ನವದೆಹಲಿ: ಶನಿವಾರದಂದು ಛತ್ತೀಸ್ ಗಡ್ ದ ಮುಖ್ಯಮಂತ್ರಿ ಭುಪೇಶ್ ಬಾಘೇಲ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯನ್ನು ಮೋಹನ್ ಮಾರ್ಕಂಗೆ ರವಾನಿಸುವಾಗ ಭಾವುಕರಾಗಿದ್ದಾರೆ.
ಅಧ್ಯಕ್ಷ ಪದವಿಯಿಂದ ತ್ಯಜಿಸಿದ ನಂತರ ಬಿಳ್ಕೊಡುಗೆ ಭಾಷಣ ಮಾಡುತ್ತಿದ್ದ ವೇಳೆ ಅವರು ಭಾವುಕರಾಗಿ ಅತ್ತಿದ್ದಾರೆ.ಆಗ ತಕ್ಷಣ ಒಂದು ಕ್ಷಣ ನಿಂತು ಕಣ್ಣೀರು ಒರೆಸಿಕೊಂಡಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಭೂಪೇಶ್ ಬಾಗೇಲ್ ಜಿಂದಾಬಾದ್, ಕಾಂಗ್ರೆಸ್ ಪಕ್ಷ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ.
#WATCH Chhattisgarh Chief Minister Bhupesh Baghel who was also the Congress President of the party's state unit, tears up remembering the contribution of members, at an event passing the post to Mohan Markam in Raipur. (June 29) pic.twitter.com/O70Uuchu8P
— ANI (@ANI) June 29, 2019
ಭಾಷಣದ ವೇಳೆ ಸಿಎಂ ಬಾಘೇಲ್ ಮಾತನಾಡಿ' ನಾವು 2013 ರಲ್ಲಿ ಚುನಾವಣೆಯಲ್ಲಿ ಸೋತ ನಂತರ ರಾಹುಲ್ ಗಾಂಧೀಜಿಯವರು ನನ್ನನ್ನು ಈ ಹುದ್ದೆಗೆ ನೇಮಕ ಮಾಡಿದರು. 2014 ರ ಲೋಕಸಭಾ ಚುನಾವಣೆಗಳು ಹತ್ತಿರದಲ್ಲಿದ್ದವು. 2014 ರ ಚುನಾವಣೆಯ ನಂತರ ರಾಜ್ಯದಲ್ಲಿ ಪಕ್ಷದ ಭವಿಷ್ಯದ ಬಗ್ಗೆ ನಾವು ಚಿಂತಿತರಾಗಿದ್ದೇವು. ಆಗ ಜೂನ್ 2014 ರ ನಂತರ ಪಕ್ಷದ ನಾಯಕರು ಪ್ರಾರಂಭಿಸಿದ ಹೋರಾಟ ಛತ್ತೀಸ್ಗಡ್ ದಲ್ಲಿ ಅಧಿಕಾರಕ್ಕೆ ಬರುವ ತನಕ ಮುಂದುವರೆಯಿತು' ಎಂದು ಹೇಳಿದರು.
ಈಗ ಸಿಎಂ ಬಾಘೇಲ್ ಬದಲಿಗೆ ಮೋಹನ್ ಮಾರ್ಕಾಂ ಅವರನ್ನು ಛತ್ತೀಸ್ ಗಡ್ ಕಾಂಗ್ರೆಸ್ ನ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ರಾಯ್ಪುರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಪಿ.ಎಲ್.ಪುನಿಯಾ ಮತ್ತು ಮಾರ್ಕಮ್ ಉಪಸ್ಥಿತರಿದ್ದರು.