ಮಕ್ಕಳ ದಿನಾಚರಣೆ: ನೆಹರು ಜೈಲಿನಲ್ಲಿದ್ದಾಗ ಮಗಳು ಇಂದಿರಾಗೆ ಬರೆದ ಪತ್ರ

Last Updated : Nov 14, 2018, 09:27 PM IST
ಮಕ್ಕಳ ದಿನಾಚರಣೆ: ನೆಹರು ಜೈಲಿನಲ್ಲಿದ್ದಾಗ ಮಗಳು ಇಂದಿರಾಗೆ ಬರೆದ ಪತ್ರ  title=

ದು 1928 ರ ಬೇಸಿಗೆಯ ಸಮಯ, ಆಗ ನೆಹರು ಮುಸ್ಸೂರಿಯಲ್ಲಿದ್ದ ಮಗಳು ಇಂದಿರಾಗೆ ಪತ್ರ ಬರೆಯುವ ಹವ್ಯಾಸವನ್ನು ರೂಡಿಸಿಕೊಂಡರು. ತಮ್ಮ ಮೊದಲ ಪತ್ರ 'ಬುಕ್ ಆಫ್ ನೇಚರ್' ನಲ್ಲಿ ನೆಹರು ವಿಶ್ವದ ಮೇಲಿನ ಜೀವ ಉಗಮದ ಬಗ್ಗೆ ಮಗಳಿಗೆ ವಿವರಿಸುತ್ತಾರೆ. ಇದಾದ ನಂತರ ಅವರು ಇತಿಹಾಸ, ಭಾಷೆ, ಮಹಾಕಾವ್ಯಗಳು, ಭೂಗೋಳ, ಹೀಗೆ ಹಲವಾರು ವಿಷಯಗಳ ಮೇಲೆ ಇಂದಿರಾಗೆ ಪತ್ರ ಬರೆಯಲು ಪ್ರಾರಂಭಿಸುತ್ತಾರೆ. 1930 ರಲ್ಲಿ ಇಂದಿರಾ 13ನೇ ವಯಸ್ಸಿಗೆ ಕಾಲಿಟ್ಟಾಗ ಆಗಿನ್ನೂ ಜೈಲಿನಲ್ಲಿದ್ದ ನೆಹರು ಅವರು ಮಗಳು ತಂದೆಯ ಸಂಪರ್ಕದಲ್ಲಿರಲಿ ಎಂದು ವಿವರಣಾತ್ಮಕ ಪತ್ರಗಳನ್ನು ಬರೆಯಲು ಪ್ರಾರಂಭಿಸುತ್ತಾರೆ. ನಂತರ ಸತತ ನಾಲ್ಕು ವರ್ಷಗಳ ಕಾಲ ಜೈಲಿನಿಂದಲೇ ನೆಹರು ಪತ್ರಗಳನ್ನು ಬರೆಯುವುದನ್ನು ಮುಂದುವರೆಸುತ್ತಾರೆ.

ಮುಂದೆ ಇದೇ ಪತ್ರಗಳ ವಿಚಾರವಾಗಿ 1973ರಲ್ಲಿ ಇಂದಿರಾ ಗಾಂಧಿ ಪ್ರತಿಕ್ರಿಯಿಸುತ್ತಾ  "ಈ ಪತ್ರಗಳು ಜನರ ಬಗೆಗಿನ ಕಾಳಜಿ ಮತ್ತು ಜಗತ್ತಿನೆಲ್ಲಡೆ ಇರುವ ಕೌತಕಗಳ ಬಗ್ಗೆ ಕೂತುಹಲವನ್ನು ಹೆಚ್ಚಿಸುತ್ತವೆ. ಅವು ನಿಸರ್ಗವನ್ನು ಪುಸ್ತಕದ ಹಾಗೆ ಕಾಣಲು ನನಗೆ ಪ್ರೇರೇಪಿಸಿವೆ." ಎಂದು ಹೇಳುತ್ತಾರೆ.

