ಮಾಜಿ ಐಸಿಐಸಿಐ ಬ್ಯಾಂಕ್ ಅಧ್ಯಕ್ಷೆ ಚಂದಾ ಕೊಚ್ಚರ್ ಮತ್ತು ಇತರರ ವಿರುದ್ಧದ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ 78 ಕೋಟಿ ರೂ.ಗಳ ಆಸ್ತಿ ಮೌಲ್ಯವನ್ನು ಇಡಿ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಐಸಿಐಸಿಐ ಬ್ಯಾಂಕ್ ಮಾಜಿ ಎಂಡಿ ಮತ್ತು ಸಿಇಒ ಚಂದಾ ಕೋಚಾರ್, ಪತಿ ದೀಪಕ್ ಕೋಚಾರ್ ಮತ್ತು ವಿಡಿಯೊಕಾನ್ ನ ವೇಣುಗೋಪಾಲ್ ಧೂತ್ ಐಸಿಐಸಿಐ ಬ್ಯಾಂಕ್-ವೀಡಿಯೊಕಾನ್ ಸಾಲ ಪ್ರಕರಣದ ವಿಚಾರವಾಗಿ ಶನಿವಾರದಂದು ಮುಂಬೈನಲ್ಲಿರುವ ಜಾರಿ ನಿರ್ದೇಶನಾಲಯದ ಎದುರು ಹಾಜರಾದರು.
ಐಸಿಐಸಿಐ ಬ್ಯಾಂಕ್ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದಾ ಕೊಚಾರ್ ಮತ್ತು ವಿಡಿಯೊಕಾನ್ ವ್ಯವಸ್ಥಾಪಕ ನಿರ್ದೇಶಕ ವೇಣುಗೋಪಾಲ್ ಧೂತ್ ಅವರ ಮನೆಗಳು ಮತ್ತು ಕಚೇರಿಗಳಿಗಾಗಿ ಜಾರಿ ನಿರ್ದೇಶನಾಲಯ ಇಂದು ಶೋಧ ನಡೆಸಿದೆ.
ಐಸಿಐಸಿಐ ಬ್ಯಾಂಕ್ ನ ಮಾಜಿ ಸಿಇಒ ಚಂದಾ ಕೋಚ್ಚಾರ್ ಅವರು ಈ ಹಿಂದೆ ಬ್ಯಾಂಕ್ ನೇತೃತ್ವ ವಹಿಸಿದ್ದ ಸಂದರ್ಭದಲ್ಲಿ ಬ್ಯಾಂಕ್ ನ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಐಸಿಐಸಿಐ ಬ್ಯಾಂಕ್ ಹೇಳಿದೆ. ಬ್ಯಾಂಕ್ ನ ಸ್ವತಂತ್ರ ತನಿಖೆ ಸಮಿತಿ ವರದಿಯ ನಂತರ ಬ್ಯಾಂಕ್ ನಿಂದ ಈ ಹೇಳಿಕೆ ಬಂದಿದೆ.
ಮಾಜಿ ಐಸಿಐಸಿಐ ಬ್ಯಾಂಕ್ ಮುಖ್ಯಸ್ಥೆ ಚಂದಾ ಕೋಚಾರ್, ಪತಿ ದೀಪಕ್ ಕೋಚಾರ್ ಮತ್ತು ವೀಡಿಯೋಕಾನ್ ಮುಖ್ಯಸ್ಥ ವೇಣುಗೋಪಾಲ್ ಧೂತ್ ವಿರುದ್ಧ ಪ್ರಕರಣ ದಾಖಲಿಸಿರುವ ಸಿಬಿಐ ಅಧಿಕಾರಿಯೊಬ್ಬರು ದೂರು ದಾಖಲಿಸಿಕೊಂಡ ಬಳಿಕ ಅವರನ್ನು ವರ್ಗಾವಣೆಗೊಳಿಸಲಾಗಿದೆ.
2012ರಲ್ಲಿ ವಿಡಿಯೋಕಾನ್ ಗ್ರೂಪ್ಗೆ 3,250 ಕೋಟಿ ರೂಪಾಯಿ ಸಾಲ ಅಕ್ರಮವಾಗಿ ನೀಡಿದ ಆರೋಪದ ಹಿನ್ನೆಲೆಯಲ್ಲಿ ಚಂದಾ ಕೊಚ್ಚಾರ್ ಐಸಿಐಸಿಐ ಬ್ಯಾಂಕ್ನ ಸಿಇಒ, ಎಂಡಿ ಸ್ಥಾನದಿಂದ ಕಳೆದ ವರ್ಷ ಹೊರ ನಡೆದಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.