CBSE 10th Board Result 2021 : ಈ ದಿನ ಹೊರಬೀಳಲಿದೆ 10 ನೇ ತರಗತಿ ರಿಸಲ್ಟ್ : ಮಾರ್ಕಿಂಗ್ ಪಾಲಿಸಿ ಪ್ರಕಟಿಸಿದ ಸಿಬಿಎಸ್‌ಇ

ರದ್ದಾದ ಪರೀಕ್ಷೆಗೆ ಯಾವ ರೀತಿ ಮಾರ್ಕಿಂಗ್ ಪಾಲಿಸಿ (Marking Policy) ಇರಲಿದೆ ಎನ್ನುವುದನ್ನು ಸಿಬಿಎಸ್ ಇ (CBSE) ಶನಿವಾರವೇ ಪ್ರಕಟಿಸಿದೆ. ಅಧಿಸೂಚನೆಯ ಪ್ರಕಾರ,  ಬೋರ್ಡ್ ಪರೀಕ್ಷೆಯ ಫಲಿತಾಂಶವನ್ನು ಜೂನ್ 20 ರೊಳಗೆ ಬಿಡುಗಡೆ ಮಾಡಲಾಗುವುದು. 

Written by - Ranjitha R K | Last Updated : May 2, 2021, 08:51 AM IST
  • ಜೂನ್ 20ರೊಳಗೆ CBSE 10ನೇ ತರಗತಿಯ ಫಲಿತಾಂಶ
  • ಮಾರ್ಕಿಂಗ್ ಪಾಲಿಸಿ ಜಾರಿಗೊಳಿಸಿದ ಸಿಬಿಎಸ್‌ಇ
  • ಪಕ್ಷಪಾತ ನೀತಿ ಅನುಸರಿಸಿದರೆ ಶಾಲೆಗಳ ಮಾನ್ಯತೆ ರದ್ದು ಸಾಧ್ಯತೆ
CBSE 10th Board Result 2021 : ಈ ದಿನ ಹೊರಬೀಳಲಿದೆ 10 ನೇ ತರಗತಿ ರಿಸಲ್ಟ್ : ಮಾರ್ಕಿಂಗ್ ಪಾಲಿಸಿ ಪ್ರಕಟಿಸಿದ ಸಿಬಿಎಸ್‌ಇ title=
ಜೂನ್ 20ರೊಳಗೆ CBSE 10ನೇ ತರಗತಿಯ ಫಲಿತಾಂಶ (file photo)

ನವದೆಹಲಿ : ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 10 ನೇ ತರಗತಿಯ ಬೋರ್ಡ್ ಫಲಿತಾಂಶದ (10th Board Exam Result 2021)  ದಿನಾಂಕವನ್ನು ಪ್ರಕಟಿಸಿದೆ.  ಅಧಿಸೂಚನೆಯ ಪ್ರಕಾರ,  ಬೋರ್ಡ್ ಪರೀಕ್ಷೆಯ ಫಲಿತಾಂಶವನ್ನು ಜೂನ್ 20 ರೊಳಗೆ ಬಿಡುಗಡೆ ಮಾಡಲಾಗುವುದು. ಕೋವಿಡ್ -19 (COVID-19) ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಈ ಪರೀಕ್ಷೆಗಳನ್ನು ಬೋರ್ಡ್ ರದ್ದುಗೊಳಿಸಿತ್ತು. ಆದರೆ, ಇಡೀ ವರ್ಷದಲ್ಲಿ ವಿದ್ಯಾರ್ಥಿಗಳ ಸಾಧನೆಯನ್ನು ಅನುಸರಿಸಿ, ಫಲಿತಾಂಶ ಪ್ರಕಟಿಸಲಾಗುವುದು. 

