ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಿಥುನ್ ಗೆ ಸ್ಥಾನ, ಮೇನಕಾ-ವರುಣ್ ಹೊರಕ್ಕೆ

309 ಸದಸ್ಯರ ಈ ಹೊಸ ಕಾರ್ಯಕಾರಿಣಿಯಲ್ಲಿ,  ಮಿಥುನ್ ಚಕ್ರವರ್ತಿ ಮತ್ತು ಹೇಮಾ ಮಾಲಿನಿಗೂ ಸ್ಥಾನ ನೀಡಲಾಗಿದೆ. 

Written by - Ranjitha R K | Last Updated : Oct 7, 2021, 03:19 PM IST
  • ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಘೋಷಿಸಿದೆ
  • ಹೊಸ ಕಾರ್ಯಕಾರಿಣಿಯಲ್ಲಿ ಮಿಥುನ್ ಚಕ್ರವರ್ತಿ, ಹೇಮಾ ಮಾಲಿನಿಗೆ ಸ್ಥಾನ
  • ಮೇನಕಾ ಗಾಂಧಿ ಮತ್ತು ವರುಣ್ ಗಾಂಧಿ ಹೊರಕ್ಕೆ
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಿಥುನ್ ಗೆ ಸ್ಥಾನ, ಮೇನಕಾ-ವರುಣ್ ಹೊರಕ್ಕೆ  title=
ಹೊಸ ಕಾರ್ಯಕಾರಿಣಿಯಲ್ಲಿ, ಮಿಥುನ್ ಚಕ್ರವರ್ತಿ, ಹೇಮಾ ಮಾಲಿನಿಗೆ ಸ್ಥಾನ (file photo)

ನವದೆಹಲಿ : ಬಿಜೆಪಿ (BJP) ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಘೋಷಿಸಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಹೊಸ ರಾಷ್ಟ್ರೀಯ ಪದಾಧಿಕಾರಿಗಳ ತಂಡವನ್ನು ಘೋಷಿಸಿದ್ದಾರೆ. ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ (PM Narendra Modi), ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ (LK Advani), ಡಾ. ಮುರಳಿ ಮನೋಹರ ಜೋಷಿ (Murli Manohar Joshi), ಕೇಂದ್ರ ಸಚಿವ ರಾಜ್ ನಾಥ್ ಸಿಂಗ್, ಅಮಿತ್ ಷಾ, ನಿತಿನ್ ಗಡ್ಕರಿ (Nitin Gadkari), ಪಿಯೂಷ್ ಗೋಯಲ್ ಮುಂತಾದ ಎಲ್ಲಾ ರಾಷ್ಟ್ರೀಯ ಪದಾಧಿಕಾರಿಗಳನ್ನು ಸೇರಿಸಲಾಗಿದೆ.  

309 ಸದಸ್ಯರ ಈ ಹೊಸ ಕಾರ್ಯಕಾರಿಣಿಯಲ್ಲಿ,  ಮಿಥುನ್ ಚಕ್ರವರ್ತಿ (mithun chakraborty) ಮತ್ತು ಹೇಮಾ ಮಾಲಿನಿಗೂ ಸ್ಥಾನ ನೀಡಲಾಗಿದೆ, ಆದರೆ ಮೇನಕಾ ಗಾಂಧಿ (Maneka Gandhi) ಮತ್ತು ವರುಣ್ ಗಾಂಧಿ (Varun Gandhi) ಅವರನ್ನು ಈ ಪಟ್ಟಿಯಿಂದ ಕೈ ಬಿಡಲಾಗಿದೆ. 

ಇದನ್ನೂ ಓದಿ : Firing In Srinagar: ಕಣಿವೆ ರಾಜ್ಯದಲ್ಲಿ ಮುಂದುವರೆದ ಉಗ್ರರ ಅಟ್ಟಹಾಸ, ಇಬ್ಬರು ಶಿಕ್ಷಕರ ಹತ್ಯೆ

ಕಾಂಗ್ರೆಸ್ ತೀಕ್ಷ್ಣ ಪ್ರತಿಕ್ರಿಯೆ :
ಮೇನಕಾ ಗಾಂಧಿ ಮತ್ತು ವರುಣ್ ಗಾಂಧಿಯನ್ನು ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಹೊರಗಿತ್ತಿರುವ ಕ್ರಮಕ್ಕೆ ಕಾಂಗ್ರೆಸ್ (Congress) ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಬಿಜೆಪಿಯಲ್ಲಿ ಎಷ್ಟು ಪ್ರಜಾಪ್ರಭುತ್ವವಿದೆ ಎಂಬುದನ್ನು,  ಬಿಜೆಪಿಯ ಈ ನಡೆ ತೋರಿಸುತ್ತದೆ ಎಂದು ಕಾಂಗ್ರೆಸ್ ಹೇಳಿದೆ. ವರುಣ್ ಗಾಂಧಿಯಲ್ಲಿ ಸ್ವಲ್ಪವಾದರೂ ಗೌರವ ಉಳಿದುಕೊಂಡಿದ್ದರೆ, ಕೂಡಲೇ ಬಿಜೆಪಿಯನ್ನು ತೊರೆಯಬೇಕು. ಮುಂಬರುವ ಸಮಯದಲ್ಲಿ ಮಂತ್ರಿ ಮಾಡುತ್ತಾರೆ ಎನ್ನುವ ದುರಾಸೆಯಿಂದ ಮತ್ತೆ ಅಲ್ಲೇ ಇರಬಾರದು ಎಂದು ಹೇಳಿದೆ. 

ಲಖಿಂಪುರ್ ಖೇರಿಯಲ್ಲಿ (Lakhimpur Kheri) ಹಿಂಸಾಚಾರದ ನಂತರ, ವರುಣ್ ಗಾಂಧಿ ಯೋಗಿ ಸರ್ಕಾರದ ವಿರುದ್ಧ ನಿರಂತರವಾಗಿ ಟೀಕೆ ಮಾಡುತ್ತಿದ್ದಾರೆ. ಇದಾದ ನಂತರ, ಇದೀಗ ಮೇನಕಾ ಗಾಂಧಿ ಮತ್ತು ಆಕೆಯ ಪುತ್ರ ವರುಣ್ ಗಾಂಧಿ ಅವರನ್ನು ಬಿಜೆಪಿ  ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಸ್ಥಾನ ನೀಡಲಾಗಿಲ್ಲ. 

ಇದನ್ನೂ ಓದಿ : WhatsApp: ಈಗ ವಾಟ್ಸಾಪ್‌ನಲ್ಲಿ ಯಾರೂ ನಿಮ್ಮ ಮೇಲೆ ಕಣ್ಣಿಡಲು ಸಾಧ್ಯವಿಲ್ಲ, ಬಳಕೆದಾರರನ್ನು ಬೆಚ್ಚಿಬೀಳಿಸಲಿದೆ ಹೊಸ ಫೀಚರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News