ಐಸಿಐಸಿಐ ಬ್ಯಾಂಕ್'ಗೆ ಚಂದಾ ಕೊಚ್ಚಾರ್ ಪಾವತಿಸಬೇಕಾದ ಬಾಕಿ 353 ಕೋಟಿ ರೂ!

ಚಂದ ಕೊಚ್ಚಾರ್ ಅವರು, 2009ರಿಂದ 2018ರ ವರೆಗೆ ಪಡೆದ ವೇತನ ಹಾಗೂ ಇತರೆ ಸೌಲಭ್ಯಗಳಿಗಾಗಿ ಪಡೆದ 353.16 ಕೋಟಿ ರುಪಾಯಿಯನ್ನು ಮರುಪಾವತಿಸಲು ಬ್ಯಾಂಕ್ ತಿಳಿಸಿದೆ.

Last Updated : Jan 31, 2019, 06:27 PM IST
ಐಸಿಐಸಿಐ ಬ್ಯಾಂಕ್'ಗೆ ಚಂದಾ ಕೊಚ್ಚಾರ್ ಪಾವತಿಸಬೇಕಾದ ಬಾಕಿ 353 ಕೋಟಿ ರೂ! title=
Photo Courtesy: Reuters

ನವದೆಹಲಿ: ಐಸಿಐಸಿಐ ಬ್ಯಾಂಕ್‌-ವಿಡಿಯೊಕಾನ್‌ ಸಾಲದ ಪ್ರಕರಣದಲ್ಲಿ ಮಾಜಿ ಸಿಇಒ ಚಂದಾ ಕೊಚ್ಚಾರ್‌ ಅವರು ಬ್ಯಾಂಕ್‌ನ ನೀತಿಗಳನ್ನು ಉಲ್ಲಂಘಿಸಿದ ಆರೋಪ ಸಾಬೀತಾದ ಬೆನ್ನಲ್ಲೇ ಅವರನು ಸೇವ್ಯಿಂದ ವಜಾಗೊಳಿಸಿದ್ದ ಐಸಿಐಸಿಐ ಬ್ಯಾಂಕ್ ಇದೀಗ 353 ಕೋಟಿ ರೂ. ಮರುಪಾವತಿಸುವಂತೆ ತಿಳಿಸಿದೆ. 

ಚಂದ ಕೊಚ್ಚಾರ್ ಅವರು, 2009ರಿಂದ 2018ರ ವರೆಗೆ ಪಡೆದ ವೇತನ ಹಾಗೂ ಇತರೆ ಸೌಲಭ್ಯಗಳಿಗಾಗಿ ಪಡೆದ 353.16 ಕೋಟಿ ರುಪಾಯಿಯನ್ನು ಮರುಪಾವತಿಸಲು ಬ್ಯಾಂಕ್ ತಿಳಿಸಿದೆ. ಚಂದಾ ಕೊಚ್ಚಾರ್ ಅವರು ಕಳೆದ ಒಂಬತ್ತು ವರ್ಷಗಳಲ್ಲಿ 9.4 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಪಡೆದಿದ್ದು, ಈಗ ಅದರ ಮೌಲ್ಯ 343.34 ಕೋಟಿ ರುಪಾಯಿ ಆಗಲಿದೆ ಎನ್ನಲಾಗಿದೆ. ಅಲ್ಲದೆ ಅವರು ಪಡೆದಿದ್ದ ಮೂಲ ವೇತನ ಹಾಗೂ ಇತರ ಭತ್ಯೆಗಳ ಮೊತ್ತವನ್ನೂ ಮರುಪಾವತಿಸಬೇಕಾಗಿದೆ.

ನಿವೃತ್ತ ನ್ಯಾಯಮೂರ್ತಿ ಬಿ.ಎನ್‌ ಶ್ರೀಕೃಷ್ಣ ನೇತೃತ್ವದ ಸಮಿತಿ ತನ್ನ ತನಿಖೆಯನ್ನು ಮುಕ್ತಾಯಗೊಳಿಸಿ ಬುಧವಾರ ವರದಿ ಸಲ್ಲಿಸಿತ್ತು. ಇದಾದ ಬಳಿಕ ಐಸಿಐಸಿಐ ಬ್ಯಾಂಕ್‌ನ ಆಡಳಿತ ಮಂಡಳಿಯು ಚಂದಾ ಕೊಚ್ಚಾರ್‌ ರಾಜೀನಾಮೆಯನ್ನು 'ವಜಾ' ಎಂದು ಪರಿಗಣಿಸಿ, ಬ್ಯಾಂಕಿನ ನಿಯಮಾವಳಿಗೆ ಅನ್ವಯ, ಅವರಿಗೆ ವೇತನ ಮತ್ತು ಬೋನಸ್‌ ಬಾಕಿ ಪಾವತಿಯನ್ನು ಸ್ಥಗಿತಗೊಳಿಸಿ, ಶೇರುಗಳನ್ನು ಹಿಂಪಡೆಯಲು ಮುಂದಾಗಿದೆ.

Trending News