ಅಂತಹ ಪತ್ರಗಳಲ್ಲಿ ಇಂದಿರಾಗೆ ಜವಾಹರ್ ಲಾಲ್ ನೆಹರು ಬರೆದ ಒಂದು ಪತ್ರ ಇಲ್ಲಿದೆ 

ನನ್ನ ಪ್ರೀತಿಯ ಇಂದಿರಾ 

ನಿನ್ನ ಹುಟ್ಟುಹಬ್ಬದ ದಿನದಂದು ಶುಭ ಹಾರೈಕೆಗಳನ್ನು ಸ್ವೀಕರಿಸುವ ಹವ್ಯಾಸ ನಿನಗೆ ರೂಡಿಗತವಾಗಿದೆ. ಶುಭಹಾರೈಕೆಗಳು ನಿನಗೆ ಪರಿಪೂರ್ಣತೆಯನ್ನು ನೀಡುತ್ತವೆ.ಆದರೆ ನೈನಿ ಜೈಲಿನಿಂದ ನಾನು ನಿನಗೆ ಯಾವ ಊಡುಗೋರೆ ನೀಡಲಿ? ನಾನು ನೀಡುತ್ತಿರುವ ಉಡುಗೋರೆಗಳು ಭೌತಿಕ ಮತ್ತು ಘನವಾಗಿರುವಂತವುಗಳಲ್ಲ. ಬದಲಾಗಿ ಅವು ಮನಸ್ಸಿಗೆ ಮತ್ತು ಉತ್ಸಾಹಕ್ಕೆ ಸಂಬಂಧಿಸಿದವುಗಳು. ಅವು ಜೈಲಿನ ಎತ್ತರದ ಗೋಡೆಗಳಿಂದಲೂ ಸಹ ತಡೆಯನ್ನೋಡ್ದಲು ಸಾಧ್ಯವಾಗದೇ ಇರುವಂತವುಗಳಾಗಿವೆ.

ಚಿನ್ನು ನಾನು ಸಲಹೆ ಮತ್ತು ಉಪದೇಶ ನೀಡುವುದೆಲ್ಲವನ್ನು ಹೇಗೆ ನಿರಾಕರಿಸುತ್ತೇನೆ ಎಂದು ನಿನಗೆ ಗೊತ್ತು. ನಾನು ಯಾವಾಗಲು ಯಾವುದು ಸರಿ, ಯಾವುದು ತಪ್ಪು, ಏನು ಮಾಡಬೇಕು ಏನನ್ನು ಮಾಡಬಾರದು ಎನ್ನುವುದರ ಕುರಿತಾಗಿ ಚಿಂತಿಸುತ್ತೇನೆ. ಆದರೆ ಇದನ್ನು ಬರಿ ಉಪದೇಶ ಹೇಳುವುದರ ಮೂಲಕ ಮಾಡುವುದಲ್ಲ, ಬದಲಾಗಿ ಅವುಗಳನ್ನು ಮಾತುಕತೆ ಮತ್ತು ಚರ್ಚೆ ಮೂಲಕ ಕಾರ್ಯಗೊಳಿಸುವಂತದ್ದು. ಅಂತಹ ಚರ್ಚೆ ಮೂಲಕ ಅಲ್ಪಸತ್ಯವಾದರೂ ಹೊರಬರಲು ಸಹಾಯಕವಾಗುತ್ತದೆ. ನಿನ್ನ ಜೊತೆಗಿನ ಮಾತುಕತೆ ನನಗೆ ಇಷ್ಟವಾಗಿದೆ ಮತ್ತು ನಾವಿಬ್ಬರು ಹಲವಾರು ವಿಷಯಗಳ ಕುರಿತಾಗಿ ಚರ್ಚೆ ಮಾಡಿದ್ದೇವೆ. ಆದರೆ ಜಗತ್ತು ವಿಶಾಲವಾಗಿದೆ. ಈ ಜಗತ್ತಿನ ಹೊರಗಡೆ ಮಿಥ್ಯ ಮತ್ತು ರಹಸ್ಯವನ್ನು ಒಳಗೊಂಡ ಇನ್ನೊಂದು ಅದ್ಬುತ ಜಗತ್ತಿದೆ. ಆದ್ದರಿಂದ ನಾವ್ಯಾರು ಕೂಡ ಎಂದಿಗೂ ಕೂಡ ನಿರಾಶೆಗೊಳ್ಳಬೇಕಾಗಿಲ್ಲ  ಅಥವಾ ನಾವು ಎಲ್ಲವನ್ನು ಕಲಿತು ಬುದ್ದಿವಂತರಾಗಿದ್ದೇವೆ ಎಂದು ಭಾವಿಸಬೇಕಿಲ್ಲ. 

