನೀಡಲಾಗಿದೆ.

Last Updated : Oct 17, 2020, 12:20 PM IST
  • ಬಿಹಾರದಲ್ಲಿ ಮಹಾಗಟಬಂಧನ್ ತನ್ನ ಪ್ರಣಾಳಿಕೆಯಲ್ಲಿ ಹಲವು ಭರವಸೆಗಳನ್ನು ನೀಡಿದೆ.
  • ಪ್ರತಿಪಕ್ಷ ನಾಯಕರು ನಿತೀಶ್ ಕುಮಾರ್ ಮೇಲೆ ವಾಗ್ಧಾಳಿ ನಡೆಸಿದ್ದಾರೆ.
  • ಕಳೆದ ಚುನಾವಣೆಯ ಡಿಎನ್‌ಎ ವಿವಾದವೂ ಈ ಬಾರಿ ಮೇಲುಗೈ ಸಾಧಿಸಿದೆ
ಬಿಹಾರದಲ್ಲಿ ಮಹಾಗಟಬಂಧನ್ ಪ್ರಣಾಳಿಕೆ ಬಿಡುಗಡೆ: 10 ಲಕ್ಷ ಯುವಕರಿಗೆ ಉದ್ಯೋಗದ ಭರವಸೆ  title=

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ 2020ರ ಹಿನ್ನಲೆಯಲ್ಲಿ ಮಹಾಗಟಬಂಧನ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು ಇದರಲ್ಲಿ 10 ಲಕ್ಷ ಯುವಕರಿಗೆ ಉದ್ಯೋಗ ಒದಗಿಸುವ ಭರವಸೆ ನೀಡಲಾಗಿದೆ. ಈ ಸಂದರ್ಭದಲ್ಲಿ ಆರ್‌ಜೆಡಿ (RJD) ಮುಖಂಡ ತೇಜಶ್ವಿ ಯಾದವ್ (Tejashwi Yadav) ಅವರು ನಮ್ಮ ಸರ್ಕಾರ ರಚನೆಯಾದರೆ 10 ಲಕ್ಷ ನಿರುದ್ಯೋಗಿ ಯುವಕರಿಗೆ ಸರ್ಕಾರಿ ಉದ್ಯೋಗಗಳನ್ನು ನೀಡುವುದು ನಮ್ಮ ಮೊದಲ ಆದ್ಯತೆ ಎಂದು ಹೇಳಿದರು.

ಡಿಎನ್‌ಎಯ ಅರ್ಥವನ್ನು ಮರೆತಿದ್ದಾರೆ!
ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ  (Randeep Surjewala)  ಅವರು ಮಹಾ ಮೈತ್ರಿ ನಿರ್ಣಯ ಪತ್ರವನ್ನು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವಾಗ ನಿತೀಶ್ ಕುಮಾರ್ ಮತ್ತು ಬಿಜೆಪಿಯನ್ನು ಗುರಿಯಾಗಿಸಿಕೊಂಡು ಬಿಹಾರದ ಡಿಎನ್‌ಎಯನ್ನು ಪ್ರಶ್ನಿಸಿದ್ದು ಬಿಜೆಪಿ ಎಂದು ವಾಗ್ಧಾಳಿ ನಡೆಸಿದರು. ಈಗ ನಿತೀಶ್ ಕುಮಾರ್  (Nitish Kumar) ಡಿಎನ್‌ಎಯ ಅರ್ಥವನ್ನು ಮರೆತಿದ್ದಾರೆ, ಈ ಜನರು ಅಪ್ರಾಮಾಣಿಕರಾಗಿದ್ದಾರೆ. ಇಬ್ಬರು ಪಿತೂರಿಗಾರರು ಒಟ್ಟಿಗೆ ಸೇರಿದಾಗ ಪಿತೂರಿ ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲ ಎಂದು ಎನ್ಡಿಎ ಮೈತ್ರಿ ವಿರುದ್ಧ ಹರಿಹೈದರು.

ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಪರ 12 ರ್ಯಾಲಿಗಳನ್ನು ನಡೆಸಲಿರುವ ಪ್ರಧಾನಿ ಮೋದಿ

ನಾನೂ ಪಕ್ಕಾ ಬಿಹಾರಿ:
ಇಂದಿನಿಂದ ಕೇವಲ 11 ದಿನಗಳು, ಅಂದರೆ ಅಕ್ಟೋಬರ್ 28 ರಂದು ಮೊದಲ ಸುತ್ತಿನ ಚುನಾವಣೆಗಳು ಬಿಹಾರದಲ್ಲಿ ನಡೆಯಲಿವೆ, ಆದರೆ ಅದಕ್ಕೂ ಮೊದಲು ಬಿಹಾರದ ಸ್ವಾಭಿಮಾನದ ಮೇಲೆ ರಾಜಕೀಯ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ. ಅದೇ ಸಮಯದಲ್ಲಿ ತೇಜಶ್ವಿ ಯಾದವ್ ಕೂಡ ಡಿಎನ್‌ಎಗೆ ಸಂಬಂಧಿಸಿದಂತೆ ಸರ್ಕಾರದ ಮೇಲೆ ಹಲ್ಲೆ ನಡೆಸಿದರು.  'ನಾನು ಪಕ್ಕಾ ಬಿಹಾರಿ ಮತ್ತು ನನ್ನ ಡಿಎನ್ಎ ಸಂಪೂರ್ಣವಾಗಿ ಶುದ್ಧವಾಗಿದೆ. ನಾನು ನೀಡಿದ ಭರವಸೆಯನ್ನು ಪೂರೈಸುತ್ತೇನೆ ಎಂದು ಮತದಾರರಿಗೆ ಭರವಸೆ ನೀಡಿದರು.

ಈ ಬಾರಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿನ 5 ಪ್ರಮುಖ ವಿಷಯಗಳಿವು

ಏನಿದು ಡಿಎನ್‌ಎ ವಿವಾದ?
2015 ರ ಬಿಹಾರ ವಿಧಾನಸಭಾ ಚುನಾವಣೆಯ (Bihar Assembly Elections)  ಸಂದರ್ಭದಲ್ಲಿ ಪ್ರಧಾನಿ ಮೋದಿ ನಿತೀಶ್ ಕುಮಾರ್ ವಿರುದ್ಧ ವಾಗ್ಧಾಳಿ ನಡೆಸುತ್ತಾ ಅವರ ಡಿಎನ್‌ಎ ಕುರಿತು ಪ್ರಶ್ನೆ ಎತ್ತಿದ್ದರು. ಅದರ ಬಗ್ಗೆ ನಿತೀಶ್ ಕುಮಾರ್ ಕೂಡ ತೀವ್ರ ವಿರೋಧ ವ್ಯಕ್ತಪಡಿಸಿದರು. ಅವರು ವೆಬ್‌ಸೈಟ್ ರಚಿಸುವ ಮೂಲಕ ಪಿಎಂ ಮೋದಿಗೆ ಮುಕ್ತ ಪತ್ರವನ್ನೂ ಕೂಡ ಬರೆದಿದ್ದರು. ಅಷ್ಟೇ ಅಲ್ಲದೆ ಪ್ರಧಾನಿ ಮೋದಿಯವರು ತಮ್ಮ ಮಾತುಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಆಗ್ರಹಿಸಿದ್ದರು. ಆದರೆ ಇಂದು ಪರಿಸ್ಥಿತಿ ವಿಭಿನ್ನವಾಗಿದೆ, ಬಿಹಾರದಲ್ಲಿ ಎನ್‌ಡಿಎ ಮೈತ್ರಿ ಇದೆ ಮತ್ತು ನಿತೀಶ್ ಕುಮಾರ್ ನೇತೃತ್ವದಲ್ಲಿ ಬಿಜೆಪಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಆದ್ದರಿಂದ ಡಿಎನ್‌ಎ ವಿಷಯವು ಮತ್ತೊಮ್ಮೆ ಎಲ್ಲರ ಗಮನ ಸೆಳೆಯುತ್ತಿದೆ.
 

Trending News