ಶೋಲೆ ಸಿನಿಮಾದ 'ಕಾಲಿಯಾ' ಖ್ಯಾತಿಯ ನಟ ವಿಜು ಖೋಟೆ ಇನ್ನಿಲ್ಲ

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವಿಜು ಖೋಟೆ ಅವರು ಇತ್ತೀಚಿಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆದರೆ ಇಂದು ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. 

Last Updated : Sep 30, 2019, 01:18 PM IST
ಶೋಲೆ ಸಿನಿಮಾದ 'ಕಾಲಿಯಾ' ಖ್ಯಾತಿಯ ನಟ ವಿಜು ಖೋಟೆ ಇನ್ನಿಲ್ಲ title=

ನವದೆಹಲಿ: ಬಾಲಿವುಡ್ ಸೂಪರ್ ಹಿಟ್ 'ಶೋಲೆ' ಸಿನಿಮಾದ ಕಾಲಿಯಾ ಪಾತ್ರಧಾರಿ ನಟ ವಿಜು ಖೋಟೆ(77) ಅವರು ಸೋಮವಾರ ಮುಂಬೈನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವಿಜು ಖೋಟೆ ಅವರು ಇತ್ತೀಚಿಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆದರೆ ಇಂದು ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. 

ಈ ನಟ 1964 ರಲ್ಲಿ ಬಿಡುಗಡೆಯಾದ 'ಯಾ ಮಲಾಕ್' ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ವಿಜು, ಬಾಲಿವುಡ್‌ನ ಕೆಲವು ಅಪ್ರತಿಮ ಪಾತ್ರಗಳಲ್ಲಿ ನಟಿಸಿದರು. ಆದರೆ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟ ಪಾತ್ರ, 'ಶೋಲೆ' ಚಿತ್ರದ 'ಕಾಲಿಯಾ' ಪಾತ್ರ. ಇದಲ್ಲದೆ, ಅಂದಾಜ್ ಅಪ್ನಾ ಅಪ್ನಾ, ಕುರ್ಬಾನಿ, ಕಾರ್ಜ್, ನಾಗಿನಾ ಮತ್ತು ಚೀನಾ ಗೇಟ್ ಚಿತ್ರಗಳಲ್ಲಿಯೂ ಸಹ ವಿಜು ನಟಿಸಿದ್ದಾರೆ. 

ಹಿಂದಿ ಮತ್ತು ಮರಾಠಿ ಭಾಷೆ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು ಧಾರಾವಾಹಿಗಳಲ್ಲಿ ವಿಜು ಖೋಟೆ ಕೆಲಸ ಮಾಡಿದ್ದಾರೆ.

Trending News