ಆದರೆ ಇದರ ನಂತರ ನಾನೇನು ಮಾಡಬೇಕು? ಪತ್ರವು ಮಾತುಕತೆಯ ರೂಪವನ್ನು  ಪಡೆಯುವುದು ಕಷ್ಟ; ಇದು ಕೇವಲ ಒಂದಡೆಯ ಸಂಬಂಧ ಮಾತ್ರ. ನಾವು ನಿಜವಾಗಿಯೂ ಪರಸ್ಪರ ಮಾತುಕತೆ ನಡೆಸಿದ್ದೆವೆ ಎನ್ನುವ ಆಲೋಚನೆ ನಿನಗೆ ಬರಲು ನಾನು ಈ ಸಲಹೆಗಳನ್ನು ನೀಡಿದ್ದೇನೆ.

ಇತಿಹಾಸದಲ್ಲಿ ದೇಶಗಳ ಕಾಲಾವಧಿ, ವ್ಯಕ್ತಿಗಳು, ಮಹಿಳೆಯರ ಬಗ್ಗೆ ನಾವು ಓದಿರುತ್ತೇವೆ. ನೀನು ಮೊದಲ ಬಾರಿಗೆ ಜೀನ್ ಡಿ ಆರ್ಚ್ ಕಥೆಯನ್ನು ಓದಿದಾಗ ಹೇಗೆ ಉತ್ಸುಕಳಾಗಿದ್ದೆ ಎನ್ನುವುದರ ಬಗ್ಗೆ ನಿನಗೆ ನೆನಪಿದೆಯೇ ? ಮತ್ತು ನಿನ್ನ ಬಯಕೆಯು ಕೂಡ ಆಕೆಯಂತದ್ದೆ ಆಗಿತ್ತು. ಸಾಮಾನ್ಯ ವ್ಯಕ್ತಿ ಮತ್ತು ಮಹಿಳೆಯರು ಜನಪ್ರೀಯ ನಾಯಕರ ಹಾಗೆ ಇರುವುದಿಲ್ಲ. ಏಕೆಂದರೆ ಅವರಿಗೆ ಆಹಾರ, ಮಕ್ಕಳು ಮತ್ತು ಆಶ್ರಯವೇ ಹೆಚ್ಚು ಚಿಂತಿಸುವಂತೆ ಮಾಡುತ್ತದೆ. ಆದರೆ ಅಂತಹ  ಸನ್ನಿವೇಶ ಬಂದಾಗ ಇಡೀ ಜನ ಸಮುದಾಯವು ಕೂಡ ಅಂತಹ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಆ ಸಂದರ್ಭವು ಸಾಮಾನ್ಯ ವ್ಯಕ್ತಿ ಮತ್ತು ಮಹಿಳೆರನ್ನು ಸಹಿತ ಹೀರೋಗಳನ್ನಾಗಿ ಮಾಡಲು ಸಹಾಯ ಮಾಡುತ್ತದೆ. ಪ್ರಮುಖ ನಾಯಕರು ಎಲ್ಲ ಜನರನ್ನು ಪ್ರೇರೆಪಿಸುವಂತೆ ಮಾಡಿ ಉತ್ತಮ ಕಾರ್ಯ ಕೈಗೊಳ್ಳುವಂತೆ ಮಾಡುತ್ತಾರೆ. ಭಾರತದಲ್ಲಿ ಉತ್ತಮ ನಾಯಕನಾದವನು ಶೋಷಿತರರ ಮೇಲೆ ಪ್ರೀತಿ ತೋರಿಸುವುದಲ್ಲದೆ ಅವರಿಗೆ ಸಹಾಯ ಮಾಡುವ ಇಚ್ಛೆಯನ್ನು ಹೊಂದಿರುತ್ತಾನೆ,ಮತ್ತು ನಮ್ಮ ಜನರನ್ನು ಉತ್ತಮ ಕಾರ್ಯ ಮತ್ತು ತ್ಯಾಗಲ್ಲಿ ತೊಡಗಿಸಿಕೊಳ್ಳಲು ಪ್ರೇರಕನಾಗುತ್ತಾನೆ, ಅಲ್ಲದೆ ಹಸಿದವರಲ್ಲಿ ಬಡವರಲ್ಲಿ ಮತ್ತು ಶೋಷಿತರಲ್ಲಿ ಮುಕ್ತಿ ಹಾಗೂ ಸಂತಸ ಮೂಡಲು ಅವರಿಗೆ ನೆರವಾಗುತ್ತಾನೆ.

