ವೀಡಿಯೋಕಾನ್ ಪ್ರಕರಣ: ಐಸಿಐಸಿಐ ಮಾಜಿ ಮುಖ್ಯಸ್ಥೆ ಚಂದಾ ಕೊಚ್ಚಾರ್ ವಿರುದ್ಧ ಎಫ್ಐಆರ್ ದಾಖಲಿಸಿದ ಸಿಬಿಐ

2012ರಲ್ಲಿ ವಿಡಿಯೋಕಾನ್​ ಗ್ರೂಪ್​ಗೆ 3,250 ಕೋಟಿ ರೂಪಾಯಿ ಸಾಲ ಅಕ್ರಮವಾಗಿ ನೀಡಿದ ಆರೋಪದ ಹಿನ್ನೆಲೆಯಲ್ಲಿ ಚಂದಾ ಕೊಚ್ಚಾರ್​ ಐಸಿಐಸಿಐ ಬ್ಯಾಂಕ್​ನ ಸಿಇಒ, ಎಂಡಿ ಸ್ಥಾನದಿಂದ ಕಳೆದ ವರ್ಷ ಹೊರ ನಡೆದಿದ್ದರು. 

Last Updated : Jan 24, 2019, 05:58 PM IST
ವೀಡಿಯೋಕಾನ್ ಪ್ರಕರಣ: ಐಸಿಐಸಿಐ ಮಾಜಿ ಮುಖ್ಯಸ್ಥೆ ಚಂದಾ ಕೊಚ್ಚಾರ್ ವಿರುದ್ಧ ಎಫ್ಐಆರ್ ದಾಖಲಿಸಿದ ಸಿಬಿಐ   title=

ಮುಂಬೈ: ಐಸಿಐಸಿಐ ಮಾಜಿ ಮುಖ್ಯಸ್ಥೆ ಚಂದಾ ಕೊಚ್ಚಾರ್​ ಹಾಗೂ ಅವರ ಪತಿ ದೀಪಕ್​ ಕೊಚ್ಚಾರ್​, ವೀಡಿಯೋಕಾನ್​ ಮುಖ್ಯಸ್ಥ ವೇಣುಗೋಪಾಲ್​ ಧೂಟ್​ ಅವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.

ವೀಡಿಯೋಕಾನ್ ಸಂಸ್ಥೆಗೆ ಐಸಿಐಸಿಐನಿಂದ ಸಾಲ ನೀಡಿದ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಸಿಬಿಐ ಗುರುವಾರ ಮುಂಬೈ, ಔರಾಂಗಾಬಾದ್​ ಹಾಗೂ ಮಹಾರಾಷ್ಟ್ರದಲ್ಲಿರುವ ವಿಡಿಯೋಕಾನ್​ ಮುಖ್ಯಕಚೇರಿಗಳ ಮೇಲೆ ದಾಳಿ ನಡೆಸಿದೆ.

2012ರಲ್ಲಿ ವಿಡಿಯೋಕಾನ್​ ಗ್ರೂಪ್​ಗೆ 3,250 ಕೋಟಿ ರೂಪಾಯಿ ಸಾಲ ಅಕ್ರಮವಾಗಿ ನೀಡಿದ ಆರೋಪದ ಹಿನ್ನೆಲೆಯಲ್ಲಿ ಚಂದಾ ಕೊಚ್ಚಾರ್​ ಐಸಿಐಸಿಐ ಬ್ಯಾಂಕ್​ನ ಸಿಇಒ, ಎಂಡಿ ಸ್ಥಾನದಿಂದ ಕಳೆದ ವರ್ಷ ಹೊರ ನಡೆದಿದ್ದರು. ವಿಡಿಯೋಕಾನ್​ ಗ್ರೂಪ್​ಗೆ ಅಕ್ರಮ ಸಾಲ ನೀಡುವ ಒಪ್ಪಂದದಲ್ಲಿ ಚಂದಾ ಕೊಚ್ಚಾರ್​, ಆಕೆಯ ಪತಿ ದೀಪಕ್​ ಕೊಚ್ಚಾರ್​ ಮತ್ತು ಅವರ ಕುಟುಂಬ ಲಾಭ ಪಡೆದಿದೆ ಎಂದು ವಿಶಲ್​ ಬ್ಲೋವರ್​ ಆರೋಪಿಸಿದ್ದರು.
 

Trending News