ಪ್ರಧಾನಿ ಮೋದಿಯವರು ಇರಬೇಕಾದರೆ ಬಿಜೆಪಿಗೆ ಸುಳ್ಳು ಸುದ್ದಿ ಹರಡಲು ಸೋಶಿಯಲ್ ಮೀಡಿಯಾ ಬೇಕಾಗಿಲ್ಲ-ರಮ್ಯಾ

   

Last Updated : Apr 18, 2018, 10:12 AM IST
ಪ್ರಧಾನಿ ಮೋದಿಯವರು ಇರಬೇಕಾದರೆ ಬಿಜೆಪಿಗೆ ಸುಳ್ಳು ಸುದ್ದಿ ಹರಡಲು ಸೋಶಿಯಲ್ ಮೀಡಿಯಾ ಬೇಕಾಗಿಲ್ಲ-ರಮ್ಯಾ title=

ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಡಿಎನ್ಎಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ರಮ್ಯಾ ಬಿಜೆಪಿಗೆ ಸುಳ್ಳು ಸುದ್ದಿ ಹರಡಲು ಸೋಶಿಯಲ್ ಮೀಡಿಯಾದ ಅವಶ್ಯಕತೆಯಿಲ್ಲ ಆ ಕೆಲಸವನ್ನು ಪ್ರಧಾನಿಯವರು ಮಾಡುತ್ತಿದ್ದಾರೆ ಎಂದು ವ್ಯಂಗವಾಡಿದರು. 

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ದ ಪ್ರಧಾನಿ ಮೋದಿ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದರು. ಸುಳ್ಳು ಸುದ್ದಿಯ ವಿಚಾರವಾಗಿ ಮಾತನಾಡಿದ ಅವರು ಸುಳ್ಳು ಸುದ್ದಿಯು ನಿಜಕ್ಕೂ ಸಮಸ್ಯೆಯಾಗಿದ್ದು ಆದ್ದರಿಂದಲೇ ನರೇಂದ್ರ ಮೋದಿ ಡೊನಾಲ್ಡ್ ಟ್ರಂಪ್ ನಂತಹ ರಾಜಕಾರಣಿಗಳು ಆಯ್ಕೆಯಾಗುತ್ತಿದ್ದಾರೆ ಎಂದರು. 

ಕರ್ನಾಟಕದಲ್ಲಿ ಮೇ 12 ರಂದು ವಿಧಾನಸಭಾ ಚುನಾವಣೆ ಇದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವು  ಮತ್ತೊಮ್ಮೆ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.ಇತ್ತೀಚಿಗೆ ಕಾಂಗ್ರೆಸ್ ಪಕ್ಷವು ಲಿಂಗಾಯತ ಮತ್ತು ಕನ್ನಡ ಧ್ವಜದ ವಿಚಾರವನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 

 

Trending News