ಬಾಪೂಜಿ ಜೈಲಿನಲ್ಲಿದ್ದಾರೆ, ಆದರೆ ಅವರ ಮಾಂತ್ರಿಕ ಸಂದೇಶ ಲಕ್ಷಾಂತರ ಭಾರತೀಯರ ಹೃದಯವನ್ನು ಗೆದ್ದಿದೆ, ಪುರುಷರು, ಮಹಿಳೆಯರು ಮತ್ತು ಚಿಕ್ಕಪುಟ್ಟ ಮಕ್ಕಳು ಸಹಿತ ಭಾರತದ ಸ್ವಾತಂತ್ರ್ಯ ಹೋರಾಟದ ಯೋಧರಾಗಿದ್ದಾರೆ. ಇಂದು ಭಾರತದಲ್ಲಿ ನಾವು ಇತಿಹಾಸವನ್ನು ನಿರ್ಮಿಸುತ್ತಿದ್ದೇವೆ.  ಅದು ನಮ್ಮ ಕಣ್ಣೆದುರಿಗೆ ನಡೆಯುತ್ತಿರುವುದನ್ನು ಈಗ ನೀನು ಮತ್ತು ನಾನು ನೋಡುತ್ತಿದ್ದೇವೆ. ಇಂತಹ ಸನ್ನಿವೇಶದಲ್ಲಿ ನಾವು ಸಹ ಅದರ ಭಾಗವಾಗಿರುವುದು ನಿಜಕ್ಕೂ ನಮ್ಮ ಅದೃಷ್ಟವಾಗಿದೆ.

ಅದರಲ್ಲಿ ನಾವು ವಹಿಸುತ್ತಿರುವ ಪಾತ್ರವಾದರೂ ಏನು ?

ಒಂದು ವೇಳೆ ನಾವು ಭಾರತದ ಯೋಧರಾಗಬೇಕಾದರೆ ಭಾರತವನ್ನು ನಾವೆಲ್ಲರೂ ಗೌರವಿಸಬೇಕು, ಆ ಗೌರವ ಪವಿತ್ರ ನಂಬಿಕೆಯಾಗಿದೆ. ಅಷ್ಟಕ್ಕೂ ಯಾವುದು ಸರಿ ಯಾವುದು ತಪ್ಪು ಎನ್ನುವುದನ್ನು ತಿರ್ಮಾನಿಸುವುದು ಅಷ್ಟು ಸುಲಭದ ಮಾತಲ್ಲ. ಆದ್ದರಿಂದ ನಿನಗೆ ಯಾವಾಗ ಸಂಶಯವೇನಿಸುತ್ತೋ ಆಗ ನೀನು ಈ ಪ್ರಯೋಗಕ್ಕೆ ಒಳಪಡಲು ನಾನು  ನಿನ್ನನ್ನು ವಿನಂತಿಸಿಕೊಳ್ಳುತ್ತೇನೆ. ಯಾವತ್ತೂ ಯಾವ ರಹಸ್ಯವಾಗಿ ಕೆಲಸವನ್ನು ಮಾಡಬೇಡ ಅಥವಾ ಮುಚ್ಚಿಡಬೇಡ. ಒಂದು ವೇಳೆ ನೀನು ಮುಚ್ಚಿಡುವುದಕ್ಕೆ ಬಯಸುತ್ತಿದ್ದರೆ ನೀನು ಹೆದರಿದ್ದಿಯಾ ಅಂತಾ, ನಿನಗೆ ಹೆದರಿಕೆ ಎನ್ನುವುದು ಅಷ್ಟು ಒಳ್ಳೆಯದಲ್ಲ ಮತ್ತು ಯೋಗ್ಯವು ಅಲ್ಲ. ಒಂದು ವೇಳೆ ನೀನು ಧೈರ್ಯವಾಗಿದ್ದರೆ ಎಲ್ಲವು ಕೂಡ ನಿನ್ನನ್ನು ಹಿಂಬಾಲಿಸುತ್ತದೆ. 

