ನವದೆಹಲಿ: ಆಧಾರ್ ಕಾರ್ಡ್ ನಿಮಗೆ ಎಷ್ಟು ಮುಖ್ಯವೋ, ಮತದಾರರ ಗುರುತಿನ ಚೀಟಿ ಕೂಡ ಅಷ್ಟೇ ಮುಖ್ಯವಾಗಿದೆ. ದಾಖಲೆಗಳ ರೂಪದಲ್ಲಿ, ಇದು ಸರ್ಕಾರಿ ಮತ್ತು ಸರ್ಕಾರೇತರ ಕೆಲಸವನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ. ಮತದಾರರ ಗುರುತಿನ ಚೀಟಿ ಅಂದರೆ ವೋಟರ್ ಐಡಿ (Voter ID) ಇಲ್ಲದೆ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮತದಾರರ ಗುರುತಿನ ಚೀಟಿ ಕಳೆದುಹೋದರೆ ಮತ್ತು ನಿಮಗೆ ಬಹಳ ಮುಖ್ಯವಾದ ಕೆಲಸಕ್ಕಾಗಿ ವೋಟರ್ ಐಡಿ ತಕ್ಷಣ ಬೇಕಿದ್ದರೆ, ಈ ವೆಬ್ಸೈಟ್‌ಗೆ ಭೇಟಿ ನೀಡುವ ಮೂಲಕ ನಿಮಿಷಗಳಲ್ಲಿ ನಿಮ್ಮ ತುರ್ತು ಮತದಾರರ ಗುರುತಿನ ಚೀಟಿಯನ್ನು ನೀವು ಪಡೆಯಬಹುದು. ಅದನ್ನು ಹೇಗೆ ಡೌನ್‌ಲೋಡ್ ಮಾಡಬೇಕೆಂದು ತಿಳಿಯೋಣ.
ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಕಳೆದುಕೊಂಡರೆ ಭಯಪಡಬೇಡಿ. ಎಲೆಕ್ಟ್ರಾನಿಕ್ ಎಲೆಕ್ಟರಲ್ ಫೋಟೋ ಐಡಿ ಕಾರ್ಡ್ (e-EPIC) ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಈ ಸೌಲಭ್ಯವನ್ನು ಬಳಸಬಹುದು. ಈ ಸೌಲಭ್ಯವನ್ನು ಬಳಸಿಕೊಂಡು, ನಿಮ್ಮ ಡಿಜಿಟಲ್ ಮತದಾರರ ಗುರುತಿನ ಚೀಟಿಯನ್ನು (Voter ID Card) ನೀವು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಬಹುದು. ಈ ವರ್ಷದ ಜನವರಿ 25 ರಂದು 'ರಾಷ್ಟ್ರೀಯ ಮತದಾರರ ದಿನಾಚರಣೆಯ' ದಿನದಂದು ಜನರ ಅನುಕೂಲಕ್ಕಾಗಿ ಈ ಸೇವೆಯನ್ನು ಪ್ರಾರಂಭಿಸಲಾಯಿತು.
ಇದನ್ನೂ ಓದಿ- ಭಾರತದಲ್ಲಿ 42 ಕೋಟಿ ಜನರಿಗೆ ಕರೋನವೈರಸ್ ಲಸಿಕೆ -ಆರೋಗ್ಯ ಸಚಿವಾಲಯ
e-EPIC ಎಂದರೇನು?
ನೀವು ಭದ್ರತೆಯಾಗಿ e-EPIC ಅವಲಂಬಿಸಬಹುದು. ಇದು ಡಿಜಿಟಲ್ ಮತದಾರರ ಗುರುತಿನ ಚೀಟಿ ಡೌನ್‌ಲೋಡ್ ಪ್ರಕ್ರಿಯೆ (digital voter identity card Download Process) ಆಗಿದ್ದು ಪೋರ್ಟಬಲ್ ಡಾಕ್ಯುಮೆಂಟ್ ಫಾರ್ಮ್ಯಾಟ್ (ಪಿಡಿಎಫ್) ಆವೃತ್ತಿಯಾಗಿದೆ. ಇದನ್ನು ಸ್ವಯಂ ಅಥವಾ ಮುದ್ರಿಸಬಹುದಾದ ರೀತಿಯಲ್ಲಿ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಡೌನ್‌ಲೋಡ್ ಮಾಡಬಹುದು. ಮತ ಚಲಾಯಿಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಅವರು ಅದನ್ನು ತಮ್ಮ ಮೊಬೈಲ್‌ನಲ್ಲಿ ಸುಲಭವಾಗಿ ಸೇವ್ ಮಾಡಬಹುದು. ನೀವು ಅದನ್ನು ಡಿಜಿ-ಲಾಕರ್‌ನಲ್ಲಿ ಪಿಡಿಎಫ್ ಆಗಿ ಅಪ್‌ಲೋಡ್ ಮಾಡಬಹುದು. ಇದಲ್ಲದೆ, ಅದನ್ನು ಮುದ್ರಿಸಲು ಕೂಡ ನಿಮಗೆ ಅವಕಾಶವಿದೆ.
ಇದನ್ನೂ ಓದಿ- National Voters Day 2021 - ಇನ್ಮುಂದೆ ನಿಮ್ಮ ಫೋನ್ ನಲ್ಲಿಯೇ ನೀವು ವೋಟರ್ ಡೌನ್ಲೋಡ್ ಮಾಡಬಹುದು
ಡಿಜಿಟಲ್ ಮತದಾರರ ಗುರುತಿನ ಚೀಟಿ ಡೌನ್‌ಲೋಡ್ ಮಾಡುವುದು ಹೇಗೆ?
>> ಅರ್ಜಿದಾರನು ಮೊದಲು ತನ್ನನ್ನು ಮತದಾರ voterportal.eci.gov.inನಲ್ಲಿ ನೋಂದಾಯಿಸಿಕೊಳ್ಳಬೇಕು.
>> ಆ ನಂತರ voterportal.eci.gov.in ಗೆ ಲಾಗಿನ್ ಮಾಡಿ.
>> ಲಾಗಿನ್ ಮಾಡಿದ ನಂತರ, ಇಪಿಐಸಿ ಸಂಖ್ಯೆ ಅಥವಾ ಫಾರ್ಮ್ ಉಲ್ಲೇಖ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
>> ಈ ಒಟಿಪಿ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಬರುತ್ತದೆ, ಅದನ್ನು ವೆಬ್ ಪೋರ್ಟಲ್‌ನಲ್ಲಿ ನಮೂದಿಸಬೇಕಾಗುತ್ತದೆ.
>> ಇದರ ನಂತರ, ವೆಬ್‌ಸೈಟ್‌ನಲ್ಲಿ ಹಲವು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ನೀವು ಡೌನ್‌ಲೋಡ್ ಇ-ಇಪಿಐಸಿ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
>> ಇದರ ನಂತರ ನಿಮ್ಮ ಡಿಜಿಟಲ್ ಮತದಾರರ ID ಯನ್ನು ಪಿಡಿಎಫ್ ರೂಪದಲ್ಲಿ ಡೌನ್‌ಲೋಡ್ ಮಾಡಲಾಗುತ್ತದೆ.
>> ನಿಮಗೆ ಯಾವುದೇ ಸಮಸ್ಯೆ ಇದ್ದರೆ ನೀವು ಟೋಲ್ ಫ್ರೀ ಸಂಖ್ಯೆ 1950 ಅನ್ನು ಸಂಪರ್ಕಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.