CBSE 12th Exam Cancelled: CBSE ಮಂಡಳಿಯ 12ನೇ ತರಗತಿಯ (CBSE Class 12th Exam) ವಿದ್ಯಾರ್ಥಿಗಳಿಗೆ ಭಾರಿ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದ್ದ ಕೇಂದ್ರ ಸರ್ಕಾರ ಪರೀಕ್ಷೆಗಳನ್ನು ರದ್ದುಗೊಳಿಸಿದೆ. ಮಂಗಳವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಈ ಕುರಿತು ಸಭೆ ನಡೆಸಿ ತೀರ್ಮಾನ ಕೈಗೊಂಡಿದ್ದಾರೆ. ಕೊರೊನಾ ವೈರಸ್ ನ ಎರಡನೇ ಅಲೆ ಹಿನ್ನೆಲೆ ಈ ನಿರ್ಣಯ ಕೈಗೊಳ್ಳಲಾಗಿದೆ. ಆದರೆ, ನೆಟ್ಟಿಗರು ಇಂಟರ್ನೆಟ್ ಮೇಲೆ ಈ ನಿರ್ಣಯದ ಕುರಿತು ತಮಾಷೆಗಾಗಿ ಮೀಮ್ಸ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಹಲವು ಸಾಮಾಜಿಕ ಮಾಧ್ಯಮ(Social Media) ಬಳಕೆದಾರರು, ಸೈನ್ಸ್ ಸ್ಟ್ರೀಮ್ ನಲ್ಲಿ ಓದಬೇಕಿತ್ತು, ಹಾಗೆಯೇ ಪಾಸಾಗಿ ಹೋಗುತ್ತಿದ್ದೆ ಎಂಬುದು ತಮ್ಮ ತಂದೆಯ ಅಭಿಪ್ರಾಯವಾಗಿತ್ತು ಎಂದಿದ್ದಾರೆ. ಅಷ್ಟೇ ಅಲ್ಲ ಇದಕ್ಕೆ ಸಂಬಂಧಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಟ್ವೀಟ್ ಗೆ (Narendra Modi Twitter) ಪ್ರತಿಕ್ರಿಯೆ ನೀಡಿರುವ ಓರ್ವ ಬಳಕೆದಾರ, 'ಸರ್ ಫೆಯರವೆಲ್ ಆದ್ರು ಮಾಡ್ಸಿ... ಆ 12ನೇ B ತರಗತಿಯ ನೇಹಾಳನ್ನು ಸೀರೆಯಲ್ಲಿ ನೋಡಬೇಕಿತ್ತು' ಎಂದಿದ್ದಾರೆ.
Those who scored less marks in preboards -
#cbseboardexams pic.twitter.com/buayZb78QR— Mannat (@thandrakhleyar) June 1, 2021
ಅಷ್ಟೇ ಅಲ್ಲ ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು 'ಲಗಾನ್' ನಿಂದ ಹಿಡಿದು 'ಫಿರ್ ಹೇರಾಫೇರಿ' ಗಳಂತಹ ಚಿತ್ರಕ್ಕೆ ಸಂಬಂಧಿಸಿದ ಮೀಮ್ಸ್ ಗಳನ್ನೂ ಹಂಚಿಕೊಂಡು ಪರೀಕ್ಷೆ ರಾದ್ದಾಗಿರುವುದರ ಸಂತಸ ಹಂಚಿಕೊಂಡಿದ್ದಾರೆ. ಇನ್ನೊಂದೆಡೆ ಮತ್ತೊಂದು ಮೀಮ್ಸ್ ನಲ್ಲಿ ವಿದ್ಯಾರ್ಥಿಗಳ ಮೇಲೆ ಪಟ್ಟು ಬಿಗಿಗೊಳಿಸಿ ಟ್ವೀಟ್ ಮಾಡಿರುವ ಬಳಕೆದಾರರೊಬ್ಬರು 'ಟ್ವಿಟ್ಟರ್ ನಲ್ಲಿ ಯಾವ ವಿದ್ಯಾರ್ಥಿಗಳು 'ಕ್ಯಾನ್ಸಲ್ ಎಕ್ಸಾಮ್' ಅನ್ನು ಕಳೆದ 24ಗಂಟೆಗಳಲ್ಲಿ ಟ್ರೆಂಡ್ ಮಾಡಿದ್ದಾರೆಯೋ, ಅವರು ಇದೀಗ 'ಈಗ ನಮಗೆ ಹೊಸ ಟಾಸ್ಕ್ ಬೇಕು' ಎನ್ನುತ್ತಿದ್ದಾರೆ ಎಂದಿದ್ದಾರೆ. ಇನ್ನೊಂದೆಡೆ ಸಂಭಾವ್ಯ ಟಾಪರ್ ಗಳ ದುಃಖವನ್ನು ತೋಡಿಕೊಂಡಿರುವ ಬಳಕೆದಾರರೊಬ್ಬರು, 'ಸಡನ್ನಾಗಿ ವೇಳೆ ಬದಲಾಯ್ತು, ಭಾವನೆಗಳು ಬದಲಾದವು ಹಾಗೂ ಜೀವನವೇ ಬದಲಾಯ್ತು' ಎಂದು ಬರೆದಿದ್ದಾರೆ.