ನಿನಗೆ ತಿಳಿದಿರುವವಂತೆ ಬಾಪೂಜಿಯವರ ನಾಯಕತ್ವದಲ್ಲಿನ ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ರೀತಿಯ ರಹಸ್ಯಕ್ಕೆ ಮತ್ತು ಮುಚ್ಚಿಡುವಿಕೆಗೆ ಸ್ಥಾನವಿಲ್ಲ. ನಾವೇನು ಮಾಡುತ್ತೇವೆ ಮತ್ತು ಹೇಳುತ್ತೇವೆ ಎನ್ನುವುದಕ್ಕೆ ಯಾವುದೇ ರೀತಿಯ ಹೆದರಿಕೆ ಇಲ್ಲ. ಹಗಲು ರಾತ್ರಿಗಳೆನ್ನದೆ ನಾವು ಕಾರ್ಯನಿರ್ವಹಿಸುತ್ತೇವೆ. ನಮ್ಮ ಖಾಸಗಿ ಬದುಕಿನಲ್ಲಿಯೂ ಕೂಡ ಸೂರ್ಯನೊಂದಿಗೆ ಸ್ನೇಹಿತರನ್ನಾಗಿ ಮಾಡಿಕೊಂಡು ಹಗಲಿನಲ್ಲಿಯೂ ಸಹ ಕಾರ್ಯನಿರ್ವಹಿಸುತ್ತೇವೆ. ಆ ಮೂಲಕ ಯಾವುದನ್ನು ರಹಸ್ಯವಾಗಿಡುವುದಿಲ್ಲ ಒಂದು ವೇಳೆ ನೀನು ಹಾಗೆ ಮಾಡಿದ್ದೆ ಆದಲ್ಲಿ ಯಾವುದೇ ಸಂಗತಿ ನಡೆದಾಗಲೂ ಕೂಡ ನೀನು ಬೆಳಕಿನ ಮಗುವಾಗಿ ಬೆಳೆಯುತ್ತಿಯ, ನಿರ್ಭಯ,ಶಾಂತ ಚಿತ್ತತೆಯಿಂದ ಇರುತ್ತೀಯ.

ನಾನು ನಿನಗೆ ಸುದೀರ್ಘ ಪತ್ರ ಬರೆದಿದ್ದೇನೆ. ಆದರೂ ನಾನು ನಿನಗೆ ಹೇಳುವುದು ಸಾಕಷ್ಟಿದೆ.  ಆದರೆ ಅದೆಲ್ಲವೂ ಪತ್ರದಲ್ಲಿ ಒಳಗೊಳ್ಳಲು ಹೇಗೆ ಸಾಧ್ಯ ? ಗುಡ್ ಬೈ ಪುಟ್ಟಾ,  ನೀನು ಭಾರತದ ಸೇವೆಯಲ್ಲಿ ದಿಟ್ಟ ಯೋಧಳಾಗಬಹುದು.

ನನ್ನ ಪ್ರೀತಿಯ ಶುಭ ಹಾರೈಕೆಗಳೊಂದಿಗೆ 

ನಿನ್ನ ಪ್ರೀತಿಯ ತಂದೆ
ಜವಾಹರಲಾಲ್ ನೆಹರು

 
 

Trending News