#LeopardDogFight : ಚಿರತೆಯೊಂದಿಗೆ ಕಾದಾಡಿ ಪ್ರಾಣ ಉಳಿಸಿಕೊಂಡ ಸಾಕು ನಾಯಿ

ಶ್ರವಣಬೆಳಗೊಳದ ವಿಂದ್ಯಗಿರಿ ತಪ್ಪಲಿನ ಹಿಂಭಾಗದಲ್ಲಿರುವ ನಾಗಯ್ಯನಕೊಪ್ಪಲು ಗ್ರಾಮದ, ಮಂಜೇಗೌಡ ಎಂಬುವವರ ಮನೆಯ ಬಳಿ  ಮಧ್ಯರಾತ್ರಿ ಚಿರತೆ (Leopard) ಯೊಂದು ಆಹಾರಕ್ಕಾಗಿ ಹುಡುಕಿಕೊಂಡು ಬಂದಿದೆ. ಮನೆಯ ಮುಂದೆ ಚಿರತೆ ಬಂದ ಕೂಡಲೇ ಅದರೊಂದಿಗೆ ಸಾಕುನಾಯಿ ಕಾದಾಟಕ್ಕಿಳಿದಿದೆ.

Written by - Yashaswini V | Last Updated : Mar 29, 2022, 02:24 PM IST
  • ಚಿರತೆ ಬಂದ ಕೂಡಲೇ ಚಿರತೆಯಿಂದಿಗೇ ಫೈಟಿಂಗ್ ಗೆ ಇಳಿದ ಸಾಕುನಾಯಿ
  • ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನಾಗಯ್ಯನಕೊಪ್ಪಲು ಗ್ರಾಮದಲ್ಲಿ ಘಟನೆ
  • ಶ್ರವಣಬೆಳಗೊಳದ ವಿಂದ್ಯಗಿರಿ ತಪ್ಪಲಿನ ಹಿಂಭಾಗದಲ್ಲಿರುವ ನಾಗಯ್ಯನ ಕೊಪ್ಪಲು
#LeopardDogFight : ಚಿರತೆಯೊಂದಿಗೆ ಕಾದಾಡಿ ಪ್ರಾಣ ಉಳಿಸಿಕೊಂಡ ಸಾಕು ನಾಯಿ  title=
Dog fight with leopard Video

ಹಾಸನ:  ಸಾಕು ನಾಯಿಯೊಂದು ಕಾಡಿನಿಂದ ನಾಡಿಗೆ ಬಂದ ಚಿರತೆ ಜೊತೆ ಸೆಣಸಾಡಿ ಪ್ರಾಣ ಉಳಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನಾಗಯ್ಯನಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೈ ಜುಮ್ ಎನಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಶ್ರವಣಬೆಳಗೊಳದ ವಿಂದ್ಯಗಿರಿ ತಪ್ಪಲಿನ ಹಿಂಭಾಗದಲ್ಲಿರುವ ನಾಗಯ್ಯನಕೊಪ್ಪಲು ಗ್ರಾಮದ, ಮಂಜೇಗೌಡ ಎಂಬುವವರ ಮನೆಯ ಬಳಿ  ಮಧ್ಯರಾತ್ರಿ ಚಿರತೆ (Leopard) ಯೊಂದು ಆಹಾರಕ್ಕಾಗಿ ಹುಡುಕಿಕೊಂಡು ಬಂದಿದೆ. ಮನೆಯ ಮುಂದೆ ಚಿರತೆ ಬಂದ ಕೂಡಲೇ ಅದರೊಂದಿಗೆ ಸಾಕುನಾಯಿ ಕಾದಾಟಕ್ಕಿಳಿದಿದೆ.

ಇದನ್ನೂ ಓದಿ- Watch Video: ರೈಲು ಪ್ರಯಾಣಿಕನ ಪಾಲಿಗೆ ಆಪತ್ಬಾಂಧವನಾಗಿ ಬಂದ ಪೊಲೀಸಪ್ಪ..!

ಸಾಕು ನಾಯಿ ಹಾಗೂ ಚಿರತೆಯ ಕಾದಾಟದ ಶಬ್ದ ಕೇಳಿ (Dog fight with leopard) ಮನೆಯಿಂದ ಹೊರಬಂದ ಮನೆ ಮಾಲೀಕ ಮಂಜೇಗೌಡ, ಪ್ರಾಣದ ಹಂಗು ತೊರೆದು ತಮ್ಮ ಹೆಗಲ ಮೇಲಿದ್ದ ಟವೆಲ್ ನಿಂದ ಚಿರತೆಯನ್ನು ಓಡಿಸುವ ಯತ್ನ ಮಾಡಿದ್ದಾರೆ. ಮಂಜೇಗೌಡ ಅವರು ಹೊರಗೆ ಬರುತ್ತಿದ್ದಂತೆ ಚಿರತೆ ಅಲ್ಲಿಂದ ಪರಾರಿಯಾಗಿದೆ.

ಇದನ್ನೂ ಓದಿ- Viral Video Of Holi: ಹೋಳಿ ಹಬ್ಬದ ದಿನ ನೀರಿನಿಂದ ತುಂಬಿದ ಬಲೂನ್ ತಾಕಿ ಆಟೋ ಪಲ್ಟಿ.. Video ನೋಡಿ

ಈ ಇಡೀ  ರೋಚಕ ದೃಶ್ಯ ಹೇಗಿದೆ, ನೀವೇ ನೋಡಿ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News