close

News WrapGet Handpicked Stories from our editors directly to your mailbox

ಹಿಮಾಚಲ ಪ್ರದೇಶ: ಕಣಿವೆಗೆ ಬಸ್ ಉರುಳಿ 7 ಸಾವು

ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಸನೊರಾ ಬಳಿ ಬಸ್ ಆಳವಾದ ಕಣಿವೆಗೆ ಬಿದ್ದು ಕನಿಷ್ಠ 7 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ 12 ಜನರು ಗಾಯಗೊಂಡಿದ್ದಾರೆ. 

Updated: May 13, 2018 , 01:59 PM IST
ಹಿಮಾಚಲ ಪ್ರದೇಶ: ಕಣಿವೆಗೆ ಬಸ್ ಉರುಳಿ 7 ಸಾವು

ಶಿಮ್ಲಾ: ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ಸನೊರಾ ಬಳಿ ಬಸ್ ಆಳವಾದ ಕಣಿವೆಗೆ ಬಿದ್ದು ಕನಿಷ್ಠ 7 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ 12 ಜನರು ಗಾಯಗೊಂಡಿದ್ದಾರೆ. 

ಈ ಖಾಸಗಿ ಬಸ್ ಮಾನವಾದಿಂದ ಸೋಲನ್ ಪಟ್ಟಣಕ್ಕೆ ಹೋಗುತ್ತಿರುವಾಗ ಕಣಿವೆಯತ್ತವಾಲಿ ಈ ಅಫಘಾತ ಸಂಭವಿಸಿದೆ. ರಾಜ್ಗಡ್ ಪಟ್ಟಣದಿಂದ 25 ಕಿ.ಮೀ ದೂರದಲ್ಲಿರುವ ನಾಯ್ ನೇತಿ ಪಂಚಾಯತ್ ಬಳಿ ಈ ಅಪಘಾತ ಸಂಭವಿಸಿದೆ.ಗಾಯಗೊಂಡವರಲ್ಲಿ ಬಹುತೇಕರು ಸೋಲನ್ ಪ್ರಾದೇಶಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗಾಗಲೇ ರಕ್ಷಣಾ ಕಾರ್ಯಾಚರಣೆ ಮುಗಿದಿದೆ ಎಂದು ಸಿರ್ಮೌರ್ ಜಿಲ್ಲಾಧಿಕಾರಿ ಲಲಿತ್ ಜೈನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

 
ಈವರೆಗೂ ಅಪಘಾತದ ಮೂಲ ಕಾರಣ ಇನ್ನು ತಿಳಿದಿಲ್ಲ ಎನ್ನಲಾಗಿದೆ. ಆದರೆ ಪ್ರತ್ಯಕ್ಷದರ್ಶಿಗಳು ಪ್ರಕಾರ, ಬಸ್ ನಿಂದ ಮೃತದೇಹಗಳನ್ನು ತೆಗೆಯಲು ಬಹಳ ಕಷ್ಟ ಪಟ್ಟು ಹೊರತೆಗೆಯಲಾಯಿತು.