ಯುವಕನನ್ನು ಹಿಗ್ಗಾಮುಗ್ಗ ಥಳಿಸಿ, ಚಾಕುವಿನಿಂದ ಇರಿದು ಕೊಂದ ಕಿರಾತಕರು, ಬೆಚ್ಚಿಬೀಳಿಸುತ್ತೆ ವಿಡಿಯೋ!

Murder in Delhi: ದೆಹಲಿಯ ಸೀಮಾಪುರಿಯಲ್ಲಿ ನಡೆದ ಕೊಲೆಯ ವಿಡಿಯೋ ತುಣುಕೊಡನು ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗಿದೆ. 

Edited by - Zee Kannada News Desk | Last Updated : Dec 30, 2021, 05:14 PM IST
  • ಯುವಕನನ್ನು ಹಿಗ್ಗಾಮುಗ್ಗ ಥಳಿಸಿ, ಚಾಕುವಿನಿಂದ ಇರಿದು ಕೊಂದ ಕಿರಾತಕರು
  • ದೆಹಲಿಯ ಸೀಮಾಪುರಿಯಲ್ಲಿ ನಡೆದ ಕೊಲೆಯ ವಿಡಿಯೋ
  • ಶಾರುಖ್ ಸೀಮಾಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಯುವಕನನ್ನು ಹಿಗ್ಗಾಮುಗ್ಗ ಥಳಿಸಿ, ಚಾಕುವಿನಿಂದ ಇರಿದು ಕೊಂದ ಕಿರಾತಕರು, ಬೆಚ್ಚಿಬೀಳಿಸುತ್ತೆ ವಿಡಿಯೋ!   title=
ವ್ಯಕ್ತಿಯನ್ನು ಥಳಿಸುವ ವಿಡಿಯೋ ಸೆರೆ

ನವದೆಹಲಿ: ಪೂರ್ವ ದೆಹಲಿಯ ಶಾಹದಾರ ಜಿಲ್ಲೆಯಲ್ಲಿ ಬುಧವಾರ ಸಂಜೆ 24 ವರ್ಷದ ವ್ಯಕ್ತಿಯೊಬ್ಬನನ್ನು ಆತನ ಮನೆಯ ಸಮೀಪ ಮೂವರು ವ್ಯಕ್ತಿಗಳು ಹಿಗ್ಗಾಮುಗ್ಗ ಥಳಿಸಿ, ಚಾಕುವಿನಿಂದ ಇರಿದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 
ವ್ಯಕ್ತಿಯನ್ನು ಥಳಿಸುವ ವಿಡಿಯೋ ಸೆರೆಯಾಗಿದೆ. ಇದರಲ್ಲಿ ಕಂಡುಬಂದ ಮೂವರಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

ಘಟನೆಯ ವಿಡಿಯೋ ತುಣುಕಿನಲ್ಲಿ ಮೂವರು ಯುವಕನ ತಲೆಯ ಮೇಲೆ ಕುರ್ಚಿಯಿಂದ ಹೊಡೆಯುವುದನ್ನು ಕಾಣಬಹುದು. ಇನ್ನೊಬ್ಬ ವ್ಯಕ್ತಿ ಚಾಕುವಿನಿಂದ ಯುವಕನಿಗೆ ಎರಡು ಬಾರಿ ಇರಿದಿದ್ದಾನೆ.

 

 

ಮೃತ ವ್ಯಕ್ತಿ ಶಾರುಖ್ ಆರೋಪಿಯ ಸಹೋದರಿಯಾದ ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ತಮ್ಮ ಸಹೋದರಿ ಮತ್ತು ಶಾರುಖ್ ಅವರ ಸಂಬಂಧವನ್ನು ಕೊನೆಗೊಳಿಸುವಂತೆ ಎಚ್ಚರಿಸಿದರು. ಆದರೆ ಇಬ್ಬರೂ ಇದಕ್ಕೆ ಒಪ್ಪಲಿಲ್ಲ. ಇದರಿಂದ ಕುಪಿತಗೊಂಡು ಬುಧವಾರ ಸಂಜೆ ತನ್ನ ಇಬ್ಬರು ಸ್ನೇಹಿತರೊಂದಿಗೆ ಬಂದು ಶಾರುಖ್‌ನನ್ನು ರಸ್ತೆಯಲ್ಲಿ ಕೊಂದಿದ್ದಾರೆ ಎನ್ನಲಾಗಿದೆ.

ಶಾರುಖ್ ಸೀಮಾಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆಯ ಸಮಯದಲ್ಲಿ ಮತ್ತು ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಗಳನ್ನು ವಿಶ್ಲೇಷಿಸಿದ ಪೊಲೀಸರು ಆರೋಪಿಗಳನ್ನು ಸೀಮಾಪುರಿ ನಿವಾಸಿಗಳಾದ ಜುಬೇರ್, ಜಾಫರ್ ಮತ್ತು ಆದಿತ್ಯ ಎಂದು ಗುರುತಿಸಿದ್ದಾರೆ.

ಇದರಲ್ಲಿ ಒಬ್ಬ ವ್ಯಕ್ತಿಯು ಅನೇಕ ಅಪರಾಧಗಳ ಆರೋಪವನ್ನು ಹೊಂದಿದ್ದಾನೆ. ಆರೋಪಿಗಳ ಬಂಧನಕ್ಕೆ ಪೊಲೀಸರು ತಂಡವನ್ನು ರಚಿಸಿದ್ದಾರೆ.

ಇದನ್ನೂ ಓದಿ: ಕೇರಳದ ಅಥ್ಲೀಟ್ ಜಿತಿನ್ ಜೊತೆ ಸಪ್ತಪದಿ ತುಳಿದ ಕರ್ನಾಟಕದ ಹೆಮ್ಮೆಯ ಅಥ್ಲೀಟ್ ಪೂವಮ್ಮ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News