Viral Video:ಸಿನಿಮೀಯ ರೀತಿಯಲ್ಲಿ ವರನ ಮುಂದೆಯೇ ವಧುವಿಗೆ ಸಿಂಧೂರ್ ಹಚ್ಚಿದ ಪ್ರಿಯಕರ.. ದಂಗಾದ ಮದುವೆ ಮನೆ.!

Viral Video: ವರನ ಮುಂದೆಯೇ ಆ ವ್ಯಕ್ತಿ ಸಿಂಧೂರ್‌ನ ಪ್ಯಾಕೆಟ್ ಅನ್ನು ತೆಗೆದುಕೊಂಡು ವಧುವಿನ ಹಣೆಗೆ ಹಚ್ಚಿದ್ದಾನೆ. ಈ ಘಟನೆಯಾ ವಿಡಿಯೋ ವೈರಲ್ ಆಗಿದೆ.

Edited by - Zee Kannada News Desk | Last Updated : Dec 8, 2021, 04:46 PM IST
  • ವಧು-ವರ ಮಾಲೆಗಳನ್ನು ಬದಲಾಯಿಸಲು ಮುಂದಾಗಿರುವಾಗಲೇ ವಧುವಿನ ಮಾಜಿ ಲವರ್ ಎಂಟ್ರಿ
  • ವರನ ಮುಂದೆಯೇ ವಧುವಿಗೆ ಸಿಂಧೂರ್ ಹಚ್ಚಿದ ಪ್ರಿಯಕರ
Viral Video:ಸಿನಿಮೀಯ ರೀತಿಯಲ್ಲಿ ವರನ ಮುಂದೆಯೇ ವಧುವಿಗೆ  ಸಿಂಧೂರ್ ಹಚ್ಚಿದ ಪ್ರಿಯಕರ.. ದಂಗಾದ ಮದುವೆ ಮನೆ.!  title=
ವಧುವಿಗೆ ಸಿಂಧೂರ್ ಹಚ್ಚಿದ ಪ್ರಿಯಕರ

ವಧು ಮತ್ತು ವರ ಮಾಲೆಗಳನ್ನು ಬದಲಾಯಿಸಲು ಮುಂದಾಗಿರುವಾಗಲೇ ವಧುವಿನ ಮಾಜಿ ಲವರ್ ಎಂಟ್ರಿಕೊಟ್ಟಿದ್ದಾನೆ. ವರನ ಮುಂದೆಯೇ ಆ ವ್ಯಕ್ತಿ ಸಿಂಧೂರ್‌ನ ಪ್ಯಾಕೆಟ್ ಅನ್ನು ತೆಗೆದುಕೊಂಡು ವಧುವಿನ ಹಣೆಗೆ ಹಚ್ಚಿದ್ದಾನೆ. ಈ ಘಟನೆಯಾ ವಿಡಿಯೋ ವೈರಲ್ ಆಗಿದೆ.

ಇದನ್ನು ಗಮನಿಸಿದ ಸಂಬಂಧಿಕರು ಶೀಘ್ರದಲ್ಲೇ ಪ್ರೇಮಿಯನ್ನು ತಡೆಯಲು ಮುಂದಾದರು. ಆದರೆ ವ್ಯಕ್ತಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

ವರಮಾಲಾ ಸಮಾರಂಭಕ್ಕಾಗಿ ವಧು-ವರರು ಇಬ್ಬರೂ ನಿಂತಿದ್ದಾರೆ.  ಸಂಬಂಧಿಕರಿಂದ ಅವರಿಬ್ಬರನ್ನು ಸುತ್ತುವರೆದಿದ್ದಾರೆ. ವಧು-ವರನ ಪಾದಗಳನ್ನು ಮುಟ್ಟುತ್ತಾಳೆ ಮತ್ತು ವರನು ಅವಳ ಕುತ್ತಿಗೆಗೆ ಹಾಕಲು ಹಾರವನ್ನು ತೆಗೆದುಕೊಳ್ಳುತ್ತಾನೆ. ಇದ್ದಕ್ಕಿದ್ದಂತೆ, ಸ್ಕಾರ್ಫ್ನಿಂದ ಮುಖವನ್ನು ಮುಚ್ಚಿದ್ದ ವ್ಯಕ್ತಿ, ಅವರ ನಡುವೆ ನಡೆದುಕೊಂಡು ಬಂದು ವಧುವಿನ ಹಣೆಯ ಮೇಲೆ ಸಿಂಧೂರವನ್ನು ಹಚ್ಚುತ್ತಾನೆ. 

 

 

ಇದನ್ನು ಕಂಡು ಅಲ್ಲಿದ್ದವರು ದಿಗ್ಭ್ರಮೆಗೊಂಡರು. ನಂತರ ಕೆಲವರು ಆತನನ್ನು ಹಿಡಿಯಲು ಯತ್ನಿಸಿದರು.  ಆದರೆ, ಆತ ಪರಾರಿಯಾದನು. ಸಿನಿಮೀಯ ರೀತಿಯಲ್ಲಿರುವ ಈ ವಿಡಿಯೋ ಸಖತ್ ವೈರಲ್ ಆಗಿದೆ. 

ಇದನ್ನೂ ಓದಿ: Black Tea : ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ, ಈ ವಿಶೇಷ ಚಹಾ ಸೇವಿಸಿ!

Trending News