ಮಾರ್ಕಿಂಗ್ ಪಾಲಿಸಿ ಜಾರಿಗೊಳಿಸಿದ ಸಿಬಿಎಸ್‌ಇ : 
 ರದ್ದಾದ ಪರೀಕ್ಷೆಗೆ ಯಾವ ರೀತಿ ಮಾರ್ಕಿಂಗ್ ಪಾಲಿಸಿ (Marking Policy) ಇರಲಿದೆ ಎನ್ನುವುದನ್ನು ಸಿಬಿಎಸ್ ಇ (CBSE) ಶನಿವಾರವೇ ಪ್ರಕಟಿಸಿದೆ.  ಈ ನೀತಿಯ ಅಡಿಯಲ್ಲಿ, ಪ್ರತಿ ವಿಷಯದಲ್ಲಿ 20 ಅಂಕಗಳು ಇಂಟರ್ ನೆಲ್ ಅಸೆಸ್ ಮೆಂಟ್ ನಿಂದ ನೀಡಲಾಗುತ್ತದೆ. ಉಳಿದ 80 ಅಂಕಗಳು ಇಡೀ ವರ್ಷದಲ್ಲಿ ನಡೆದ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಅವಲಂಬಿಸಿರುತ್ತದೆ.  CBSE ಎಕ್ಸಾಮಿನೇಶನ್ ಕಂಟ್ರೋಲರ್ ಸನ್ಯಂ ಭರದ್ವಾಜ್ ಈ ವಿಷಯವನ್ನು ತಿಳಿಸಿದ್ದಾರೆ. ಅಲ್ಲದೆ,  'ಶಾಲೆಗಳು ನೀಡಿದ ಅಂಕಗಳು,  ಹಿಂದಿನ ವರ್ಷದ 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಶಾಲೆಯ ಸಾಧನೆಗೆ ಅನುಗುಣವಾಗಿರಬೇಕು ಎಂದು ಹೇಳಿದ್ದಾರೆ. 

ಇದನ್ನೂ ಓದಿ : Assembly Election Results 2021: ಇಂದು ಬಹುನಿರೀಕ್ಷಿತ ಪಂಚರಾಜ್ಯ ಚುನಾವಣಾ ಫಲಿತಾಂಶ

ಹೀಗೆ  ಮಾಡಿದರೆ ಶಾಲೆಯ ಮಾನ್ಯತೆ ರದ್ದು : 
ಫಲಿತಾಂಶಗಳನ್ನು ಅಂತಿಮಗೊಳಿಸಲು ಶಾಲೆಗಳು (School) ಪ್ರಾಂಶುಪಾಲರ ನೇತೃತ್ವದಲ್ಲಿ 8 ಸದಸ್ಯರ ಸಮಿತಿಯನ್ನು ರಚಿಸಬೇಕಾಗುತ್ತದೆ. ಶಾಲೆಯ ಫಲಿತಾಂಶವನ್ನು ನೀಡುವ ವೇಳೆ, ಪಕ್ಷಪಾತ ಮತ್ತು ತಾರತಮ್ಯ ಮನೋಭಾವವನ್ನು ಅಳವಡಿಸಿಕೊಳ್ಳಬಾರದು. ಒಂದು ವೇಳೆ ಈ ರೀತಿ ಮಾಡಿರುವುದು ಕಂಡುಬಂದಲ್ಲಿ ಅಂಥಹ ಶಾಲೆಯ ವಿರುದ್ಧ ದಂಡ ವಿಧಿಸಲಾಗುವುದು, ಅಥವಾ ಶಾಲೆಯ ಮಾನ್ಯತೆಯೇ ರದ್ದಾಗಬಹುದು.  ಈ ಸಮಿತಿಯು ಜೂನ್ 11 ರೊಳಗೆ ಶಾಲೆಯ ವಿದ್ಯಾರ್ಥಿಗಳು ಪಡೆದಿರುವ  ಅಂಕಗಳನ್ನು ಸಿಬಿಎಸ್ಇಗೆ  ಹಸ್ತಾಂತರಿಸಲಿದೆ. ಜೂನ್ 20 ರೊಳಗೆ ಬೋರ್ಡ್ ಫಲಿತಾಂಶವನ್ನು (10th Result)  ಪ್ರಕಟಿಸಲಿದೆ ಎಂದು ಸನ್ಯಂ ಭರದ್ವಾಜ್ ಹೇಳಿದ್ದಾರೆ. 

ಇದನ್ನೂ ಓದಿ : Madras HC ಕಟು ಟಿಪ್ಪಣಿ ಪ್ರಶ್ನಿಸಿ SC ತಲುಪಿದ Election Commission ಕಾರಣ ಇಲ್ಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News