ನವದೆಹಲಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್ ಅನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಮುಂದಾಗಿರುವ ಕಾಂಗ್ರೆಸ್ ಈಗ ಸತತ ಮೂರು ಬಾರಿ ಶಾಸಕರಾಗಿರುವ ದಲಿತ ನಾಯಕ ಚರಣಜಿತ್ ಸಿಂಗ್ ಚನ್ನಿ ಅವರನ್ನು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ನೇಮಿಸಿದೆ.ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಸೆಪ್ಟೆಂಬರ್ 18 ರಂದು ರಾಜೀನಾಮೆ ನೀಡಿದ ನಂತರ ಈ ನಡೆ ಬಂದಿದೆ.
ಸೋಮವಾರ ಬೆಳಿಗ್ಗೆ 11 ಗಂಟೆಗೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ಭೇಟಿ ಮಾಡಿದ ನಂತರ ಚರಣಜಿತ್ ಸಿಂಗ್ ಚನ್ನಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಚನ್ನಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ನಿರ್ಧಾರವು ಸರ್ವಾನುಮತದಿಂದ ಕೂಡಿದ್ದು, ಪಕ್ಷದ ಎಲ್ಲ ಶಾಸಕರು ರಾಜ್ಯಪಾಲರ ಮುಂದೆ ಬೆಂಬಲಿಸಿದ್ದಾರೆ.
ಇದನ್ನೂ ಓದಿ: Charanjit Singh Channi: ಯಾರು ಈ ಚರಣಜಿತ್ ಸಿಂಗ್ ಚನ್ನಿ ?
ಚಮ್ಕೌರ್ ಸಾಹಿಬ್ ನ ಶಾಸಕರಾದ ಚನ್ನಿ (Charanjit Singh Channi),ರಾಜ್ಯದಲ್ಲಿ ಮೊದಲ ದಲಿತ ಮುಖ್ಯಮಂತ್ರಿ ಮತ್ತು ಕಿರಿಯ ವಯಸ್ಸಿನಲ್ಲಿಯೇ ಮುಖ್ಯಮಂತ್ರಿ ಪದವಿಯ ಚುಕ್ಕಾಣಿ ಹಿಡಿದಿದ್ದಾರೆ.ರಾಮದಾಸಿಯಾ ಸಮುದಾಯಕ್ಕೆ ಸೇರಿದ ಚನ್ನಿ ಅವರನ್ನು ಈಗ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡುವ ಮೂಲಕ 2022 ರ ಮಾರ್ಚ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ದಲಿತ ಮತಗಳನ್ನು ಓಲೈಸಲು ಪ್ರಯತ್ನಿಸುತ್ತಿದೆ.
ನಿರ್ಗಮಿತ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಚನ್ನಿಯನ್ನು ಸ್ವಾಗತಿಸಿದವರಲ್ಲಿ ಮೊದಲಿಗರಾಗಿದ್ದರು, ಪಕ್ಷದ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್ ಅವರು ಸಂಜೆ ಅವರ ನೇಮಕಾತಿಯ ಬಗ್ಗೆ ಔಪಚಾರಿಕ ಘೋಷಣೆಯನ್ನು ಮಾಡಿದರು.
ಇದನ್ನೂ ಓದಿ: ಚರಣಜಿತ್ ಸಿಂಗ್ ಚನ್ನಿ ಪಂಜಾಬ್ ನ ನೂತನ ಮುಖ್ಯಮಂತ್ರಿ
ಇನ್ನೊಂದೆಡೆಗೆ ಚನ್ನಿ ಅವರ ನೇಮಕಾತಿಗೆ ಅಭಿನಂದನೆಗಳನ್ನು ಸಲ್ಲಿಸಿರುವ ರಾಹುಲ್ ಗಾಂಧಿ "ಹೊಸ ಜವಾಬ್ದಾರಿಗಾಗಿ ಶ್ರೀ ಚರಣಜಿತ್ ಸಿಂಗ್ ಚನ್ನಿ ಜೀ ಅವರಿಗೆ ಅಭಿನಂದನೆಗಳು.ನಾವು ಪಂಜಾಬ್ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವುದನ್ನು ಮುಂದುವರಿಸಬೇಕು.ಅವರ ನಂಬಿಕೆಯು ಅತ್ಯಂತ ಮಹತ್ವದ್ದಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.