#cbseboardexams
Class 12 exams cancelled!!
Students be like : pic.twitter.com/AL1He1ij3L— Pragya Tiwari (@iam_pragyaT) June 1, 2021
ಇದನ್ನೂ ಓದಿ- SBI Alert:ಬ್ಯಾಂಕ್ ಸಮಯದಲ್ಲಿ ಬದಲಾವಣೆ, ಇಂದಿನಿಂದ ಜಾರಿಗೆ ಬಂದಿದೆ ಈ ಹೊಸ ವೇಳಾಪಟ್ಟಿ
ಇದೇ ರೀತಿಯ ಮತ್ತೊಂದು ಮೇಂ ನಲ್ಲಿ 'ಹೇರಾ ಫೇರಿ' ಚಿತ್ರದ ಫೋಟೋವೊಂದನ್ನು ಹಂಚಿಕೊಂಡಿರುವ ಬಳಕೆದಾರರೊಬ್ಬರು, 'ಬಾಬು ಭೈಯಾ ಹಮ್ ಬಚ್ ಗಯೇ' ಅಂದರೆ, 'ಬಾಬು ಭೈಯಾ ನಾವು ಬದುಕಿದೆವು' ಎಂದು ಬರೆದಿದ್ದಾರೆ. ಇನ್ನೊಂದು ಟ್ವೀಟ್ ನಲ್ಲಿ 'ಲಗಾನ್' ಚಿತ್ರದ ಫೋಟೋವೊಂದನ್ನು ಹಂಚಿಕೊಂಡಿರುವ ಬಳಕೆದಾರರೊಬ್ಬರು 'ಹಮ್ ಜೀತ್ ಗಯೇ' ಅಂದರೆ 'ನಾವು ಗೆದ್ದುಬಿಟ್ಟೆವು' ಎಂದು ಬರೆದುಕೊಂಡಿದ್ದಾರೆ. ಇನ್ನೊಂದೆಡೆ ಟಾಪರ್ ಗಳ ಕಾಲೆಯುತ್ತಿರುವ ಬ್ಯಾಕ್ ಬೆಂಚರ್ ಗಳು 'ನಿಮಗೆ ನೋವಾಗುತ್ತಿರಬೇಕು' ಎನ್ನುತ್ತಿದ್ದಾರೆ.
ಇದನ್ನೂ ಓದಿ- 12ನೇತರಗತಿ CBSE ಬೋರ್ಡ್ ಪರೀಕ್ಷೆಗಳು ರದ್ದು, ಪ್ರಧಾನಿ ಮೋದಿ ಸಭೆಯಲ್ಲಿ ಮಹತ್ವದ ನಿರ್ಧಾರ
ಮತ್ತೊಂದು ಮೀಮ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಭಾವಚಿತ್ರ ಹಂಚಿಕೊಂಡಿರುವ ಬಳಕೆದಾರರೊಬ್ಬರು 'ಬೈಟೆ ಕ್ಯಾ ಹೋ ನಾಚೋ' ಅಂದರೆ ಕುಲಿತಿರುವಿರೇಕೆ? ಕುಣಿದಾಡಿ' ಎಂದು ಬರೆದಿದ್ದಾರೆ. ಮಂಗಳವಾರ ಸಭೆಯ ಬಳಿಕ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ, ನಾವು ಪರೀಕ್ಷೆಗಳಿಗಾಗಿ ದೇಶದ ಯುವಕರನ್ನು ರಿಸ್ಕ್ ನಲ್ಲಿ ಹಾಕಲು ಬಯಸುವುದಿಲ್ಲ. ಹೀಗಾಗಿ ಪರೀಕ್ಷೆಗಳನ್ನು ರದ್ದುಗೊಳಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದಿದ್ದರು.
ಇದನ್ನೂ ಓದಿ- ಭಾರತದಲ್ಲಿ ದೊರೆತೆ Covid-19 ರೂಪಾಂತರಿಗಳಿಗೆ ನಾಮಕರಣ ಮಾಡಿದ WHO
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.